ಸಾಹಿತ್ಯ ಒಂದು ಮಾನಸಿಕ ಆಹಾರ: ಡಾ.ಜಿ.ವೆಂಕಟೇಶ್
ಲೋಕದರ್ಶನ ವರದಿ
ಬಳ್ಳಾರಿ 21:ಸಾಹಿತ್ಯ ಒಂದು ಮಾನಸಿಕ ಆಹಾರ. ಇಂದು ಎಲ್ಲವನ್ನೂ ಬೇಕೆನ್ನುವ ಮನಸ್ಸು ಸೃಜನಶೀಲ ಶಕ್ತಿಯನ್ನು ಕಳೆದುಕೊಂಡಿದೆ. ಇಂದಿನ ಯುವ ಪೀಳಿಗೆ ಜೀವಂತಿಕೆ ಇಲ್ಲದ ತಂತ್ರಜ್ಞಾನದೊಂದಿಗೆ ಕಾಲಕಳೆಯುತ್ತಿದೆ. ನೈಜ ವಸ್ತುಗಳೊಂದಿಗೆ ಮುಖಾಮುಖಿಯಾದಾಗ ಮಾತ್ರ ಭಾವ ಬೆಳೆಯುವುದು. ಮನುಷ್ಯನಿಗೆ ಮಾತ್ರ ಕಲ್ಪನೆ ಮತ್ತು ಭಾವನೆಗಳಿವೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಸಂತಜಾನ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಆಯೋಜಿಸಿದ್ದ ಕೊಟ್ಟೂರಿನ ಕೊಟ್ರೇಶ್ ಎಸ್.ಉಪ್ಪಾರ್ ಅವರ `ಉಪ್ಪಾರರ ಸಮಗ್ರ ವಚನಗಳು' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಂಪರೆಯನ್ನು ಅಥರ್ೈಸಿಕೊಂಡು ವಚನಕಾರರ, ದಾಸರ, ಜಾನಪದ ಹಾಡುಗಳ ಮೂಲಕವಾಗಿ ಭಾವಕೋಶ ವಿಸ್ತಾರವಾಗಬೇಕು. ಭಾವನಾಲೋಕ ಮತ್ತು ಕಲ್ಪನಾಲೋಕ ವಿಸ್ತಾರಗೊಳ್ಳದಿದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ. ಅನೇಕ ಅಸಂಗತ ಘಟನೆಗಳು ನಡೆಯಲು ಕಾರಣವಾಗುತ್ತವೆ. ಮಾನಸಿಕ ಜಗತ್ತು ವಿಸ್ತಾರವಾಗುವುದು ಪುಸ್ತಕದಿಂದ ಮಾತ್ರ. ಮನುಷ್ಯನಲ್ಲಿ ಚಿಂತನಾಶೀಲತೆಯನ್ನು ಬೆಳೆಸುವುದು ಸಾಹಿತ್ಯ. ಓದು ಪ್ರತಿವ್ಯಕ್ತಿಯ ಕೀಳಿರಿಮೆಯನ್ನು ಹೋಗಲಾಡಿಸುವುದು. ಇಂದಿನ ತಲೆಮಾರು ತನ್ನ ಭಿನ್ನ ನಡೆಯಿಂದ ಓದಿನಿಂದ ವಿಮುಖರಾಗಿರುವುದು ವಿಪಯರ್ಾಸ. ಮೊಬೈಲ್ ಬಿಡಿ ಪುಸ್ತಕ ಹಿಡಿ ಎನ್ನುವುದು ಇಂದಿನ ಯುವ ಸಮುದಾಯದ ಮಂತ್ರವಾಗಬೇಕು. ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ದಿಕ್ಕನ್ನು ತನ್ನ ವಿಚಾರಗಳಿಂದ ಬದಲಾಯಿಸಿತು. ಆಧುನಿಕ ವಚನಕಾರರು ತಮ್ಮ ವಚನದಲ್ಲಿ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ವಿಮಶರ್ಿಸುವುದು ಮಹತ್ವವಾದುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಟಿ.ಮಲ್ಲೇಶಪ್ಪ ಅವರು, ಗಡಿಭಾಗವಾದ ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಸಹೋದರಿ ಭಾಷೆಗಳು ರಾರಾಜಿಸುತ್ತಿದ್ದವು. ಇಂದು ಕನ್ನಡಿಗರ ಭಾಷಾ ಪ್ರೇಮದಿಂದ ಎಲ್ಲೆಡೆ ಕನ್ನಡಮಯವಾದ ವಾತಾವರಣವು ಬೆಳೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಭಾಗದಲ್ಲಿ ಇನ್ನೂ ಕನ್ನಡ ಸಾಹಿತ್ಯ ಬೆಳವಣಿಗೆ ಹೆಚ್ಚಿನ ರೀತಿಯಲ್ಲಿ ಆಗಬೇಕೆಂದರು.
