ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಹಂಪಿ ಅಭಿವೃದ್ಧಿಯಾಗಲಿ: ಡಾ. ಎಸ್. ರಾಜಶೇಖರ
ಹಂಪಿ 12: ಪ್ರವಾಸೋದ್ಯಮ ಎಂದರೆ ಕೇವಲ ಲಾಭಗಳಿಸುವ ಕೇಂದ್ರವಲ್ಲ, ಸ್ಥಳೀಯ ಜನಸಾಮಾನ್ಯರ ಬದುಕು. ಇದನ್ನು ಸರ್ಕಾರಗಳು ಸೂಕ್ಷ್ಮವಾಗಿ ಅರಿತುಕೊಂಡು ಹಂಪಿಯನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ಹಂಪಿ ಪರಂಪರೆಯು ವಿಶ್ವದರ್ಜೆಗೇರುವುದರಲ್ಲಿ ಎರಡು ಮಾತಿಲ್ಲ ಎಂದು ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್. ರಾಜಶೇಖರ್ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿ-20 ಶೃಂಗಸಭೆಯ ಪ್ರಯುಕ್ತ ಹಂಪಿ ಪರಂಪರೆ ವಿಶ್ವಶ್ರೇಣಿಗೇರಿಸುವ ಸವಾಲುಗಳು ಎನ್ನುವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಾ, ಹಂಪಿ ಕೇವಲ ಸಾಂಸ್ಕೃತಿಕ ನಗರವಲ್ಲ, ದೇಶದ ಶಕ್ತಿ ಕೇಂದ್ರವಾಗಿತ್ತು. ಪ್ರಮುಖವಾಗಿ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಕರ್ನಾಟಕ, ಆಂದ್ರಪ್ರದೇಶ ಹಾಗೂ ತಮಿಳುನಾಡಿನವರೆಗೂ ವಿಜಯನಗರ ಸಾಮ್ರಾಜ್ಯ ವಿಸ್ತಾರಗೊಂಡಿತ್ತು. ಯಾವುದೇ ಪ್ರದೇಶಗಳಿಗೆ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳನ್ನು ತಾರತಮ್ಯ ಮಾಡದೇ ತ್ರಿವಳಿ ಭಾಷೆಗಳಲ್ಲಿ ಶಿಲಾಶಾಸನಗಳನ್ನು ಬರೆಸುತ್ತಿದ್ದರು. ಸರ್ಕಾರಗಳು ಸರ್ವಾಧಿಕಾರಿ ಧೋರಣೆ ತೊರೆದು ಸ್ಥಳೀಯ ಜನಸಾಮಾನ್ಯರ ಸಮಸ್ಯೆ ಮತ್ತು ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸ್ಥಳೀಯರ ಸಹಭಾಗಿತ್ವದಲ್ಲಿ ಹಂಪಿಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಹಂಪಿಯ ಬಗ್ಗೆ ಜನಸಾಮಾನ್ಯರು ತಮ್ಮದೆಂಬ ಭಾವನಾತ್ಮಕ ಸಂಬಂಧವನ್ನು ಹೊಂದಿದಾಗ ಹಂಪಿ ಪರಂಪರೆ ವಿಶ್ವದರ್ಜೆಗೇರುವಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದರು.
ಈ ವೇಳೆ ಸಂವಾದದಲ್ಲಿ ಮಾತನಾಡಿದ ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ.ಚಲುವರಾಜು ಅವರು ಹಂಪಿಯು ಭೌಗೋಳಿಕ, ಪ್ರಾಗಿತಿಹಾಸ, ಪ್ರವಾಸೋದ್ಯಮ, ನದಿಪರಿಸರ ಹೀಗೆ ಹಲವಾರು ಆಯಾಮಗಳಲ್ಲಿ ವಿಶ್ವದಜರ್ೆಗೇರುವ ಅರ್ಹತೆ ಹೊಂದಿದ್ದು, ಹಂಪಿಯ ಸಂಸ್ಕೃತಿ ಪಸರಿಸುವಲ್ಲಿ ಕನ್ನಡ ವಿಶ್ವವಿದ್ಯಾಲಯದ ಪಾತ್ರ ದೊಡ್ಡದು. ಹಂಪಿಯನ್ನು ಕೇವಲ ಸ್ಮಾರಕಗಳ ಮೂಲಕ ಕಟ್ಟಿಕೊಡದೇ ಮಾನವ ಸಂಬಂಧ ಮತ್ತು ಸಮುದಾಯ ಸಂಬಂಧಗಳ ಸ್ಪರ್ಶವನ್ನು ನೀಡಬೇಕಿರುವುದು ಇಂದಿನ ಅಗತ್ಯ. ಹಂಪಿ ಪರಂಪರೆ ಕುರಿತಂತೆ ಅಧ್ಯಯನ ಕೇಂದ್ರವನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಆರಂಭಿಸಿದರೆ ಯುವ ಸಂಶೋಧಕರಿಗೆ ಅನೇಕ ಮಹತ್ವವಾದ ವಿಷಯ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಈ ಸಂವಾದದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನದ ವಿಭಾಗದ ಪ್ರಾಧ್ಯಾಪಕರಾದ ಡಾ.ರಮೇಶ ನಾಯಕ ಅವರು ಮಾತನಾಡುತ್ತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಂಪಿಯಲ್ಲಿನ ಸ್ಮಾರಕಗಳನ್ನು ಅಭಿವೃದ್ದಿ ಪಡಿಸಬೇಕು. ಸುಸ್ಥಿರ ಅಭಿವೃದ್ದಿಗೆ ಸಾಂಸ್ಕೃತಿಕ ನೆಲೆಯು ಮುಖ್ಯ. ಹಂಪಿ ಪರಂಪರೆಯನ್ನು ವಿಶ್ವಶ್ರೇಣಿಗೇರಿಸುವಲ್ಲಿ ಸಕರ್ಾರದ ಸಹಕಾರದೊಂದಿಗೆ ಸ್ಥಳೀಯರ ಸಹಭಾಗಿತ್ವ ತುಂಬಾ ಮುಖ್ಯ ಎಂದು ತಿಳಿಸಿದರು.
