ಕಂಪ್ಲಿ

ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳು ಅನುದಾನಕ್ಕೆ ಒಳಪಡಿಸಿ’ ಕೆ. ಎಸ್‌. ಚಾಂದ್ ಭಾಷಾ ಒತ್ತಾಯ

ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳು ಅನುದಾನಕ್ಕೆ ಒಳಪಡಿಸಿ’ ಕೆ. ಎಸ್‌. ಚಾಂದ್ ಭಾಷಾ ಒತ್ತಾಯ

ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳು ಅನುದಾನಕ್ಕೆ ಒಳಪಡಿಸಿ’ ಕೆ. ಎಸ್‌. ಚಾಂದ್ ಭಾಷಾ ಒತ್ತಾಯ  

ಕಂಪ್ಲಿ 19: 9 ರಾಜ್ಯದಲ್ಲಿ 1992 ರ ನಂತರ ಪ್ರಾರಂಭವಾದ ಶಾಲಾಹಿ ಕಾಲೇಜುಗಳು ಮಕ್ಕಳ ಹಿತ ದೃಷ್ಟಿಯಿಂದ ಸರ್ಕಾರಿ ಅನುದಾನಕ್ಕೆ ಒಳಪಡಿಸಬೇಕೆಂದು  ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ  ಉಪಾಧ್ಯಕ್ಷ ಕೆ. ಎಸ್ ಚಾಂದ್ ಭಾಷಾ ಒತ್ತಾಯಿಸಿದರು. ಪಟ್ಠಣದ ಸಣಾಪುರಕ್ಕೆ ರಸ್ತೆ ರೈನ್ ಬೋ ಕಾಲೇಜು  ಆವರಣದಲ್ಲಿ ಜಿಲ್ಲಾ ಮಟ್ಟದ  ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ರವಿವಾರ ಸಭೆಯಲ್ಲಿ ಈಸಭೆಯಲ್ಲಿ ಉಪಾಧ್ಯಕ್ಷ ಕೆ. ಎಸ್ ಚಾಂದ್ ಭಾಷಾ ಮಾತನಾಡಿ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಸಹಭಾಗಿತ್ವದಲ್ಲಿ ಶಿಕ್ಷಣ ನೀಡುತ್ತ ಬಂದಿವೆ. ಸರ್ಕಾರದಿಂದ ಅನುದಾನ ಪಡೆಯುವ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಕನ್ನಡ ಮಾಧ್ಯಮ ಶಾಲೆಗಳು 1986ರಲ್ಲಿ ಸರ್ಕಾರದಿಂದ ಅನುದಾನವನ್ನು ನಿಲ್ಲಿಸಲಾಗಿತ್ತು.  ನಂತರ ಬಸವರಾಜ ಹೊರಟ್ಟಿ ಅವರು 1992 ರವರೆಗೆ ಅನುದಾನ ನೀಡಿದರು. 1992 ರಿಂದ ಇಲ್ಲಿಯವರೆಗೆ ಅಸ್ತಿತ್ವಕ್ಕೆ ಬಂದ ಕನ್ನಡ ಮಾಧ್ಯಮ ಶಾಲೆಗಳೆ ಅನುದಾನ ನಿಲ್ಲಿಸಿದ್ದು, ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು. ಒಕ್ಕೂಟದ ಗೌರವಾಧ್ಯಕ್ಷ ತಾಂಡವ ಕೃಷ್ಣ ಮಾತನಾಡಿ ರಾಜ್ಯದಲ್ಲಿ ಸುಮಾರು 450 ಕ್ಕೂ ಹೆಚ್ಚು ಕನ್ನಡ ಮಾಧ್ಯಮದ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲಾಹಿ ಕಾಲೇಜು ಉತ್ತಮ ಶಿಕ್ಷಣ ನೀಡುತ್ತಿದ್ದರೂ ಸರ್ಕಾರಿ ಸೌಲಭ್ಯಗಳಿಲ್ಲದೆ ಶಾಲೆಗಳು ನಡೆಸುವುದು ಕಷ್ಟವಾಗಿದೆ ಸರ್ಕಾರ ಮನವಿಗೆ ಸ್ಪಂದಿಸಿ ಕನ್ನಡ ಶಾಲಾ-ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಿ. ಮೂಕಯ್ಯ ಸ್ವಾಮಿ, ಜಿ. ಜಿ. ಚಂದ್ರಣ್ಣ, ಮುತ್ತಣ್ಣ ಹುಲಿಗೇಶ ನಂದಿಹಾಳ, ಬಿ. ಜಿಲಾನ್, ಜಿಲ್ಲಾ ಅಧ್ಯಕ್ಷ ಸುರೇಶ್, ಶಿವಕುಮಾರ್, ರಾಘವೇಂದ್ರ ಶೆಟ್ಟಿ, ಮಾರುತಿ, ಜ್ಞಾನೇಶ್ ಸೇರಿದಂತೆ ಅನೇಕರಿದ್ದ್ರು                  


ಸುದ್ದಿ ಓದಿ