ಕಾರವಾರ

ಗ್ರಾಪಂ ಚುನಾವಣೆಗೂ ಕೋವಿಡ್-19 ನಿಯಮ ಪಾಲನೆ ಕಡ್ಡಾಯ

ಗ್ರಾಪಂ ಚುನಾವಣೆಗೂ ಕೋವಿಡ್-19 ನಿಯಮ ಪಾಲನೆ  ಕಡ್ಡಾಯ

ಕಾರವಾರ 11:  ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಗ್ರಾಮ ಪಂಚಾಯತಿಗಳ 2ನೇ ಹಂತದ ಸಾರ್ವತ್ರಿಕ ಚುನಾವಣೆಯ ಅಧಿಸೂಚನೆ ಪ್ರಕಟಿಸಲಾಗಿದ್ದು, ಡಿಸೆಂಬರ್ 11 , ಶುಕ್ರವಾರದಿಂದಲೇ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರಿಶ್ಕುಮಾರ್  ಹೇಳಿದರು. 

ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ 2ನೇ ಹಂತದ ಅಧಿಸೂಚನೆಯ ಕುರಿತು ಶುಕ್ರವಾರ  ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಈ 2ನೇ ಹಂತದಲ್ಲಿ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ 126 ಗ್ರಾಮ ಪಂಚಾಯತಿಗಳಿಗೆ ಒಟ್ಟು 665 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಹೇಳಿದರು.

2ನೇ ಹಂತದ  ಚುನಾವಣೆಗಾಗಿ ಡಿ. 11 ಶುಕ್ರವಾರದಂದು ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಡಿ. 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.  ಡಿ. 17 ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದರೆ ಡಿ. 19 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.  ಡಿ. 27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಘಂಟೆಯವರಗೆ ಮತದಾನ ನಡೆಯಲಿದ್ದು ಡಿ. 30 ರಂದು ಆಯಾ ತಾಲೂಕ ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದು ಎಂದರು.

ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೂ ಸಹ ಎಸ್ಓಪಿ ಹೊರಡಿಸಿ ಮಾರ್ಗಸೂಚಿ ಅನುಸರಿಸಲು ಕಡ್ಡಾಯಗೊಳಿಸಿರುತ್ತದೆ. ಹೀಗಾಗಿ ಅಭ್ಯಥರ್ಿಗಳು ಕೇವಲ ಐದು ಜನ ಬೆಂಬಲಿಗರೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಚುನಾವಣೆಯ ಪ್ರಚಾರ ಕೈಗೊಳ್ಳಬೇಕು. ಕೋವಿಡ್-19 ಸೊಂಕಿತ ಮತದಾರರು ಸಹ ಪಿಪಿಇ ಕಿಟ್ ಧರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸುವ ಅಭ್ಯಥರ್ಿಗಳು ಸದಚಾರ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಅಲ್ಲದೇ ಯಾವುದೇ ಅಭ್ಯಥರ್ಿಯು ಸಮಾಜ  ಅಥವಾ ಸಾಮಾಜಿಕ ಜಾಲತಣಗಳಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳ ಮಧ್ಯೆ ಅಥವಾ ಮತೀಯ ಸಮೂಹದ  ಮಧ್ಯೆ  ವೈಮನಸತ್ವವನ್ನು ಕೆರಳಿಸುವ ಅಥವಾ ಪರಸ್ಪರ ದ್ವೇಷ ಹುಟ್ಟಿಸುವ ಯವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ಜೊತೆಗೆ ಬೇರೆ ಅಭ್ಯಥರ್ಿಯ ಖಾಸಗಿ ನಡತೆ ಅಥವಾ ಶೀಲಗಳ ಬಗ್ಗೆ ಸುದ್ದಿಯನ್ನು ಪ್ರಚಾರ ಮಾಡತಕ್ಕದ್ದಲ್ಲ ಎಂದರು. ಧಾಮರ್ಿಕ ಕೇಂದ್ರಗಳನ್ನು, ಶಾಲೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ. ಧಾಮರ್ಿಕ ವ್ಯಕ್ತಿಗಳನ್ನು, ಧಾಮರ್ಿಕ ಚಿಹ್ನೆಗಳನ್ನು ಸಹ ಬಳಸಿ ಪ್ರಚಾರ ಮಾಡಿದರೆ ಚುನಾವಣಾ ಆಕ್ರಮದಲ್ಲಿ ಬರುತ್ತದೆ. ಚುನಾವಣಾ ವೆಚ್ಚಕ್ಕೆ ಮಿತಿಯಿಲ್ಲವಾದರೂ, ಅಭ್ಯಥರ್ಿ ಪ್ರತಿದಿನ ಮಾಡಿದ ಚುನಾವಣಾ ವೆಚ್ಚವನ್ನು ಚುನಾವಣಾ ಅಧಿಕಾರಿಗೆ ಲೆಕ್ಕ ಕೊಡಬೇಕು. ಹಾಗೂ ಯಾರದೋ ಮನೆಯ ಅನುಮತಿ ಇಲ್ಲದೆ ಅವರ ಮನೆಯ ಗೋಡೆಗಳಿಗೆ ಚುನಾವಣಾ ಪ್ರಚಾರದ ಬ್ಯಾನರ್, ಬಂಟಿಂಗ್ಸ ಹಚ್ಚುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. 