ಸಂವಾದದಲ್ಲಿ ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಅವರು ಮಾತನಾಡುತ್ತ ಪಾರಂಪರಿಕ ತಾಣಗಳ ಬಗ್ಗೆ ಮಾರ್ಗದಶರ್ಿಗಳಿಗೆ ಪದವಿ ನೀಡಿ ಸಕರ್ಾರಿ ನೌಕರರನ್ನಾಗಿಸಬೇಕು. ಮೊಬೈಲ್ ನೆಟ್ವಕರ್್ಗಳ ಸಮಸ್ಯೆ ಬಗೆಹರಿಸುವುದರ ಜೊತೆಗೆ ವೈಫೈ ಸೌಲಭ್ಯವನ್ನು ಒದಗಿಸಲು ಗಮನಹರಿಸಬೇಕು ಎಂದರು.
ಹಂಪಿಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಡಾ. ಆರ್. ಮಂಜನಾಯ್ಕ ಅವರು ಮಾತನಾಡುತ್ತ ಇನ್ನು ಹಲವು ಕಡೆಗಳಲ್ಲಿ ಉತ್ಖನನ ಕಾರ್ಯ ಬಾಕಿ ಇದೆ. ಹಂಪಿ ಸುತ್ತಲಿನ ಕೃಷಿ ಜಮೀನುಗಳಲ್ಲಿ ಸ್ಮಾರಕಗಳಿದ್ದರೂ ಕೂಡ ಕೃಷಿ ಚಟುವಟಿಕೆಗೆ ಯಾವುದೇ ನಿಬರ್ಂಧ ಹೇರಿಲ್ಲ. ಸ್ಥಳೀಯರು ಸ್ಮಾರಕಗಳ ರಕ್ಷಣೆ ಮಾಡಲು ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಹಂಪಿಯು ಜೀವಂತ ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಸ್ಮಾರಕಗಳ ಬಗ್ಗೆ ತಿಳಿದುಕೊಳ್ಳಲು ಜಿ-20 ಒಳ್ಳೆಯ ಅವಕಾಶ ನೀಡಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಂಪಿ ಅಭಿವೃದ್ಧಿಯಿಂದ ವಂಚಿತವಾಗಿದೆ. ಪಾರಂಪರಿಕ ತಾಣಗಳ ಬದಲು ರೆಸಾರ್ಟ್ ತಾಣವಾಗಿ ಮಾಪರ್ಾಡಾಗುವುದರಿಂದ ಪರಂಪರೆ ಉಳಿಯಲು ಸಾಧ್ಯವಿಲ್ಲ. ಹಂಪಿಯು ಹಾಳಾದ ನಂತರವೂ ಸ್ಥಳಿಯರು ಅದನ್ನು ಉಳಿಸಲು ಶ್ರಮಪಟ್ಟಿದ್ದಾರೆ. ಅಂತಹವರನ್ನು ಅಲ್ಲಿಂದ ಖಾಲಿ ಮಾಡಿಸುವುದು ಸರಿಯಲ್ಲ. ಪರಂಪರೆಯನ್ನು ಆಧುನಿಕ ಜಗತ್ತಿಗೆ ತಲುಪಿಸುವುದರಲ್ಲಿ ನಾವು ಎಡುವುತ್ತಿದ್ದೇವೆ. ಸರ್ಕಾರದ ಇಲಾಖೆಗಳು ಕಾನೂನು ನಿರ್ಬಂಧಗಳನ್ನು ಹೇರಲು ನಮ್ಮ ತಪ್ಪುಗಳೇ ಕಾರಣ ಆದ್ದರಿಂದ ಹಂಪಿಯ ಮಹತ್ವ ತಿಳಿದುಕೊಳ್ಳುವುದರೊಂದಿಗೆ ಸ್ಮಾರಕದ ಪಾವಿತ್ರತೆ ವಿಶ್ವಕ್ಕೆ ಗೊತ್ತಾಗುವ ಹಾಗೇ ನಾವು ವರ್ತಿಸಬೇಕು ಎಂದರು.
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ ಬಡಿಗೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಾಪಕ ಕೆ. ಪದ್ಮಾವತಿ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವೈ. ಸೋಮಶೇಖರ್ ವಂದಿಸಿದರು.
ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು