ತಾಳಿಕೋಟಿ

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

ತಾಳಿಕೋಟೆ 16: ಪಟ್ಟಣ ಜನ ಸೇವಾ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವನ್ನು ಗೌರಿ ಕಾಂಪ್ಲೆಕ್ಸ್ ಸಂಘದ ಕಾಯರ್ಾಲಯದಲ್ಲಿ ಸಂಘದ ಅಧ್ಯಕ್ಷರಾದ ಅಮಿತಸಿಂಗ್ ಮನಗೂಳಿ ನೆರವೇರಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನಪಿಸಿಕೊಳ್ಳುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಹಬ್ಬವನ್ನು ಆಚರಣೆ ಮಾಡಬೇಕು.ಯುವಕರು ನಮ್ಮ ದೇಶವನ್ನು ಉನ್ನತ ಶ್ರೇಣಿಗೆ ತೆಗೆದುಕೊಂಡು ಹೋಗಬೇಕಾಗಿದೆ. ಸ್ವಾತಂತ್ರ್ಯದ ಉದ್ದೇಶವನ್ನು ಮೊದಲು ಯುವಕರು ಅರಿತು ಜವಾಬ್ದಾರಿಯಿಂದ  ಸಮಾಜದಲ್ಲಿ ನಡೆದು ಕೊಳ್ಳಬೇಕಾಗಿದೆ ಎಂದು ಜನ ಸೇವಾ ಸಂಘದ ಅಧ್ಯಕ್ಷ ಅಮಿತಸಿಂಗ ಮನಗೂಳಿ ತಿಳಿಸಿದರು. ಈ ಸಂದರ್ಭದಲ್ಲಿ ವಿಠ್ಠಲಸಿಂಗ ಹಜೇರಿ, ನಿತಿನ ವಿಜಾಪುರ, ವಿಶ್ವನಾಥ ಎಲ ಹಜೇರಿ, ಪ್ರಭು ಗೌಡಗೇರಿ, ರಾಜು ಹಜೇರಿ, ರಮೇಶ ವರದಪ್ಪನವರ, ರಾಜು ಮೂಲಿಮನಿ, ಗೌತಮ ಪತ್ತೆಪುರ, ಪವನ ಬಬಲೇಶ್ವರ, ರಾಜೇಶ ಹಜೇರಿ, ರಾಘು ಕೊಳಕೂರ, ರವಿ ಇಬ್ರಾಹಿಂಪುರ, ಮಹೇಶ್ ಕಾಜಗರ, ಮುತ್ತು ಬುಡ್ಡರ, ಸಂತೋಷ ರಾಥೋಡ, ಬಸವರಾಜ ಅರಬಳಿ, ರಾಮು ಹಜೇರಿ ಹಲವರು ಉಪಸ್ಥಿತರಿದ್ದರು 

ಸುದ್ದಿ ಓದಿ