ರಾಣೆಬೆನ್ನೂರಲ್ಲಿ ವಿಜೃಂಭಿಸಿದ ಭಗವಾನ್ ಮೌನೇಶ್ವರ ಜಯಂತಿ
ರಾಣೆಬೆನ್ನೂರು 18: ತಾಲೂಕಿನಲ್ಲಿರುವ ಎಲ್ಲ ಸಮಾಜಗಳ ಅಭಿವೃದ್ಧಿಗೆ ನಾವು ಸದಾ ಮುಂದಾಗಿದ್ದೇವೆ, ಚುನಾವಣಾ ಪೂರ್ವದಲ್ಲಿ ಸಮುದಾಯಕ್ಕೆ ನೀಡಿದ ಭರವಸೆಯಂತೆ ವಿಶ್ವಕರ್ಮ ಸಮಾಜದ ಭವನ ನಿರ್ಮಾಣಕ್ಕೆ 25 ಲಕ್ಷ ರೂಗಳ ಅನುದಾನ ನೀಡಲಾಗಿದೆ ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು. ಅವರು ಶನಿವಾರ, ನಗರದಲ್ಲಿ ತಾಲೂಕ ವಿಶ್ವಕರ್ಮ ಸಮಾಜ, ಮೌನೇಶ್ವರ ಸಮಿತಿ ಮತ್ತು ಕಾಳಿಕಾ ಮಹಿಳಾ ಮಂಡಳ ಆಯೋಜಿಸಿದ್ದ ಭಗವಾನ್ ವಿಶ್ವಕರ್ಮ ಜಯಂತೋತ್ಸವ ಸಮಾರಂಭ ಉದ್ಘಾಟಿಸಿ, ಮಾತನಾಡಿದರು. ವಿಶ್ವಕರ್ಮ ಸಮುದಾಯ ಯಾವುದೇ ಜಾತಿ ಮತ ಭೇದ ಭಾವವಿಲ್ಲದೆ ಭಗವಾನ್ ಪ್ರಭು ಕರುಣಿಸಿರುವ ವೃತ್ತಿಯನ್ನು ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾಗಿಸುವ ವರಾಗಿದ್ದಾರೆ, ಸಮುದಾಯ ಕೆಲಸ ಬೇಡಿ ಯಾರ ಹತ್ತಿರವು ಹೋಗುವ ಅಗತ್ಯವಿಲ್ಲ ಎಲ್ಲರೂ ತಮ್ಮ ಹತ್ತಿರವೇ ಬರುತ್ತಾರೆ. ಸಮುದಾಯಕ್ಕೆ ಬಂದಿರುವ ದೈವದತ್ತ ಕೊಡುಗೆ ಇದಾಗಿದೆ ಎಂದರು. ಜೀವನ್ ಮುಕ್ತಾಲಯ ಕ್ಷೇತ್ರದ, ಹುಲಗೂರು ಜಗದ್ಗುರು ಮೌನೇಶ್ವರ ಮಠದ ಮೌನೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮೌನೇಶ್ವರ ಕಮಿಟಿಯ ಅಧ್ಯಕ್ಷ ಓಂಕಾರಾಚಾರ್ ಪಿ. ಅಕರ್ಾಚಾರಿ ಅ ವರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎನ್ ಡಬ್ಲ್ಯೂ ಕೆ, ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್ ನರಸಗೊಂಡರ, ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ್, ಸಮಾಜದ ಮುಖಂಡರಾದ, ದೇವೇಂದ್ರಪ್ಪ ಅಕರ್ಾಚಾರಿ, ಹೆ ಮಾಚಾರ ಬಡಿಗೇರ್, ರಾಘವೇಂದ್ರ, ವೀರಣ್ಣ ಅರ್ಕಚಾರಿ, ಚಂದ್ರು, ಕೃಷ್ಣಾಚಾರ್, ಕೆ. ಮೌನಲಿಂಗ, ಶ್ರೀಧರ, ಪ್ರಶಾಂತ, ದತ್ತಾತ್ರೇಯ, ಸಂತೋಷ ಮಾಯಾಚಾರಿ ಸೇರಿದಂತೆ, ಕಮಿಟಿಯ ಪದಾಧಿಕಾರಿಗಳು, ಸಮಾಜದ ಗಣ್ಯರು, ಮುಖಂಡರು ಉಪಸ್ಥಿತರಿದ್ದರು. ಪ್ರೇಮಾ ಅರ್ಕಚಾರಿ ಸಂಗಡಿಗರು, ಪ್ರಾರ್ಥಿಸಿದರು. ಮಾರ್ತಾಂಡಪ್ಪ ಕಮ್ಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬಡಿಗೇರ ನಿರೂಪಿಸಿ, ವಂದಿಸಿದರು