ಧಾರವಾಡ - ಹುಬ್ಬಳ್ಳಿ

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರೊಂದಿಗೆ ಸಂಸದ ಜೋಶಿ ಚಚರ್ೆ

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರೊಂದಿಗೆ ಸಂಸದ ಜೋಶಿ ಚಚರ್ೆ

ಹುಬ್ಬಳ್ಳಿ : 11, ನೆನ್ನೆ ಸಂಜೆ ಸಂಸದ ಪ್ರಲ್ಹಾದ ಜೋಶಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ ಸಿಂಗ್ ಅವರನ್ನು ಭೇಟಿ ಮಾಡಿ ಈ ಭಾಗದ ಹಲವಾರು ರೈಲ್ವೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಸ್ತೃತ ಚಚರ್ೆ ನಡೆಸಿದರು. ಸಂಜೆ ರೈಲ್ವೆ ಸೌಧದಲ್ಲಿ ನಡೆದ ಸಭೆಯಲ್ಲಿ ಸಂಸದ ಜೋಶಿ ಅವರು ಈ ಭಾಗದಲ್ಲಿ ಪ್ರಗತಿಯಲ್ಲಿರುವ ಹುಬ್ಬಳ್ಳಿ-ಚಿಕ್ಕಜಾಜೂರು, ಹುಬ್ಬಳ್ಳಿ ಹೊರವಲಯದ ಕುಸುಗಲ್-ಅಮರಗೋಳ  ಬೈಪಾಸ್ ರೈಲ್ವೆ ಮಾರ್ಗ ಹೊಸಪೇಟೆ-ವಾಸ್ಕೋ ಜೋಡಿ ಮಾರ್ಗಗಳಲ್ಲಿ ಬರುವ ರಸ್ತೆ ಕೆಳಸೇತುವೆಗಳ ಈಗಿನ ಅಗಲ-ಎತ್ತರ ಸರಿಯಾಗಿರದೇ ಸಾರ್ವಜನಿಕರು ವಿಶೇಷವಾಗಿ ರೈತರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಪರಿಷ್ಕರಿಸಬೇಕೆಂದು ಒತ್ತಾಯ ಪಡಿಸಿದರು.  ಉಣಕಲ್-ಅಮರಗೋಳ, ಗೋಪನಕೊಪ್ಪ-ಶಿವಳ್ಳಿ, ಉಣಕಲ್-ಮಾರಡಗಿ ಮಧ್ಯೆ ಬರುವ ಗೇಟ್ ನಂ. 286, 287, ರಸ್ತೆ ಕೆಳ ಸೇತುವೆಗಳ ಅಗಲ ಹಾಗೂ ಎತ್ತರ ಹೆಚ್ಚಿಸಬೇಕೆಂಬ ಬಗ್ಗೆ ಬಹುದಿನಗಳ ಬೇಡಿಕೆಗೆ ಜನರಲ್ ಮ್ಯಾನೇಜರ್ ಸಿಂಗ್ ಅವರು ತೀವ್ರ ಸ್ಪಂದಿಸಿದ್ದು, ಸಭೆಯಲ್ಲಿ ಹಾಜರಿದ್ದ ರೈಲ್ವೆ ಮುಖ್ಯ ಇಂಜಿನಿಯರ್ ಆರ್.ವಿ.ಎನ್.ಎಲ್. ಮುಖ್ಯ ಯೋಜನಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ರಸ್ತೆ ಕೆಳ ಸೇತುವೆ ನಕ್ಷೆ ಕೂಡಲೇ ಪರಿಷ್ಕರಿಸಲು ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಅದೇ ರೀತಿ ಭವಾನಿ ನಗರ ಹಾಗೂ ದೇಶಪಾಂಡೆ ನಗರ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀ ಕೃಷ್ಣ ಕಲ್ಯಾಣ ಮಂಟಪದ ಹತ್ತಿರ ಚಿಕ್ಕ ರಸ್ತೆ ಕೆಳ ಸೇತುವೆ ನಿಮರ್ಾಣಕ್ಕೆ ಉತ್ತಮವಾಗಿ ಸ್ಪಂದಿಸಿದ ಸಿಂಗ್ ಸ್ವತಃ ತಾವೇ ಈ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ಸಂಸದ ಜೋಶಿ ವಿವರಿಸಿದ್ದಾರೆ.

ಒಟ್ಟಾರೆ ಈ ಭಾಗದ ಹಲವಾರು ರೈಲ್ವೆ ಅಭಿವೃದ್ಧಿ ಅನುಷ್ಠಾನ ಕುರಿತು ಸಂಸದ ಜೋಶಿ ಸಿಂಗ್ ಅವರ ಗಮನ ಸೆಳೆದಿದ್ದು, ಹಲವಾರು ಕಾರ್ಯಗಳು ಕೈಗೂಡುವ ಭರವಸೆಯಿದೆಯೆಂದು ಶ್ರೀ ಜೋಶಿ ತಿಳಿಸಿದ್ದಾರೆ. ಇದೆ ಸಂಧರ್ಬದಲ್ಲಿ ದಾವಣಗೆರೆ ಸಂಸದ ಶ್ರೀ ಸಿದ್ದೇಶ್ವರ ಅವರು ಕೂಡಾ ಉಪಸ್ಥಿತರಿದ್ದರು.

ಸುದ್ದಿ ಓದಿ