ರಾಣೆಬೆನ್ನೂರ

ಕುಂಟ ಕೋಣ ಮೂಕ ಜಾಣ ನಾಟಕ ಪ್ರದರ್ಶನ ನಾಟಕಗಳು ಮನೋವಿಕಾಸಕ್ಕೆ ಸಹಕಾರಿ

ಕುಂಟ ಕೋಣ ಮೂಕ ಜಾಣ ನಾಟಕ ಪ್ರದರ್ಶನ ನಾಟಕಗಳು ಮನೋವಿಕಾಸಕ್ಕೆ ಸಹಕಾರಿ

ಲೋಕದರ್ಶನ ವರದಿ

ರಾಣೆಬೆನ್ನೂರು 05:  ನಾಟಕಗಳು ಮಾನವನ ಬದುಕಿನ ನೈಜ ಘಟನೆಗಳನ್ನು ತಿಳಿಸುವ ಬಹು ಮಾಧ್ಯಮವಾಗಿದೆ ಎಂದು ಶಾಶಕ ಅರುಣ್ ಕುಮಾರ್ ಪೂಜಾರ್ ಹೇಳಿದರು. ಅವರು ಕರ್ನಾಟಕ  ಸಂಘದ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ, ಆಯೋಜನೆಗೊಂಡಿರುವ, ನಾಡಹಬ್ಬ  ಕಾರ್ಯಕ್ರಮದಲ್ಲಿ, ದರ್ಶನ ಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ, ರಾಜಣ್ಣ ಜೇವಗರ್ಿ ವಿರಚಿತ " ಕುಂಟ ಕೋಣ ಮೂಕ ಜಾಣ "ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. 

ಆಧುನಿಕ ಮಾಧ್ಯಮದ ಪ್ರಭಾವದಿಂದಾಗಿ ಇಂದು ನಮ್ಮ ಜನಪದ ಸಂಸ್ಕೃತಿಯ ಅಡಿಯಲ್ಲಿ  ಜನ ಜನಿತವಾದ ನಾಟಕಗಳು ನೇಪಥ್ಯಕ್ಕೆ ಸರಿಯುತ್ತಿರುವುದು ವಿಷಾದಕರ ಸಂಗತಿ ಎಂದ ಅವರು, ನಾಟಕ ನೈಜ ಮತ್ತು ಜೀವಂತ ಮಾಧ್ಯಮವಾಗಿದೆ, ಎಂದಿಗೂ ಅಂತ್ಯವೆಂಬುದಿಲ್ಲ, ಕಲೆ ಮತ್ತು ಕಲಾವಿದರ  ಉಳಿವಿಗೆ  ಇಂದು, ಜನರ ಪ್ರೋತ್ಸಾಹ, ಸಹಕಾರ ಅಗತ್ಯವಿದೆ ಎಂದರು. ಕರ್ನಾಟಕ  ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ್ ನರಸ ಗೊಂಡರ, ಪ್ರಕಾಶ ಪೂಜಾರ, ಪರಮೇಶಪ್ಪ ಗೂಳಣ್ಣನವರ, ಭಾರತಿ  ಜಂಬಿಗಿ, ಪಿ.ಎಸ್. ಮುದಗಲ್, ಮಂಜುನಾಥಗೌಡ ಶಿವಣ್ಣನವರ್, ಮತ್ತಿತರ ಗಣ್ಯರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಂತರ ನಡೆದ ಯಶೋಧ ಗುಡಗುಡಿ ತಂಡದವರು ಕುಂಟ ಕೋಣ ಮೂಕ ಜಾಣ, ಮತ್ತು ಕಲಾವಿದ ಹನುಮಂತ ಲಮಾಣಿ ತಂಡದವರ ಸುಗಮ ಸಂಗೀತ ಕಾರ್ಯಕ್ರಮ ನೆರೆದ ಸಾವಿರಾರು ಪ್ರೇಕ್ಷಕರ, ಮನರಂಜಿಸಿದವು. ಕಾರ್ಯಕ್ರಮದ ಯಶಸ್ವಿಗೆ ಕನರ್ಾಟಕ ಸಂಘ ಶ್ರೀ ಅನುಪಲ್ಲವಿ ಸಂಗೀತ ಕಲಾ ಸಂಸ್ಥೆಯ ರುದ್ರೇಶ್ ಬಡಿಗೇರ್, ಗಣೇಶ್ ಗುಡಗುಡಿ ಅವರು  ಸಹಯೋಗ ನೀಡಿದ್ದವು. 

ಸುದ್ದಿ ಓದಿ