ಜನರ ಮನಸ್ಥಿತಿ ಬದಲಾಗುವರೆಗೂ 'ಅಭಿವೃದ್ಧಿ' ಅಸಾಧ್ಯ !
- ಪ್ರವೀಣ ಗಿರಿ
ಇದು ಕಳೆದ ಐದಾರು ತಿಂಗಳುಗಳ ಹಿಂದಿನ ಮಾತು. ರಾಜ್ಯದಲ್ಲಿ ರಾಜಕೀಯದ ಹಬ್ಬದ ವಾತಾವರಣ. ಅಂದರೇ 2018ರ ವಿಧಾನಸಭಾ ಚುನಾವಣೆ ನಡೆಯುತ್ತಿತ್ತು. ರಾಜ್ಯದ ರಾಜಕಾರಣಿಗಳು ಚುನಾವಣೆಯಲ್ಲಿ ಫುಲ್ ಬ್ಯೂಸಿ ಆಗಿದ್ದಲ್ಲದೇ ಸಂಪೂರ್ಣವಾಗಿ ಮುಳುಗಿ ಹೋಗಿದ್ದರು.
ಶತಾಯಗತಾಯಃ ಇದ್ದ ಅಧಿಕಾರವನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಬಿಟ್ಟು ಕೊಡಲೇಬಾರದೆಂದು ನಿರ್ಧರಿಸಿದ್ದ ರಾಜ್ಯದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ತಮ್ಮ ಸರಕಾರದ ಸಾಧನೆಗಳನ್ನು ತಿಳಿಸಲು ತಮ್ಮ ಸಂಪುಟದ ಸಚಿವರೊಂದಿಗೆ ಸ್ವತಃ ಅಖಾಡಕ್ಕಿಳಿದು ರಾಜ್ಯದ ಮೂಲೆ ಮೂಲೆ ಪ್ರವಾಸ ಕೈಗೊಂಡು ಸಾಧನಾ ಸಮಾವೇಶದಲ್ಲಿ ಭಾಗಿಯಾದರು. ಆ ಸಮಾವೇಶಗಳಲ್ಲಿ ಸರಕಾರದ ಸಾಧನೆಗಳನ್ನು ಎತ್ತಿ ತೋರಿಸುವುದಕ್ಕಿಂತ ವಿರೋಧ ಪಕ್ಷದ ನಾಯಕರುಗಳನ್ನು ಮೂಲೆಗುಂಪು ಮಾಡುವುದು ಅವರ ಮುಖ್ಯ ಉದ್ದೇಶವಾಗಿತ್ತು. ಸಿದ್ಧರಾಮಯ್ಯ ಅವರು ಅಷ್ಟೇ ಸಲೀಸಾಗಿ ಮಾಡಿದರು ಕೂಡ. ಆದರೂ ಮತದಾರನ ಮನಸ್ಸು ಗೆಲ್ಲಲ್ಲು ಸಾಧ್ಯವಾಗದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಲಿಲ್ಲ. ಹೀಗೆ ಪ್ರತಿಯೊಂದು ಸಮಾವೇಶಗಳಲ್ಲಿಯೂ ತಮ್ಮ ಎಂದಿನ ಗತ್ತಿನಲ್ಲಿಯೇ (ಶೈಲಿ) ವಿರೋಧ ಪಕ್ಷದ ನಾಯಕರುಗಳ ಮೇಲೆ ಮುಗಿಬಿಳುತ್ತಿದ್ದರು.
ಜ್ಯಾತ್ಯಾತೀತ ಜನತಾ ದಳದ ಎಚ್.ಡಿ. ಕುಮಾರಸ್ವಾಮಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗುಡುಗುತ್ತಿದ್ದ ದಿನಗಳವು. ಅದರಲ್ಲಿಯೂ ಜೆಡಿಎಸ್ನ ಅಂದಿನ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತುಸು ಹೆಚ್ಚು ಆರ್ಭಟಿಸಿದ್ದರು. ಕುಮಾರಸ್ವಾಮಿ ಅವರು ಅವರಪ್ಪನ ಆಣೆಗೂ ರಾಜ್ಯದ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಏರೇತ್ತರದ ಧ್ವನಿಯಲ್ಲಿ ಗುಟುರು ಹಾಕಿದ್ದರು. ಸಿದ್ಧರಾಮಯ್ಯ ಅವರ ಈ ಮಾತುಗಳನ್ನು ಇಂದಿಗೂ ರಾಜ್ಯದ ಜನರು ಅಷ್ಟು ಸುಲಭವಾಗಿ ಮರೆತಿಲ್ಲ. ಮರೆಯುವುದೂ ಇಲ್ಲ. ಆದರೆ ಇಂದಿನ ಅವರಿಬ್ಬರ ಪರಿಸ್ಥಿತಿಯನ್ನೂ ಸಹ ರಾಜ್ಯದ ಜನರೇ ನೋಡುತ್ತಿದ್ದಾರೆ. ಎಂತಹ ಆಶ್ಚರ್ಯ! ಇದೊಂದು ರಿಸೇಂಟ್ ಉದಾಹರಣೆ ಸಾಕಲ್ಲವೇ ರಾಜಕಾರಣದಲ್ಲಿ ಯಾರು ಯಾರಿಗೆ ಮಿತ್ರರಲ್ಲ ಮತ್ತು ಶತ್ರುಗಳ ಅಲ್ಲ ಎಂಬುದಕ್ಕೆ.
ಇದರ ಪರಿಣಾಮವೇ ವಿಧಾನ ಸಭೆ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಹೊರ ಹೊಮ್ಮಿದ್ದರೂ ಅಧಿಕಾರ ಹಿಡಿಯುವಲ್ಲಿ ಎಡುವಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಹೇಗಾದರೂ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಿರ್ಧರಿಸಿ ತಮ್ಮೊಳಗಿರುವ ಎಲ್ಲ ಮುನಿಸನ್ನು ಒಲ್ಲದ ಮನಸ್ಸಿನಿಂದಲೇ ಬದಿಗಿಟ್ಟು ಕೈ ಕೈ ಮೀಲಾಯಿಸಿ, 'ದೋಸ್ತಿ' ಎಂಬ ಹೆಸರಿನಲ್ಲಿ ಮತ್ತೇ ಅಧಿಕಾರವನ್ನು ಹಿಡಿದದ್ದು. ಇದು ಮತ್ತೇ ಮೊನ್ನೆ ನಡೆದ ಉಪ ಚುನಾವಣೆಯಲ್ಲಿಯೂ ಪ್ರೂವ್ ಆಗಿದೆ. ಒಗ್ಗಟ್ಟಿನ ಮಂತ್ರ ಜಪಿಸಿದರೇ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡಬಹುದು ಎಂಬುದನ್ನು ಮತ್ತೊಮ್ಮೆ ಉಭಯ (ಕಾಂಗ್ರೆಸ್ ಮತ್ತು ಜೆಡಿಎಸ್) ಪಕ್ಷದ ನಾಯಕರು ತೋರಿಸಿ ಕೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಐದು ಚುನಾವಣೆಗಳ ಫೈಕಿ ನಾಲ್ಕರಲ್ಲಿ ಮೈತ್ರಿ ಸರಕಾರದ ಮುಖಗಳು ಗೆದ್ದು ಬೀಗಿವೆ. ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ ಗೆದ್ದಿದ್ದರೂ ಭಾರತೀಯ ಜನತಾ ಪಕ್ಷದ ಮತಗಳನ್ನು ನೋಡಿದಾಗ ಇದು ಹೇಳಿಕೊಳ್ಳುವಂತಹ ಗೆಲುವಲ್ಲ ಎನ್ನಿಸದೇ ಇರದು ಬಿಡಿ.
ರಾಮನಗರದಲ್ಲಿನ ಬಿಜೆಪಿಯ ಸ್ಥಿತಿಯಂತೂ ಹೇಳತೀರದು. ಇದು ರಾಜಕೀಯ ಆತ್ಮಹತ್ಯೆ ಎಂದು ಅಭ್ಯಥರ್ಿ ಚಂದ್ರಶೇಖರ ಅವರ ತಂದೆಯೇ ಬಹಿರಂಗವಾಗಿ ಹೇಳಿದರು ಇದು ನಿಜವೂ ಹೌದು. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸುವ ಮುನ್ಸೂಚನೆಯನ್ನು ತೋರಿಸುತ್ತದೆ. ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಬಗ್ಗೆ ಪಕ್ಷದ ಮುಂಚೂಣಿ ನಾಯಕರು ಯೋಚಿಸುವ ಅಗತ್ಯವಿದೆ. ಕೇವಲ ತಮ್ಮ ಸ್ವಾರ್ಥವನ್ನು ನೋಡಿಕೊಂಡರೇ ಸಾಮಾನ್ಯ ಕಾರ್ಯಕರ್ತರ ಗತಿ? ಇಲ್ಲಿ ವಿನಾಃ ಕಾರಣ ಪಕ್ಷದ ಮೇಲಿನ ಮತ್ತು ತಮ್ಮ ನೆಚ್ಚಿನ ನಾಯಕನ ಮೇಲಿನ ಅಭಿಮಾನಕ್ಕಾಗಿ ವಿರೋಧ ಕಟ್ಟಿಕೊಳ್ಳುವ ಸ್ಥಿತಿಗೆ ಬಂದು ನಿಲ್ಲುತ್ತಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನೀತಾ ಕುಮಾರಸ್ವಾಮಿ ಇಲ್ಲಿನ ಅಭ್ಯಥರ್ಿ ಆಗಿದ್ದ ಒಂದೇ ಕಾರಣಕ್ಕಿದು ಹೈವೊಲ್ಟೇಜ್ ಅಖಾಡವಾಗಿ ಪರಿಣಮಿಸಿತ್ತು. ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿ ಅಭ್ಯಥರ್ಿ ಚಂದ್ರಶೇಖರ ಅವರ ನಡೆ ರಾಜ್ಯ ರಾಜಕೀಯ ಇತಿಹಾಸದಲ್ಲಿಯೇ ಮಾತನಾಡಿಕೊಳ್ಳುವಂತಾಯಿತು. ಇದರ ಹಿಂದೆ ಕಾಣದ ಕೈಗಳ ಅವಿರತ ಪ್ರಯತ್ನ ನಡೆದಿರಬಹುದಲ್ಲವೇ ಇದನ್ನು ಅಲ್ಲಗಳೆಯಲು ಬರುವುದಿಲ್ಲ ಕೂಡ.
ಬಳ್ಳಾರಿ ಕಾಳಗವಂತೂ ರಾಜ್ಯದ ಜನರು ಅತೀ ಕುತೂಹಲದಿಂದ ನೋಡುತ್ತಿದ್ದರೂ ಆದರೆ ಅಲ್ಲಿ ಎಡವಿದ್ದು ಮಾತ್ರ ಬಿಜೆಪಿಯ ನಾಯಕರು ಮಾತ್ರ. ಕೇವಲ ತಮ್ಮ ತಪ್ಪಿನಿಂದಾಗಿ ಕೈಯಲ್ಲಿರುವ ಕ್ಷೇತ್ರವನ್ನು ಬಿಜೆಪಿ ಕಳೆದು ಕೊಳ್ಳುವಂತಾಯಿತು. ಸಚಿವ ಡಿ.ಕೆ. ಶಿವಕುಮಾರ ಅವರ ಚಾಣಾಕ್ಷತೆ ಇಲ್ಲಿ ಮತ್ತೊಮ್ಮೆ ಪ್ರೂವ್ ಆಗಿದೆ. ಅದರಲ್ಲಿ ಮೈತ್ರಿಯ ಒಗ್ಗಟ್ಟಿನ ಮಂತ್ರ ಇಲ್ಲಿ ವಕರ್ೌಟ್ ಆಗಿದೆ ಎನ್ನಬಹುದು. ಮಂಡ್ಯದಲ್ಲಿ ಜೆಡಿಎಸ್ನ ಅಭ್ಯಥರ್ಿಯೇ ಗೆಲ್ಲುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಬಿಜೆಪಿಯ ಅಭ್ಯಥರ್ಿ ಮತಗಳನ್ನು ಪಡೆಯುವುದರಲ್ಲಿ ಹಿಂದೆ ಬಿದ್ದಿಲ್ಲ ಎಂಬ ಸಮಾಧಾನ ಕೆಲ ಬಿಜೆಪಿ ಮುಖಂಡರಲ್ಲಿ ಮನೆ ಮಾಡಿದೆ. ಇದು ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬಲಿಷ್ಠಪಡಿಸಬಹುದು ಎಂಬ ಸಂದೇಶವಾಗಿದೆ. ಇನ್ನೂ ಜಮಖಂಡಿಯ ಸ್ಥಿತಿ ಗೊತ್ತಿರುವ ವಿಷವೇ ಬಿಡಿ. ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರ ಕೆಲಸಗಳು ಮತ್ತು ಅನುಕಂಪದ ಅಲೆಯಲ್ಲಿ ಆನಂದ ಗೆಲುವಿನ ದಡ ಸೇರಿದರು. ಆದರೂ ಜಮಖಂಡಿಯಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವನ್ನು ಬಿಜೆಪಿಯ ಮುಖಂಡರು ವ್ಯಕ್ತಪಡಿಸಿದ್ದರು. ಆದರೆ ಹೇಳಿಕೊಳ್ಳುವಂತಹ ಒಗ್ಗಟ್ಟಿನ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿತ್ತು ಎಂಬುದು ಹಲವರ ಮಾತು.
ಹೀಗೆ ಚುನಾವಣೆ ಮೊದಲಿನ ಮತ್ತು ಚುನಾವಣೆಯ ನಂತರದ ರಾಜಕೀಯ ನಾಯಕರುಗಳ ಒರಸೆಗೂ ತೀರಾ ವ್ಯತ್ಯಾಸ ಇರುತ್ತದೆ. ಅವರ ಮಾತಿನಲ್ಲಿ ಮಾತು ಇರುವುದಿಲ್ಲ. ಇದು ಗೊತ್ತಿದ್ದರೂ ಪೆಟ್ಟು ತಿನ್ನುವನು ಮಾತ್ರ ಸಾಮಾನ್ಯ ಕಾರ್ಯಕರ್ತನೇ ಬಿಡಿ. ಕಳೆದ ಹಲವು ವರ್ಷಗಳಲ್ಲಿ ಜಗತ್ತಿನಲ್ಲಿ ಏನೆಲ್ಲ ಬದಲಾಗಿದ್ದರೂ ರಾಜಕೀಯ ನಾಯಕರುಗಳ ಮೇಲಿನ ಸಾಮಾನ್ಯ ಜನರ ಮನಸ್ಥಿತಿ ಏಕೆ ಬದಲಾಗುತ್ತಿಲ್ಲ? ಎಂಬುದೇ ತಿಳಿಯದ ಪ್ರಶ್ನೆಯಾಗಿದೆ.