ಕಾರವಾರ

ವಿದ್ಯಾಥರ್ಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಲು ಜೆ.ರಾಥೋಡ್ ಕರೆ

ವಿದ್ಯಾಥರ್ಿಗಳಲ್ಲಿ ವಿಜ್ಞಾನದ ಕುರಿತು  ಆಸಕ್ತಿ ಮೂಡಿಸಲು ಜೆ.ರಾಥೋಡ್ ಕರೆ

ಕಾರವಾರ 27: ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅಭಿರುಚಿ ಮೂಡಿಸಲು ಶಿಕ್ಷಣ ಸಂಸ್ಥೆಗಳು ಹತ್ತಿರದ ಕಾಖರ್ಾನೆ ಅಥವಾ ಪ್ರಯೋಗಾಲಯಗಳಿಗೆ ವಿದ್ಯಾಥರ್ಿಗಳನ್ನು ಕರೆದುಕೊಂಡು ಹೋಗಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ವ್ಯವಸ್ಥೆಯಾಗಬೇಕು ಎಂದು ಕಡಲಜೀವ ಶಾಸ್ತ್ರ ಮಹಾವಿದ್ಯಾಲಯದ ಆಡಳಿತ ವಿಭಾಗದ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ಜಗನ್ನಾಥ್ ರಾಥೋಡ್ ಸಲಹೆ ನೀಡಿದರು.

ಅವರು ಇಲ್ಲಿನ ಬಾಲಮಂದಿರ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ಇಂದಿನ ಆಧುನಿಕ ಯುಗದಲ್ಲಿ ಶೈಕ್ಷಣಿಕ ಒತ್ತಡದಿಂದ ಸೂಕ್ಷ್ಮ ಮನಸ್ಸಿನ ಮಕ್ಕಳಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಅಂತಹ ಮಕ್ಕಳ ಮಾನಸಿಕ ಒತ್ತಡ ನಿವಾರಣೆಗೆ ಶಾಲೆಯಲ್ಲಿ ಆಪ್ತ ಸಮಾಲೋಚನೆ (ಕೌನ್ಸಿಲಿಂಗ್) ನಡೆಸುವಂತಾಗಬೇಕು ಎಂದರು.

ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿದಾಗ ದೇಶಕ್ಕೆ ಒಬ್ಬ ಒಳ್ಳೆಯ ವಿಜ್ಞಾನಿಯನ್ನು ಕೊಡುಗೆ ನೀಡಲು ಸಾಧ್ಯ. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ತುಂಬಿದಷ್ಟು ರಾಷ್ಟ್ರಕ್ಕೆ ಹಿತಕಾರಿಯಾಗುತ್ತದೆ. ಈ ದಿಸೆಯಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. 

ಆಕರ್ಷಣೆಗೆ ಒಳಗಾದ ವಿಜ್ಞಾನ ವಸ್ತುಪ್ರದರ್ಶನ:

ಐತಿಹಾಸಿಕ ಸ್ಥಳ, ವಿಜ್ಞಾನ-ತಂತ್ರಜ್ಞಾನ, ಕರಕುಶಲ, ರಂಗೋಲಿ ವಿಭಾಗಗಳಲ್ಲಿ ಮಕ್ಕಳು ರಚಿಸಿದ ಕಲಾಪ್ರಕಾರಗಳು ವೀಕ್ಷಕರ ಗಮನ ಸೆಳೆದವು. ಐತಿಹಾಸಿಕ ಸ್ಥಳಗಳಲ್ಲಿ ಹಂಪಿಯ ಕಲ್ಲಿನ ರಥ, ಬೇಲೂರು, ಹಳೆಬೀಡು,ಸೋಮನಾಥ ದೇವಾಲಯ ಮುಂತಾದ ಕಲಾಕೃತಿಗಳು, ವಿಜ್ಞಾನ-ತಂತ್ರಜ್ಞಾನದಲ್ಲಿ ರಾಕೇಟ್ಗಳು, ನೇವಿಬೋಟುಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಸೋಲಾರ್ ವಿದ್ಯುತ್ ತಯಾರಿಕೆ, ಆಣೆಕಟ್ಟು, ರಾಷ್ಟ್ರೀಯ ಹೆದ್ದಾರಿ ಮುಂತಾದ ವೈವಿಧ್ಯಮಯ ಕಲಾಕೃತಿಗಳು ಪ್ರೇಕ್ಷಕರ ಮನ ಸೆಳೆಯಿತು. ರಂಗೋಲಿ ವಿಭಾಗದಲ್ಲಿ ದಿ.ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಹಾಗೂ ವಿವಿಧ ಬಗೆಯ ರಂಗೋಲಿ ಚಿತ್ರಗಳು ಎಲ್ಲರನ್ನೂ ಆಕಷರ್ಿಸಿತು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಶಾಲೆಯ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಮಕ್ಕಳ ಕಲಾಪ್ರತಿಭೆಗಳನ್ನು ಕಂಡು ಡಾ. ಜಗನ್ನಾಥ್ ರಾಥೋಡ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಸ್.ಆರ್.ನಾಯಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ವಿಭಾಗದ ಮುಖ್ಯಸ್ಥ ಜಿ.ಪಿ.ಕಾಮತ್ ಮತ್ತು ಶಾಲೆಯ ಶಿಕ್ಷಕ,ಸಿಬ್ಬಂದಿವರ್ಗ ಹಾಗೂ ಮಕ್ಕಳ ಪಾಲಕರು ಇದ್ದರು.


ಸುದ್ದಿ ಓದಿ