ಜಾನಪದ ಕಲೆಯಲ್ಲಿ ಜೀವಂತ ಸಾಹಿತ್ಯ: ಸುಂಕಪ್ಪ
ಬಳ್ಳಾರಿ19: ಜಾನಪದ ಕಲೆಯು ಗ್ರಾಮೀಣ ಪ್ರದೇಶದ ಸಾಹಿತ್ಯವಾಗಿದ್ದರೂ ಅದರಲ್ಲಿ ಜೀವಂತ ಸಾಹಿತ್ಯ, ಸಂಸ್ಕೃತಿಯ ಸೊಗಡು ಇದೆ. ಇಂತಹ ಕಲೆಯ ಮೂಲಕ ಹಲವಾರು ಕಲಾವಿದರು ಹೊರಹೊಮ್ಮಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಹಾಗೂ ಕನ್ನಡ ಉಪನ್ಯಾಸಕ ಕೆ.ಸುಂಕಪ್ಪ ಅವರು ತಿಳಿಸಿದರು.
ಅವರು ಶನಿವಾರದಂದು ಸಂಜೆ ಸಕರ್ಾರಿ (ಮಾಜಿ ಪುರಸಭೆ) ಪದವಿ ಪೂರ್ವ ಮಹಾವಿದ್ಯಾಲಯದಿಂದ ಕಾಕರ್ಲತೋಟ ಗ್ರಾಮದ ಹನುಮಾನ್ ನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನ ವಾಷರ್ಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಜಾನಪದ ಕಲೆಯ ಮಹತ್ವನ್ನು ಕುರಿತು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಬ್ಬ ಹರಿದಿನ, ಶ್ರಮದ ಸಂದರ್ಭ, ಹಂತಿ, ಸುಗ್ಗಿಯ ಸಂದರ್ಭ, ಕುಟ್ಟುವ ಬೀಸುವ ಸಂದರ್ಭದಲ್ಲಿ ಜನಪದ ಗೀತೆಗಳನ್ನು ಕಟ್ಟಿ ಜನಪದ ಮಹಿಳೆಯರು, ಪುರುಷರು ಹಾಡುತ್ತಾ ಕಾಲದಿಂದ ಕಾಲಕ್ಕೆ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇಂತಹ ಜನಪದ ಗೀತೆಗಳ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕಲ್ಲಪ್ಪ, ಗೌತಮ್, ಪರಿದಾ ಬೇಗಂ, ಮುಂತಾದವರು ಚಂದ್ರಣ್ಣ, ಅಜಿಂ ಬಾಷಾ, ಮುಂತಾದವರಿದ್ದರು.
ಇದೇ ವೇಳೆ ನಾಡೋಜ ಬೆಳಗಲ್ಲು ವೀರಣ್ಣನವರನ್ನು ಎನ್.ಎಸ್.ಎಸ್. ಅಧಿಕಾರಿ ಕೆ.ಟಿ.ಕುಮಾರಸ್ವಾಮಿ ಸನ್ಮಾನಿಸಿ ಗೌರವಿಸಿದರು. ನಂತರ ಸನ್ಮಾನಗೊಂಡು ಮಾತನಾಡಿದ ಬೆಳಗಲ್ಲು ವೀರಣ್ಣನವರು ವಿದ್ಯಾಥರ್ಿಗಳಿಗೆ ಉತ್ತಮ ಮಾರ್ಗದರ್ಶನ ಅವಶ್ಯ ಎಂದು ತಿಳಿಸಿದರು.
ನಂತರ ವಿದ್ಯಾಥರ್ಿ ಸಂದೀಪ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಾಯಾಜಾಲ ಕಾರ್ಯಕ್ರಮ ಜರುಗಿತು. ಶಿಕ್ಷಕರಾದ ಬಸೀರ್ ಅಹ್ಮದ್, ನಾಗರಾಜ್ ಇವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಎಂದು ಎನ್.ಎಸ್.ಎಸ್. ಅಧಿಕಾರಿ ಕುಮಾರಸ್ವಾಮಿ ಹೇಳಿದರು.