ರಾಜ್ಯ, ಅಂತರಾಜ್ಯಮಟ್ಟದ 2ನೇ ವಧು-ವರರ ನೇರ ಪರಿಚಯ ಸಮಾವೇಶ 25ರಂದು

ರಾಜ್ಯ, ಅಂತರಾಜ್ಯಮಟ್ಟದ 2ನೇ ವಧು-ವರರ ನೇರ ಪರಿಚಯ ಸಮಾವೇಶ 25ರಂದು

ಬಳ್ಳಾರಿ 21: ಜಿಲ್ಲಾ ಸವಿತ ಸಮಾಜ ಹಾಗೂ ಜಿಲ್ಲಾ ಸವಿತ ಸಮಾಜ ನೌಕರರ ಸಂಘ ರಾಯಚೂರು ಇವರ ಸಹಯೋಗದಲ್ಲಿ ರಾಜ್ಯ ಮತ್ತು ಅಂತರಾಜ್ಯಮಟ್ಟದ 2ನೇ ವಧು-ವರರ ನೇರ ಪರಿಚಯದ ಸಮಾವೇಶವನ್ನು ಡಿ.25ರಂದು ಬೆಂಗಳೂರಿನ ರಾಜಾಜೀನಗರದ ಡಾ|| ರಾಜಕುಮಾರ ರಸ್ತೆಯಲ್ಲಿರುವ "ತ್ರೀ ಸ್ಟಾರ್ ಔರಾಇನ್ ಹೋಟೆಲ್ನಲ್ಲಿ ಆಯೋಜಿಸಲಾಗಿದೆ ಎಂದು ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಮಾಜದ ರಾಯಚೂರು ಜಿಲ್ಲಾಧ್ಯಕ್ಷ ವಿಜಯ ಬಾಸ್ಕರ್ ಇಟಗಿ ಅವರು ಕಳೆದ ವರ್ಷ ರಾಯಚೂರು ನಗರದ ರಂಗಮಂದಿರದಲ್ಲಿ ಸವಿತ ಸಮಾಜದ ಪ್ರಥಮ ರಾಜ್ಯ ಮತ್ತು ಅಂತರಾಜ್ಯ ನೇರ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ 98 ವಧು-ವರರ ನೊಂದಣಿ ಮಾಡಲಾಗಿದ್ದು. ಅದರಲ್ಲಿ 22 ವಧು-ವರರು ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡಿದ್ದು ಯಶಸ್ವಿಯಾಗಿ ಜರುಗಿತ್ತು. ಅದೇ ರೀತಿ ಈ ವರ್ಷವು ಕೂಡಾ ಸಮಾಜದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ರಾಜ್ಯ ಮಟ್ಟದ ನಾಯಕರ ಒತ್ತಾಯ ಮೇರೆಗೆ ಈ ಬಾರಿ ಬೆಂಗಳೂರಿನಲ್ಲಿ ನೇರ ವಧು-ವರರ ಪರಿಚಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಈ ಬಾರಿ 143 ವಧು-ವರರು ಆನ್ ಲೈನ್ ಮೂಲಕ ನೊಂದಣಿ ಮಾಡಿದ್ದು. ಇದರಲ್ಲಿ 78 ವಧುಗಳು, 65 ವರಗಳು ಸೇರಿವೆ. ಅದರಲ್ಲಿ ವಿಧಿವೆಯವರು, ವಿಧರರು, ವಿಚ್ಛೇಧನಾ ಪಡೆದವರಿಗೂ ಈ ಬಾರಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಏಕೆಂದರೆ ನಮ್ಮ ಸಮಾಜವು ಆಥರ್ಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದು ಜಾಗೃತಿಗಾಗಿ ಶ್ರಮಿಸುತ್ತಿದ್ದೇವೆ ಎಂದರು. ಇದೇ ರೀತಿ ನೇರ ವಧು-ವರರ ಪರಿಚಯ ಕಾರ್ಯಕ್ರಮವು ಸಮಾಜದ ಅಭಿವೃದ್ದಿಯ ಹಾಗೂ ಪರಸ್ಪರ ಪರಿಚಯದ ದೃಷ್ಟಿಯಿಂದ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಯಾವುದೇ ಮದ್ಯವತರ್ಿಗೆ ಅವಕಾಶವಿಲ್ಲ ಎಂದು ನುಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ನಾಗರಾಜ ಎ.