ಕನಕದಾಸರ ಜಯಂತಿಯನ್ನು ತಾಲೂಕು ಆಡಳಿತದಿಂದ ಆಯೋಜನೆ
ಕನಕದಾಸರ ಜಯಂತಿಯನ್ನು ತಾಲೂಕು ಆಡಳಿತದಿಂದ ಆಯೋಜನೆ
ಯರಗಟ್ಟಿ 18 : ತಹಶೀಲ್ದಾರ ಎಂ. ಎನ್. ಮಠದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಮಾಡದೇ ಮನುಕುಲದ ಉದ್ಧಾರಕ ಎಂದು ಭಾವಿಸಬೇಕು ಎಂದರು.ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗೋಪಾಲ ದಳವಾಯಿ ಕನಕದಾಸ ಜೀವನ, ಆದರ್ಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷೆ ನೀಲಕಂಠ ಸಿದ್ದಬಸನವ, ಪ. ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಮುಖ್ಯ ವೈದ್ಯಾಧಿಕಾರಿ ಡಾ. ಬಿ. ಎಸ್. ಬಳ್ಳೂರ, ಪಶು ವೈದ್ಯಾಧಿಕಾರಿ ಡಾ. ಎಂ. ವಿ. ಪಾಟೀಲ, ಪ. ಪಂ. ನಾಮನಿರ್ದೇಶಿತ ಸದಸ್ಯ ಹನುಮಂತ ಹಾರುಗೋಪ್ಪ, ಭೂ ನ್ಯಾಯ ಮಂಡಳಿ ಸದಸ್ಯ ಆಯ್. ಬಿ. ಗೌಡರ ಇದ್ದರು.ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.ಈ ವೇಳೆ ಹೆಸ್ಕಾಂ ಎಸ್.ಓ ಮಹಾಂತೇಶ ಕ್ಷೇತ್ರ ಆರೋಗ್ಯ ಅಧಿಕಾರಿ ಆಯ್ . ಆರ್. ಗಂಜಿ, ಭಾಸ್ಕರ ಹಿರೇಮೆತ್ರಿ, ಎಸ್. ಎಸ್. ಕುರುಬಗಟ್ಟಿಮಠ, ಕುರುಬ ಸಮುದಾಯದ ಮುಖಂಡರಾದ ಶಿವಾನಂದ ಕರಿಗೋಣ್ಣವರ, ಮಂಜುನಾಥ, ತಡಸಲೂರ, ಮುದಕಪ್ಪ ತಡಸಲೂರ, ಮಹಾದೇವ ಮುರಗೋಡ, ಸಿಂಧೂರ ತೆಗ್ಗಿ, ವಿಠ್ಠಲ ಹಾರುಗೋಪ್ಪ, ಫಕ್ಕೀರ್ಪ ಕಿಲಾರಿ, ರಫೀಕ್ ಡಿ. ಕೆ, ಸೇರಿದಂತೆ ಆಶಾ -ಅಂಗನವಾಡಿ ಕಾರ್ಯಕರ್ತಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಇದ್ದರು.