ಬಜೆಟ್ನಿಂದ ಖುಷ್ ಆದ ರೈತರು: ಸಿಹಿ ವಿತರಿಸಿ ಸಂಭ್ರಮಾಚರಿಸಿದ ಸಂಸದರು
ಬಳ್ಳಾರಿ,ಫೆ.03-ನಿನ್ನೆಯ ದಿನ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಜೆಟ್ ಗಮನಿಸಿರುವ ಜಿಲ್ಲೆಯ ರೈತರು ಮಾಜಿ ಸಂಸದ ಎಸ್.ಫಕ್ಕಿರಪ್ಪ ಅವರನ್ನು ಆಹ್ವಾನಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಸಿರಿವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಎಸ್.ಫಕ್ಕಿರಪ್ಪ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ರೈತರು ಸಿಹಿ ವಿತರಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿಕೊಡುವ ಭರವಸೆಯನ್ನು ನೀಡಿದರು. ರೈತರ ಪ್ರೀತ್ಯಾದರಗಳಿಗೆ ಮಾರುಹೋದ ಮಾಜಿ ಸಂಸದ ಎಸ್.ಫಕ್ಕಿರಪ್ಪನವರು, ನಾನು ಐದು ವರ್ಷ ಸಂಸದನಾಗಿದ್ದೆ. ಸಂಸತ್ ನಲ್ಲಿನ ಕಾರ್ಯಕಲಾಪಗಳನ್ನೂ ಗಮನಿಸಿದ್ದೆ. ಹಿಂದೆಂದೂ ಯಾವ ಪ್ರಧಾನಿಯೂ ಮಾಡದ ಅದ್ವಿತೀಯ ಸಾಧನೆಯನ್ನು ಪ್ರಧಾನಿ ಮೋದಿ ಅವರು ಮಾಡಿದ್ದಾರೆ. ಬಡವರು, ಕೃಷಿಕರು, ಕಾಮರ್ಿಕರು, ರೈತರು, ಅಂಗನವಾಡಿ ಕಾರ್ಯಕತರ್ೆಯರು, ಕೂಲಿಗಳು ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಮೋದಿ ಅತ್ಯುತ್ತಮವಾದ ಬಜೆಟ್ ನೀಡಿದ್ದಾರೆ. ಇದೊಂದು ಐತಿಹಾಸಿಕ ಮತ್ತು ಸಾರ್ವಕಾಲಿಕ ಬಜೆಟ್ ಆಗಿದೆ. ಹಿಂದೆ ಇಂತಹ ಬಜೆಟ್ ಮಂಡಿಸಿದ್ದನ್ನು ನಾನು ನೋಡಿಲ್ಲ. ಮುಂದೆಯೂ ಇಂತಹ ಬಜೆಟ್ ನಿರೀಕ್ಷಿಸಲೂ ಸಾಧ್ಯವಿಲ್ಲ. ಮತ್ತೊಮ್ಮೆ ಮೋದಿ ಅವರು ಪ್ರಧಾನ ಮಂತ್ರಿಯಾದರೆ ನದಿಗಳ ಜೋಡಣೆ, ರಸಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುವ ಯೋಜನೆ ಇದೆ. ಆದ್ದರಿಂದ ಇನ್ನು ಮೂರು ತಿಂಗಳೊಳಗೆ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿಯನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
ಬಿಜೆಪಿಯ ಜಿಲ್ಲಾ ಮುಖಂಡರಾದ ಬೆಳಗಲ್ಲು ಜಡೇಗೌಡ, ಮಲ್ಲಿಕಾಜರ್ುನ ರೆಡ್ಡಿ ಅಸುಂಡಿ, ಮಲ್ಲಿಕಾಜರ್ುನಗೌಡ ಹಲಕುಂದಿ, ಶ್ರೀನಿವಾಸ್, ಬಿ.ತಿಪ್ಪೇಸ್ವಾಮಿ, ಕೆ.ಚೆನ್ನಬಸಪ್ಪ, ವೀರಬಸಪ್ಪ ಆದೆಪ್ಪ ಇನ್ನಿತರರು ಇದ್ದರು. ರೈತ ಮೋಚರ್ಾದ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಶಿವರುದ್ರಗೌಡ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.