ಕೃತಿಯ ಕುರಿತು ಮಾತನಾಡಿದ ದಿವಾಕರ ನಾರಾಯಣ ಅವರು, ಸರಳವಾದ ಭಾಷೆಯಲ್ಲಿರುವ ಈ ಕೃತಿಯು ಇಂದಿನ ವಾಸ್ತವಿಕ ವಿಚಾರಗಳನ್ನು ಪ್ರಸ್ತಾಪಿಸುತ್ತದೆ. ಪ್ರಸ್ತುತ ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಬಾಲ್ಯವಿವಾಹ, ಮೌಢ್ಯತೆ, ಪುರೋಹಿತಶಾಹಿಯ ವಿಡಂಬನೆ ಸಾಮಾಜಿಕ ವ್ಯವಸ್ಥೆಯನ್ನು ಜಾಗೃತಗೊಳಿಸುವ ಕೃತಿಯಾಗಿದೆ. ಆಧುನಿಕ ವಚನಕಾರರಾಗಿರುವ ಸಿದ್ದಯ್ಯ ಪುರಾಣಿಕ, ಎಸ್.ವಿ.ರಂಗಣ್ಣ, ಎಸ್.ವಿ.ಪರಮೇಶ್ವರಭಟ್ಟರ ಜಾಡಿನಲ್ಲಿ ವಚನಗಳನ್ನು ಕೊಟ್ರೇಶ್ ಎಸ್.ಉಪ್ಪಾರ್ ಅವರು ರಚಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ಮಾತನಾಡಿದರು. ಕೃತಿಯ ಲೇಖಕ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ ತಾವು ಕನ್ನಡ ಸಾಹಿತ್ಯದಲ್ಲಿ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ವಚನ ಸಾಹಿತ್ಯ ಪ್ರಕಾರವು ತಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಈ ಹಿನ್ನೆಲೆಯಲ್ಲಿ ನೂರಾರು ವಚನಗಳನ್ನು ರಚಿಸಲು ಸಾಧ್ಯವಾಯಿತು ಎಂದರು.
ಮುಖ್ಯ ಅತಿಥಿಗಳಾಗಿ ಸಂತಜಾನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಣ್ಣ ಶಿವರಾಮ, ಹಾಸನದ ಸಂಸ್ಕೃತಿ ಚಿಂತಕರಾದ ಜಾವಗಲ್ ಪ್ರಸನ್ನಕುಮಾರ್, ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಸಿ.ಎಚ್.ಎಂ.ಚನ್ನವೀರಸ್ವಾಮಿ, ಪ್ರೌಢಶಾಲಾ ಸಹ-ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಸ್.ಪರಶುರಾಮಪ್ಪ, ಮರಿಯಮ್ಮನಹಳ್ಳಿ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಟಿ.ಮಂಜುನಾಥಸ್ವಾಮಿ, ಕ.ಸಾ.ಪ. ಉಪಾಧ್ಯಕ್ಷ ರಮೇಶ್ಗೌಡ ಪಾಟೀಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ವಿದ್ಯಾಥರ್ಿನಿಯರು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಉಪನ್ಯಾಸಕಿ ಚಂದ್ರಕಲಾ ನಿರೂಪಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಸ್ವಾಗತಿಸಿದರು. ಕಾರ್ಯದಶರ್ಿ ಕೋಳೂರು ಚಂದ್ರಶೇಖರಗೌಡ ವಂದಿಸಿದರು.