ಇ, ಉದ್ಘಾಟನೆಯನ್ನು ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ ರಾಜ್ಯದ ಬೆಂಗಳೂರಿನ ಸವಿತ ಸಮಾಜದ ಮುಖಂಡರು ನೆರವೇರಿಸುವರು, ಮುಖ್ಯ ಅಥಿತಿಯಾಗಿ ಅಶೋಕ ಗಸ್ತಿ, ವಿಜಯಬಾಸ್ಕರ್ ಇಟಗಿ, ಜಿಲ್ಲಾಧ್ಯಕ್ಷರು ಹಾಗೂ ಸಿಂಡಿಕೇಟ್ ಸದಸ್ಯರು ಗುಲ್ಬರ್ಗ ವಿಶ್ವವಿದ್ಯಾಲಯ, ಜೊತೆಗೆ ನೂತನ ವಿಧಾನ ಪರಿಷತ್ ಸದಸ್ಯರು, ನ್ಯಾಯಾಧೀಶರು ಲೋಕಸೇವ ಆಯೋಗದ ಸದಸ್ಯರು, ಹಾಗೂ ಸಮಾಜದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಈ ಸಮಾವೇಶದಲ್ಲಿ ವಧು-ವರರ ಜೊತೆಗೆ ಇಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ ಎಂದರು. ಆಗೆಯೇ ಬಳ್ಳಾರಿಯಿಂದ 8 ಜನ ವಧು-ವರರು ಆನ್ ಲೈನ್ ಮುಖಾಂತರ ಅಜರ್ಿಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ಇಬ್ಬರು ಇಂಜಿನೀಯರಿಂಗ್ ವಿದ್ಯಾಥರ್ಿಗಳು ಆತದ್ದಾರೆಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅಂತೆಯೇ ಬೆಳಗಾವಿಯಲ್ಲಿ ನಡೆದ ಅದಿವೇಶನದಲ್ಲಿ ನಮ್ಮ ಸಮಾಜದ ಮುಖಂಡರು ಹೋರಾಟ ನಡೆಸಿ ಸವಿತ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮ ಹಾಗೂ ಜಾತಿ ನಿಂದನೆ ಕಾಯ್ದೆಯನ್ನು ಅನುಷ್ಟಾನಗೊಳಿಸಬೇಕೆಂದು ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಕೇಳಿದ ಮತ್ತೊಂದು ಪ್ರಶ್ನೆಗೆ ಪ್ರತಿಕ್ರೀಯಿಸಿದರು. ಈ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಶರಣಪ್ಪ, ತಾಲೂಕು ಅಧ್ಯಕ್ಷ ಆರ್ ಶೇಖಣ್ಣ, ಜಿಲ್ಲಾ ಗೌರವಾಧ್ಯಕ್ಷ ಬಿ.ನಾಗೇಂದ್ರ, ತಾಲೂಕು ಗೌರವಾಧ್ಯಕ್ಷ ಎಸ್.ತಿಪ್ಪಣ್ಣ, ಸಂಘಟನಾ ಕಾರ್ಯದಶರ್ಿ ಎಸ್.ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಬಿ.ವೆಂಕಟೇಶಲು, ಖಜಾಂಚಿ ಬಿ.ಜಾನಕಿರಾಮ್, ಸಣ್ಣ ತಿಮ್ಮಪ್ಪ, ಸೇರಿದಂತೆ ಹಲವಾರು ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.


ಸುದ್ದಿ ಓದಿ