ಬಂದ್ ಮಾಡಿ ಜನ ಜೀವನ ಕೆಡಿಸುವವರ ವಿರುದ್ಧ ಕಾನೂನು ಕ್ರಮ: ಗೃಹ ಸಚಿವರ ಎಚ್ಚರಿಕೆ
ಕಾರವಾರ 04: ಬಂದ್ ಮಾಡಿ ಜನಜೀವನ ಕೆಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು. ಕಾರವಾರದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಪರಿಶೀಲಿಸಲು ಆಗಮಿಸಿದ ವೇಳೆ ಬಿಜೆಪಿ ಶಾಸಕರನ್ನು ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಬಂದ್ ಮಾಡಿ ಜನರ ಬದುಕು ಅಸ್ತವ್ಯಸ್ತ ಮಾಡುವುದು ಸರಿಯಲ್ಲ. ಯಾರಾದರು ಒತ್ತಾಯದಿಂದ ಬಂದ್ ಮಾಡಿಸಿದ್ರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಎಂದು ಗೃಹ ಸಚಿವರು ಗುಡುಗಿದರು. ಒತ್ತಾಯ ಪೂರ್ವಕ ಬಂದ್ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋಟರ್್ ಆದೇಶ ಇದೆ. ಬಂದ್ ಮಾಡಿ ಜನಜೀವನ ಅಸ್ತವ್ಯಸ್ತ ಮಾಡುವುದು ಸರಿಯಲ್ಲ. ಇದರಿಂದ ವ್ಯಾಪಾರ-ವಹಿವಾಟು, ಅನಾರೋಗ್ಯ ಪೀಡಿತರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಈಗಲೂ ಕೂಡ ಬಂದ್ ವಾಪಸ್ ಪಡೆಯಲು ಮನವಿ ಮಾಡುತ್ತೇನೆ. ಪ್ರತಿಭಟನೆ ಮಾಡಲು ಹಲವು ರೀತಿಯಲ್ಲಿ ಅವಕಾಶಗಳಿವೆ. ಬಂದ್ ವೇಳೆ ಸಕರ್ಾರಿ ಕಚೇರಿ, ಬಸ್ ಓಡಾಟ, ಎಂದಿನಂತೆ ಇರುತ್ತದೆ. ಹಾಗಾಗಿ ಒತ್ತಾಯದಿಂದ ಬಂದ್ ಮಾಡಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಪರ ಸಂಘಟನೆಗಳಿಗೆ ಎಚ್ಚರ ನೀಡಿದ್ದಾರೆ.
ಇನ್ನೂ ಹೊಸ ವಷರ್ಾಚರಣೆ ಸಲುವಾಗಿ ಈಗಾಗಲೇ ಹಲವು ಸಲಹೆ ಸೂಚನೆಗಳು ಬಂದಿವೆ. ಮುಖ್ಯಂಮಂತ್ರಿಗಳು ಎರಡು ದಿನದಲ್ಲಿ ಸಭೆ ಕರೆದು ಸೂಕ್ತ ತೀಮರ್ಾನ ತೆಗೆದುಕೊಳ್ಳಲಿದ್ದಾರೆ ಎಂದು ನುಡಿದರು. ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ ಅಸಮಧಾನ ಹೊರ ಹಾಕುತ್ತಿರುವ ಬಗ್ಗೆ ಕೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಈ ವೇಳೆ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ರಾಜ್ಯ ಮೀನುಗಾರ ಪ್ರಕೋಷ್ಠದ ಸಹ ಸಂಚಾಲಕ ಗಣಪತಿ ಉಳ್ವೇಕರ, ರಾಜೇಶ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.