ಹೊಸಪೇಟೆ

ವಿದ್ಯಾರ್ಥಿಗಳು ಸ್ವಯಂ ಉದ್ಯೋಗದತ್ತ ಹೆಜ್ಜೆ ಹಾಕಲಿ: ಶಿವಶಂಕರ ಕೆ.ಬಿ.ಹೆಚ್.

ವಿದ್ಯಾರ್ಥಿಗಳು ಸ್ವಯಂ ಉದ್ಯೋಗದತ್ತ ಹೆಜ್ಜೆ ಹಾಕಲಿ: ಶಿವಶಂಕರ ಕೆ.ಬಿ.ಹೆಚ್.

ಹೊಸಪೇಟೆ 10: ವಿದ್ಯಾರ್ಥಿಗಳು ಸರಕಾರಿ ನೌಕರಿಗೆ ಆದ್ಯತೆ ಕೊಡದೆ ಸ್ವಯಂ ಉದ್ಯೋಗದತ್ತ ಮನಸು ಮಾಡಲಿ ಎಂದು  ಮುನಿರಾಬಾದ್ನ ತುಂಗಭದ್ರ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ.ಕೆ.ಬಿ.ಹೆಚ್. ಅಭಿಪ್ರಾಯಪಟ್ಟರು. 

ಅವರು ದಿ. 8 ಶನಿವಾರದಂದು ಸಂಜೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಿಂಚನ-2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 

ಪ್ರಸ್ತುತ  ಕೈಗಾರಿಕಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಅರಿತು ವೃತ್ತಿಪರ ಕೌಶಲ್ಯದ ಕಡೆಗೆ ಮಹತ್ವವನ್ನು ನೀಡಿ ಯಾವುದೇ ರೀತಿಯ ಸವಾಲುಗಳನ್ನು  ಕೈಚಲ್ಲದೆ ಎದುರಿಸಲು ಸಿದ್ಧರಾಗಿರಬೇಕು. ಹಿಂದುಳಿದ ಪ್ರದೇಶದಲ್ಲಿ ವೃತ್ತಿಪರ ಶಿಕ್ಷಣದಲ್ಲಿ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶವನ್ನು ವೈಜ್ಞಾನಿಕ ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕುತ್ತಾ ವಿದ್ಯಾರ್ಥಿಗಳ ಕೌಶಲ್ಯ ರೂಪಿತ ಸ್ವಯಂ ಉದ್ಯೋಗ ಮಾಡುವಲ್ಲಿ ಹೆಜ್ಜೆ ಹಾಕಬೇಕು ಎಂದು  ಹೇಳಿದರು. 

ಎಂ.ಎಸ್.ಪಿ.ಲ್. ಜನರಲ್ ಮ್ಯಾನೇಜರ್ (ಸಿ.ಎಸ್.ಆರ್) ಎಚ್.ಕೆ.ರಮೇಶ್ ಸಮಾರಂಭದಲ್ಲಿ ಆರು ವಿಭಾಗದ  ಪ್ರತಿಭಾವಂತ ಟಾಪರ್ಸ್ ಗಳಾದ ಮ್ಯೆಕಾನಿಕಲ್ ವಿಭಾಗದ ಸಾಯಿನಾಥ ಬಿ.ಪಿ., ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಕೆ.ಸುಪ್ರಿಯ, ಗಣಕಯಂತ್ರ ವಿಭಾಗದ ಬಿಂದು ದಿವ್ಯ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಾಹಿತ್ಯ. ಬಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವಿಸ್ಮಯ ಕೆ., ಎಂ.ಬಿ.ಎ. ವಿಭಾಗದ ತನುಷ ಎ.  ಎಂಬ ವಿದ್ಯಾರ್ಥಿಗಳಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಪ್ರಾಯೋಜಿತ ಚಿನ್ನದ ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು. 

ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಸ್ತುತಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎಂ.ಗುರುಸಿದ್ದಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ ಕಾಲೇಜಿಗೆ ಕೀರ್ತಿ ಮತ್ತು ಘನತೆ ತರುವಲ್ಲಿ ನಿಮ್ಮ ಪಾತ್ರ ತುಂಬ ದೊಡ್ಡದು ಮತ್ತು ನಿಮ್ಮನ್ನು ಸಮಾಜ ಗುರುತಿಸಿ ಗೌರವಿಸುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ವೀ.ವಿ. ಸಂಘದ ವತಿಯಿಂದ ಎಲ್ಲಾ ವಿಭಾಗದ ಅತ್ಯಂತ ಹೆಚ್ಚು ಶ್ರೇಣಿಯಲ್ಲಿ ಉತ್ತೀರ್ಣಗೊಂಡ 6 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ಮೊತ್ತದ ನಗದು ಬಹುಮಾನವನ್ನು ಹಾಗೂ ಇತರ ದತ್ತಿ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಡಾಕ್ಟರೇಟ್ ಪಡೆದ ಕಾಲೇಜಿನ ಇಬ್ಬರು ಉಪನ್ಯಾಸಕರಾದ ಡಾ. ಸಿಂಧು ಆರ್ ಹಾಗೂ ಡಾ. ಸಂಗಮೇಶ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. 

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ಆಡಳಿತ ಮಂಡಳಿಯ ಸದಸ್ಯರುಗಳು, ವೀ.ವಿ. ಸಂಘದ ಕಾರ್ಯಕಾರಣಿ ಮಂಡಳಿಯ ಸದಸ್ಯರುಗಳು ಹಾಗೂ ಅಜೀವ ಸದಸ್ಯರುಗಳು, ಉಪ ಪ್ರಾಂಶುಪಾಲ ಪ್ರೊ.ಪಾರ್ವತಿ ಕಡ್ಲಿ, ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಸಂಚಾಲಕ ಡಾ. ಶರಣಬಸಮ್ಮ ಸ್ವಾಗತಿಸಿದರು. ಪ್ರೊ. ಶಮಿತಾ ಎಚ್.ಎಂ  ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. 

ಪ್ರೊ. ರವಿಕುಮಾರ್  ಎಸ್.ಪಿ  ಹಾಗೂ ಪ್ರೊ. ವೀಣಾ  ನಿರೂಪಿಸಿದರು. ಶ್ರಾವಣಿ ಮತ್ತು ಸಂಗಡಿಗರು  ಪ್ರಾರ್ಥನೆ ಗೀತೆ ಹಾಡಿದರು. ಡಾ.ಶಿವಕೇಶವ ಕುಮಾರ್ ವಂದಿಸಿದರು. 

ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಸಾವಿರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