ಕಾರವಾರ

ಕರಾವಳಿ ಉತ್ಸವ - 4ನೇ ದಿನ; ಯುವ ಜನತೆಯನ್ನು ಕುಣಿಸಿದ ( ರಾಪ್ ) ಸಿಂಗರ್ ರಫ್ತಾರ್

ಕರಾವಳಿ ಉತ್ಸವ - 4ನೇ ದಿನ; ಯುವ ಜನತೆಯನ್ನು ಕುಣಿಸಿದ  ( ರಾಪ್ ) ಸಿಂಗರ್ ರಫ್ತಾರ್

                        ಕಾರವಾರ 26 : ಕರಾವಳಿ ಉತ್ಸವ 2025ರ  ನಾಲ್ಕನೇ ದಿನ ರಾತ್ರಿ ಮಲಯಾಳಿ ಗಾಯಕ, ಮ್ಯುಜಿಕ್ ಕಂಪೂಜರ್ , ಡಾನ್ಸರ್ ಆದ  ರಫ್ತಾರ್ ( ದಿಲಿನ್ ನಾಯರ್)  ಕಾರವಾರದ ಜನತೆಯನ್ನು ತಮ್ಮ ಪ್ರತಿಭೆಯ ಮೂಲಕ ಕುಣಿಸಿದರು.  ಭಾರತದ ಪ್ರಖ್ಯಾತ ರಾಪ್ (ಖಚಿಠಿ)  ಸಿಂಗರ್ ಆಗಿರುವ ರಫ್ತಾರ್ ,ಕಾರವಾರದ ಕರಾವಳಿ ಉತ್ಸವದ ನಾಲ್ಕನೇ ದಿನದ ಪ್ರಮುಖ ಕಲಾವಿದರಾಗಿ ಆಹ್ವಾನಿತರಾಗಿದ್ದರು. ಕಡಲತೀರದ  ಮಯೂರ ವರ್ಮ ವೇದಿಕೆಯಲ್ಲಿ ತಮ್ಮ ವೇಗದ ಗಾಯನ ಪ್ರಾರಂಭಿಸಿದ ಅವರು  ಹೊಸ ಸಂಗೀತ ಲೋಕ ಸೃಷ್ಟಿಸಿದರು. ನೃತ್ಯ ಹಾಗೂ ಗಾಯನದ ಮೂಲಕ ಯುವಕ ಯುವತಿಯರ ನಾಡಿ ಮಿಡಿತ ಹಿಡಿದರು. 

                        ರಾಫ್ತಾರ್ ವೇದಿಕೆಯ ಮುಂಭಾಗಕ್ಕೆ ಯುವಕರನ್ನು ಆಹ್ವಾನಿಸಿದಾಗ ಸಾವಿರಾರು ಯುವತಿಯರು, ಯುವಕರು ವೇದಿಕೆಯ ಮುಂಭಾಗಕ್ಕೆ ನುಗ್ಗಿ, ಡಾನ್ಸ ಮಾಡತೊಡಗಿದರು. ಪೊಲೀಸರು ಒಂದು ಕ್ಷಣ ಈ ಘಟನೆಯಿಂದ ದಂಗಾದರು. ಆಗ ಯುವ ಜನರನ್ನು ಪ್ರೇರೇಪಿಸಿದ ರಾಫ್ತಾರ್ ಅವರೇ ಅತ್ಯಂತ ಪ್ರಶಾಂತತೆ ಹಾಗೂ ಸೌಜನ್ಯ ಕಾಯ್ದುಕೊಂಡು , ಡಾನ್ಸ ಮಾಡುವಂತೆ ವಿನಂತಿಸಿದರು. ಯಾವುದೇ ಗೊಂದಲ ವಾಗದಂತೆ ಸಂಭ್ರಮಿಸಿ ಎಂದು ಮನವಿ ಮಾಡುತ್ತಲೇ ಹಾಡು ನೃತ್ಯ ಮುಂದುವರಿಸಿದರು. ಆಧುನಿಕ ಟ್ರೆಂಡ್ ಗಮನಿಸಿಯೇ ಅವರಿಗೆ ಇಷ್ಟವಾದ ಹಾಗೂ ಅವರೇ ಹಾಡಿದ ಆಲ್ಬಮ್ , ಫಾಸ್ಟ ಟ್ರ್ಯಕ್ ಹಾಡುಗಳನ್ನು ಹಾಡಿದರು . ಬಾಂಬೇ ಸಿನಿಮಾದ ಲೈಲಾ ಲೈಲಾ ಹಾಡು, ಮೋರನಿ, ಹಸೀನಾ ಕಾ ದಿವಾನ , ಮಾನಟೋಯತ್, ಶೇಖ್ ಚಿಲ್ಲಿ ,ಬಲ್ ಶಾಹ್ ಭಾವೇ , ಕ್ರಿನ್ ವೋ ರಾತ್ ; ಮುಂತಾದ ಹಾಡುಗಳನ್ನು ಎರಡು ತಾಸು ಹಾಡಿ ರಂಜಿಸಿದರು. 


ಸುದ್ದಿ ಓದಿ