ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಭಾರತ: ಸುಭಾಷ್
ಲೋಕದರ್ಶನ ವರದಿ
ಬಳ್ಳಾರಿ 27: ವಿಶ್ವದಲ್ಲೇ ವಿಶಿಷ್ಟತೆಯನ್ನು ಪಡೆದ ರಾಷ್ಟ್ರ ಭಾರತ. ವಿವಿಧತೆಯಲ್ಲಿ ಏಕತೆ ಹೊಂದಿದೆ. ಇಲ್ಲಿನ ಪ್ರತಿಯೊಂದು ರಾಜ್ಯಗಳು ಸಹ ಸಂಸ್ಕೃತಿ, ಆಚರಣೆ, ಶಿಕ್ಷಣ, ಆಹಾರ, ಉಡುಗೆ-ತೊಡುಗೆ ಎಲ್ಲದರಲ್ಲೂ ವೈವಿಧ್ಯತೆಯನ್ನು ಹೊಂದಿದೆ ಎಂದು ವಿಎಸ್ಕೆಯುಬಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ ಎಂ.ಎಸ್ ಸುಭಾಷ್ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ (ಸ್ವಾಯತ್ತ)ಕಾಲೇಜಿನಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ 6ನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ ವಿವಿಧತೆ ಹಾಗೂ ಏಕತೆಯಲ್ಲಿ ಭಾರತ ರಾಷ್ಟ್ರವು ಶ್ರೀಮಂತವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಂಜಾಬ್ನಿಂದ ಕೋಲ್ಕತ್ತಾದವರೆಗೂ ವಿಶೇಷತೆಗಳನ್ನು ಒಳಗೊಂಡಿದೆ. ಪ್ರಸ್ತುತ ಭಾರತ ಯುವಜನತೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಪ್ರಪಂಚದಲ್ಲೇ ಶ್ರೇಷ್ಟ ಪ್ರಥಮ ರಾಷ್ಟ್ರವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸ.ಸ.ಅ ಕಾಲೇಜಿನ ಪ್ರಾಂಶುಪಾಲರಾದ ಯು.ಅಬ್ದುಲ್ ಮುತಾಲಿಬ್ ಮಾತನಾಡಿ, ನಮ್ಮ ಇಂಡಿಯಾ ವೈವಿಧ್ಯಮಯ ರಾಷ್ಟ್ರವಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿದೆ. 7ದಶಕಗಳ ಹಿಂದೆ ನಾವೆಲ್ಲರೂ ಒಂದಾಗಿದ್ದಕ್ಕೆ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿದ್ದು. ಯುವಕರು ದೇಶವನ್ನು ಪ್ರೀತಿಸಬೇಕು. ಎಲ್ಲಾ ಧರ್ಮ ಗ್ರಂಥಗಳು ಹೇಳುವುದು ಒಂದೇ ಅದೇ ಎಲ್ಲರು ಸಮಾನರು, ಎಲ್ಲರು ಒಂದೇ ಎಂದು. ಯುವಕರು ಸ್ವಾಹಿತಾಸಕ್ತಿಯಿಂದ ಎನ್.ಎಸ್.ಎಸ್ ನಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುವ ಕಾರ್ಯ ಹೆಚ್ಚಾಗಬೇಕೆಂದು ತಿಳಿಸಿದರು.
ತಮಿಳುನಾಡು ಎನ್.ಎಸ್.ಎಸ್ ಸಂಚಾಲಕರಾದ ಪ್ವೌಲ್ ರಾಯ್ ಮಾತನಾಡಿದರು. ಕಾಲೇಜಿನಿಂದ ವಿಎಸ್ಕೆಯುಬಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ| ಎಂ. ಎಸ್ ಸುಭಾಷ್ ಅವರಿಗೆ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಶೀಲಮ್ಮ ಕೇರಳ ಎನ್.ಎಸ್.ಎಸ್ ವಿದ್ಯಾಥರ್ಿಗಳ ಸಂಚಾಲಕರು, ಪುಷ್ಪ ರಾತೋಡ್ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಪತ್ರಿಕೋದ್ಯಮ ಉಪನ್ಯಾಸಕ ಜಯರಾಮ.ಟಿ, ಸುಂಕಣ್ಣ.ಟಿ, ಸರಳಾದೇವಿ ಕಾಲೇಜಿನ ಎನ್.ಎಸ್.ಎಸ್ ಸಂಚಾಲಕ ಕೊಟ್ರಪ್ಪ, ಕಾವಲಯ್ಯ, ಶ್ರೀನಿವಾಸ್ ರೆಡ್ಡಿ, ರಾಮಾಂಜಿನೇಯುಲು, ಸುಭಾಷ್ ಪಾಟೀಲ್, ಕಾಲೇಜಿನ ಉಪ ಪ್ರಾಂಶುಪಾಲ ಮನೋಹರನ್, ಉಪನ್ಯಾಸಕ ನಾಗರಾಜ, ಪಂಚಾಕ್ಷರಿ ಇತರರು ಇದ್ದರು. ರಾಷ್ಟ್ರೀಯಾ ಸೇವಾ ಆಯೋಜನೆಯ ಶಿಬಿರಾಥರ್ಿಗಳಿಂದ ಇಂದು ಜಗತ್ತಿನ ಎರಡನೇ ಏಕಶಿಲಾ ಬೆಟ್ಟವಾದ ಬಳ್ಳಾರಿ ಕೋಟೆಗೆ ಭೇಟಿ ನೀಡಲಾಯಿತು. ಅಲ್ಲಿನ ಆಗಿನ ವ್ಯವಸ್ಥೆಗಳು, ಒಳ ಚರಂಡಿ, ದೇವಾಲಯ, ಕೋಟೆಯ ಇತಿಹಾಸ, ಸಂಗ್ರಹ ಕೊಠಡಿಗಳು ಇತ್ಯಾದಿಗಳ ಮಾಹಿತಿ ನೀಡಲಾಯಿತು.