ಕನ್ನಡ ನುಡಿ ಸಿರಿ: ಸಮಾರೋಪ ಕಸಾಪ ಕಾರ್ಯಚಟುವಟಿಕೆಯಿಂದಿರಲಿ: ಸೋಮಣ್ಣ
ಲೋಕದರ್ಶನ ವರದಿ
ಹೊಸಪೇಟೆ 19: ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರ ಹೋಬಳಿ ಘಟಕ ಕ್ರಿಯಾಶೀಲವಾಗಿದ್ದು, ಕಸಾಪದಿಂದ ಮಾಸಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಕ್ರಿಯಾಶೀಲವಾಗಿರಲಿ ಎಂದು ಹಿರಿಯ ರಂಗಕಮರ್ಿ ಮ.ಬ.ಸೋಮಣ್ಣ ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು, ಹೋಬಳಿ ಘಟಕ ಕಮಲಾಪುರ ಹಾಗೂ ಕನರ್ಾಟಕ ವಚನ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನ.11 ರಿಂದ ನ.18ರವರೆಗೆ ಕನ್ನಡ ನುಡಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ನ.18ರಂದು ಸಂಜೆ 5.30ಕ್ಕೆ ನಗರದ ಬಾಲಕಿಯ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಕೃಷಿ ಎಲ್ಲಾ ಬರಹಗಾರರಿಂದ ಇನ್ನೂ ಹೆಚ್ಚಾಗಬೇಕಿದೆ. ಎಲೆಮರೆ ಕಾಯಿಯಂತೆ ಅದೆಷ್ಟೋ ಬರಹಗಾರರನ್ನು ಸಾಹಿತ್ಯ ಪರಿಷತ್ತು ಹೊರ ತರಬೇಕಿದೆ. ಅಲ್ಲದೆ ಸಾಧ್ಯವಾದಷ್ಟು ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಇಂತಹ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ತಲುಪಿಸುವ ಕಾರ್ಯ ನಡೆಯಬೇಕಿದೆ ಎಂದರು.