ಅಭ್ಯಥರ್ಿಗಳು ಮತಗಟ್ಟೆಯಿಂದ 100 ಮೀಟರ್ಗಳ ಅಂತರ ಪ್ರದೇಶದ ಒಳಗೆ ಮತಕ್ಕಾಗಿ ಪ್ರಚಾರ ಮಾಡುವಂತಿಲ್ಲ. ಅಭ್ಯಥರ್ಿ ಪರವಾಗಿ ಮತಗಟ್ಟೆಗಳಿಗೆ ಮತದಾರರನ್ನು ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ವಾಪಸ್ಸು ಕರೆದುಕೊಂಡು ಹೊಗುವಂತಿಲ್ಲ ಎಂದರು.

ಯುಟೂನ್ ಚಾನೆಲ್ಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ;  ಉತ್ತರ ಕನ್ನಡ ಜಿಲ್ಲೆಯಲ್ಲಿ ಯು ಟೂಬ್ ಹಾವಳಿ ಹೆಚ್ಚಾಗಿದೆ. ವ್ಯಕ್ತಿಗಳ ತೇಜೂ ವಧೆ ಮಾಡಿ ವಿಡಿಯೋ ಹರಿಬಿಡಲಾಗುತ್ತಿದೆ. ಇಂಥ ದೂರುಗಳು ಜಿಲ್ಲಾಧಿಕಾರಿ ಕಚೇರಿ ತಲುಪಿವೆ. ಯಾವುದೇ ರಿಜಿಸ್ಟ್ರೇಶನ್ ಇಲ್ಲದೆಯೂ, ಜಿಲ್ಲಾಡಳಿತದ ಅನುಮತಿ ಪಡೆಯದೇ ಯುಟೂಬ್ ಚಾನೆಲ್ಗಳನ್ನು ಕೆಲವರು ನಡೆಸುತ್ತಿರುವುದು ಗಮನಕ್ಕೆ ಬಂದಿದ್ದೆ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ತೇಜೂ ವಧೆ ಮಾತ್ರವಲ್ಲಿ ಸಮಾಜಿಕ ಸಾಮರಸ್ಯ ಕೆಡಿಸುವ ಯುಟೂಬ್ ಚಾನೆಲ್ಗಳ ಮೇಲೆ ಸಹ ಜಿಲ್ಲಾಡಳಿತದ ಕಣ್ಣಿದೆ. ಮಾನನಷ್ಟವಾಗಿದ್ದರೆ ಕೋರ್ಟನಲ್ಲಿ ನೋಡಿಕೊಳ್ಳಲಿ ಎಂಬ ಉಡಾಫೆ ಮಾತು ನಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಗಂಭೀರ ಎಚ್ಚರಿಕೆ ನೀಡಿದರು. 


ಸುದ್ದಿ ಓದಿ