ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ಬ್ಯಾಡಗಿ 03: ಕನ್ನಡ ಇತಿಹಾಸದ ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ಕರ್ನಾಟಕ ದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವವು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ ಎಂದು ಬಿಜೆಪಿ ಯುವ ಮುಖಂಡ ಎಂ.ಎಸ್.ಪಾಟೀಲ ತಿಳಿಸಿದರು. ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣಕುಮಾರ ಶೆಟ್ಟಿ) ತಾಲೂಕಾ ಘಟಕದ ವತಿಯಿಂದ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಕನ್ನಡ ನಾಡಿಗಾಗಿ, ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಈ ಮಾಸದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಗೌರವಿಸುವ ಮೂಲಕ, ನಾಡಿನ ಸೇವೆಯನ್ನು ಮುಂದುವರೆಸಲು ಇನ್ನಷ್ಟು ಪ್ರೇರಣೆಯನ್ನು ನೀಡಲಾಗುತ್ತಿದೆ. ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ ಎಂದರು.ಕರವೇ ತಾಲೂಕಾ ಅಧ್ಯಕ್ಷ ಹನುಮಂತ ಭೋವಿ ಮಾತನಾಡಿ, ಕನ್ನಡ ಭಾಷೆಗೆ ಪ್ರಾಚೀನ ಕಾಲದ ಇತಿಹಾಸವಿದ್ದು, ಹಲ್ಮಡಿ ಶಾಸನ ಕನ್ನಡದ ಪ್ರಥಮ ಶಾಸನವಾಗಿದೆ. ಕರ್ನಾಟಕ ದಲ್ಲಿ ಗಂಗರು, ಕದಂಬ, ಚಾಲುಕ್ಯ, ಹೋಯ್ಸಳರು, ರಾಷ್ಟ್ರಕೂಟರು ಆಳಿದ್ದಾರೆ. ಕರ್ನಾಟಕವಿಜಯನಗರ ಅರಸರ ಕಾಲದಲ್ಲಿ ಮುತ್ತುರತ್ನಗಳಿಂದ ಶ್ರೀಮಂತಿಕೆ ಸಾಮ್ರಾಜ್ಯವಾಗಿತ್ತು. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಪ್ರತಿಯೊಬ್ಬರೂ ಸ್ಮರಿಸಲೇಬೇಕು. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಸಾಹಿತಿಗಳು ಸಾಕಷ್ಟು ಕೊಡುಗೆ ನೀಡಿ ಕನ್ನಡತನವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕಾ ಗೌರವಾಧ್ಯಕ್ಷ ಎಂ.ಎನ್.ಓಲೇಕಾರ, ತಾಲೂಕಾ ಉಪಾಧ್ಯಕ್ಷರುಗಳಾದ ಮಾಲತೇಶ ಪಾತ್ರೋಟಿ, ರಾಜಶೇಖರ ರಾವಳ, ಕಾರ್ಮಿಕ ಘಟಕದ ಅಧ್ಯಕ್ಷ ಫಕ್ಕೀರಪ್ಪ ಮ್ಯಾಗೇರಿ, ಸಂಚಾಲಕ ಹಜರತಲಿ ಬಳ್ಳಾರಿ, ಖಜಾಂಚಿ ಸಲೀಂ ಅಹಮದ್ ಯಾದವಾಡ, ಗ್ರಾಮ ಘಟಕದ ಅಧ್ಯಕ್ಷ ಸಿದ್ಧಿವಿನಾಯಕ್ ಕುಲಕರ್ಣಿ , ಖುರ್ದಕೋಡಿಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ವೀರೇಶ ಚಿನ್ನಿಕಟ್ಟಿ, ಜಾಬು ಕನವಳ್ಳಿ, ಮೂರ್ತಿ ಹಳೆಮನಿ, ಫಾರೂಕ್ ಬೆಳಗಾವಿ, ಹನುಮಂತಪ್ಪ ಬುಡಪನಹಳ್ಳಿ, ಪ್ರವೀಣ, ಪವನ್ ವಡ್ಡರ, ಮಾರುತಿ ಕರಡಿ, ನಾಗರಾಜ ಸುಣಗಾರ, ಮಾಲತೇಶ ಸುಣಗಾರ, ಭಾಷಾ ಬ್ಯಾಡಗಿ, ಉಪೇಂದ್ರ ಕರೆಲಿಂಗಮ್ಮನವರ, ಗೌಸುಸಾಬ್ ರಾಣೆಬೆನ್ನೂರ, ಸುಧಾ ಕಜರಿ, ಎಲ್ಲವ್ವ ಹೊಟ್ಟೆಪ್ಪನವರ, ಇಶಾನ್ ಸಿಂಧೂರ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರ