ಸರಳಾದೇವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆ ಒಂದು ಅದ್ಭುತ ಶಕ್ತಿ: ಬಿ.ಸಿ.ಬಿರಾದಾರ್
ಬಳ್ಳಾರಿ 08: ಮಹಿಳೆ ಎನ್ನುವ ಶಬ್ದವೇ ಒಂದು ಅದ್ಭುತ ಶಕ್ತಿ ಇದ್ದಂತೆ; ಇಂದು ಮಹಿಳೆ ಸಮಾಜದ ಅಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತಿದ್ದಾಳೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಿ.ಸಿ.ಬಿರಾದಾರ್ ಅವರು ಅಭಿಪ್ರಾಯಪಟ್ಟರು.
ನಗರದ ಸರಳಾದೇವಿ ಸತೀಶ್ಚಂದ್ರ ಆಗರ್ವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ವಿಧಿ 15ರ ಅಡಿ ವಿಶೇಷ ಕಾನೂನಿನ ಅವಕಾಶ ಮಾಡಿಕೊಡಲಾಗಿದ್ದು, ಇದನ್ನು ಮಹಿಳೆಯರು ಬಳಸಿಕೊಂಡು ಮುಂದೆ ಬರಬೇಕು. ಇದರಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪಡೆದುಕೊಳ್ಳಲು ಸನ್ನದ್ಧರಾಗಬೇಕು ಎಂದರು.
ಮಹಿಳೆಯರು ತಾವು ಯೋಚಿಸುವ ಆಲೋಚನೆಗಳ ಮೇಲೆ ಭವಿಷ್ಯ ನಿಂತಿರುತ್ತದೆ ಎಂಬುದನ್ನು ವ್ಯಾಖ್ಯಾನಿಸಿದ ನ್ಯಾ.ಬಿರಾದಾರ್ ಅವರು ಮನೋಭಾವನೆಗಳ ಮೂಲಕ ಬದಲಾಣೆಯಾಗಲು ಮಹಿಳೆಯರು ಸಧೃಡರಾಗಿಬೇಕು ಇಲ್ಲವಾದಲ್ಲಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದರಿ. ಎಲ್ಲ ಮಹಿಳೆಯರು ಸಕಾರಾತ್ಮವಾದ ಮನೋಭಾವನೆಗಳನ್ನು ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು.
ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಕೇವಲ ಹೆಂಡತಿಯಾಗಿ ಕಾಣುತ್ತಿದ್ದಾರೆ. ಇದು ಬದಲಾವಣೆಯಾಗಿ ತಾಯಿ, ಸಹೋದರಿ, ಮಗಳು ಅಂತ ನೋಡಿದಾಗ ದೈವಸ್ವರೂಪ ಕಾಣುತ್ತದೆ. ಭಾರತದಲ್ಲಿ ಅನೇಕ ಮಹಿಳೆಯರು ಅತ್ಯುನ್ನತ ಸಾಧನೆ ಮಾಡಿದ್ದು; ಅವರ ಅದರ್ಶ ಹಾಗೂ ದೃಷ್ಠಿಕೋನಗಳನ್ನು ನಮ್ಮ ವಿದ್ಯಾಥರ್ಿಗಳನ್ನು ತಿಳಿದುಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ನಾಗೇಶ್ ಬಿಲ್ವಾ ಮಾತನಾಡಿ, ಮಾನಸಿಕ ಒತ್ತಡದಿಂದ ಮಹಿಳೆಯರು ಬಳುತ್ತಿದ್ದಾರೆ, ಅವರು ಆ ಒತ್ತಡದಿಂದ ಹೊರಬರಲು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಗರಿಕ ಸಮಾಜದಲ್ಲಿ ಮಹಿಳೆಯರು ಉನ್ನತ ಮಟ್ಟಕ್ಕೆ ಹೋಗಲು ನಮ್ಮ ಇಲಾಖೆ ಸಧೃಡವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ದೌರ್ಜನ್ಯಕ್ಕೊಳಗಾದ ಮಹಿಳೆರಿಗಾಗಿ ರಾಜ್ಯ ಸಕರ್ಾರದಿಂದ ಗೆಳತಿ ಹಾಗೂ ಕೇಂದ್ರ ಸಕರ್ಾರದಿಂದ ಸಖಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮ ಸಮಾಜ ನಿಮರ್ಾಣವಾಗಬೇಕಾದರೆ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಬಿ.ಹಂದ್ರಾಳ್, ಪ್ರಾಂಶುಪಾಲ ಯು.ಬಿ. ಅಬ್ದುಲ್ ಮುತಾಲಿಬ್ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು ಇದ್ದರು.