ಅಗ್ನಿ ಪಥ ಯೋಜನೆಯಿಂದ ಪ್ರಧಾನಿ ಕುರಿತು ಹೆಚ್ಚಾದ ವಿಶ್ವಾಸ
ಪ್ರತಿಭಟನೆ ಕಾಂಗ್ರೆಸ್ ಪ್ರಚೋದಿತ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿಕೆ
ತಾಳಿಕೋಟೆ28: ಅಗ್ನಿ ಪಥ ಯೋಜನೆ ವಿರುದ್ಧ ನಡೆದ ಹೋರಾಟಗಳು ಕಾಂಗ್ರೆಸ್ ಪಕ್ಷದ ಪ್ರಚೋದಿತ ಹೋರಾಟವಾಗಿದೆ. ಕಾಂಗ್ರೆಸ್ನ ಪ್ರಚೋದನೆಗೆ ಒಳಗಾಗದೇ ಸೈನ್ಯಕ್ಕೆ ಸೇರಲು ಯುವಕರು ಮುಂದಾಗುತ್ತಿರುವದು ಪ್ರಧಾನಿ ನರೇಂದ್ರ ಮೋದಿ, ಸೈನ್ಯದ ಮೇಲಿನ ವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಅಗ್ನಿಪಥ ಜಾರಿಯಾದ ನಂತರ ವಿರೋಧ ಪಕ್ಷಗಳ ಪ್ರೇರಿತವಾಗಿ ಹೋರಾಟ ಆರಂಭಿಸಿ ಸಾರ್ವಜನಿಕ ಆಸ್ತಿಗಳ ಮೇಲೆ ಹಾನಿ ಮಾಡಿದರು. ಅವರು ಯಾರು ಸೈನ್ಯಕ್ಕೆ ಸೇರುವ ಯುವಕರಲ್ಲ. ಕಾಂಗ್ರೇಸ್ ಪಕ್ಷ ಹೋರಾಟದಲ್ಲಿ ಭಾಗವಹಿಸಿದೆ. ಎಷ್ಟೆ ಟೀಕೆ ಹಾಗೂ ಅಪಪ್ರಚಾರ ನಡೆಸಿದರೂ ಸಹಿತ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇರುವ ಅಭಿಮಾನ ಮತ್ತು ಸೈನ್ಯದ ಅಭಿಮಾನ ಕಡಿಮೆಯಾಗಿಲ್ಲ ಎನ್ನುವದಕ್ಕೆ ನಾಲ್ಕು ದಿನದಲ್ಲಿ 80 ಸಾವಿರಕ್ಕೂ ಅಧಿಕ ಅಜರ್ಿಗಳೇ ಹೇಳುತ್ತವೆ. ಯುವಕರು ದೇಶ ಸೇವೆ ಸಿಗುವದು ಸೌಭಾಗ್ಯ ಎನ್ನುತ್ತಾರೆ. ದೇಶ ಸೇವೆಯಲ್ಲಿ ವೇತನ ಮುಖ್ಯವಲ್ಲ ಎಂದು ತೋರಿಸಿದ್ದಾರೆ. ಬಡವರು ಸೈನ್ಯಕ್ಕೆ ಸೇರುವದು ವೇತನಕ್ಕಾಗಿ ಎನ್ನುವ ಟಿಕೆಗಳಿಗೆ ಯುವಕರೇ ಉತ್ತರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ಡಿಎ ಬಗ್ಗೆ ವಿರೋಧ ಪಕ್ಷವಾಗಿ ಟೀಕೆ ಮಾಡಿ ಆದರೆ ದೇಶದ ಸೈನ್ಯದ ಬಗ್ಗೆ ಗೌರವ ಇರಲಿ, ಸಜರ್ಿಕಲ್ ಸ್ಟ್ರೈಕ್ ಸಮಯದಲ್ಲಿ ಸೈನ್ಯದ ಬಗ್ಗೆ ಅಪಹಾಸ್ಯ, ವಾಕ್ಸಿನ್, ಸಿಎಎ ಸೇರಿದಂತೆ ಹಲವು ಹೋರಾಟಗಳನ್ನು ಮಾಡಿದರೂ ಸಹಿತ ನಿಮ್ಮ ಪ್ರಯತ್ನ ವಿಫಲವಾಗಿದೆ. ಈಗ ಮತ್ತೊಮ್ಮೆ ಅಗ್ನಿಪಥ ಯೋಜನೆಯಲ್ಲಿಯೂ ಸಹ ವಿಫಲವಾಗಿದ್ದಿರಿ. ನರೇಂದ್ರ ಮೋದಿಯವರು ನೇತೃತ್ವದ ಸರಕಾರ ಯಾವುದೇ ಯೋಜನೆ ತಂದರೂ ದೇಶದ ಒಳಿತಿಗಾಗಿ ತರುತ್ತದೆ ಅನ್ನುವದು ಜನಮಾನಸದಲ್ಲಿ ಉಳಿದು ಹೋಗಿದೆ. ಆನರ ಮುಂದೆ ಕಾಂಗ್ರೇಸ್ ಪಕ್ಷ ಬೆತ್ತಲಾಗಿದೆ. ಇನ್ನು ಮುಂದೆ ಯಾವುದೇ ಟಿಕೆ ಟಪ್ಪಣೆ, ವಿರೋಧ ಮಾಡುವ ಮುಂಚೆ ಅದನ್ನು ಪರಿಶೀಲಿಸಿ ಟೀಕೆ ಮಾಡುವದು ಒಳಿತು ಎಂದು ಕಿವಿ ಮಾತು ಹೇಳಿದರು.
ಜಗತ್ತಿನ ಅನೇಕ ದೇಶಗಳಲ್ಲಿ ಸೇನೆಯ ಸೇವೆ ಕಡ್ಡಾಯವಾಗಿದೆ. ದೇಶದ ರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ದೇಶದ ಜನರ ಬಬಗ್ಗೆ ಅಭಿಮಾನವಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ದೇಶ ಸೇವೆಗೆ ಹೋಗುತ್ತಿರುವ ಯುವಕರು ಕಾಂಗ್ರೇಸ್, ಜೆಡಿಎಸ್ ಪಕ್ಷಗಳಿಗೆ ಸ್ಪೂರ್ತಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಮಂಡಲಿ ಪ್ರಧಾನ ಕಾರ್ಯದಶರ್ಿ ಮಂಜು ಶೇಟ್ಟಿ, ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಚವ್ಹಾಣ, ಶಶಿಧರ ಡಿಸಲೆ, ರಾಮು ಜಗತಾಪ, ನಾಗರಾಜ ಬಳಗಾರ ಸೇರಿದಂತೆ ಇತರರು ಇದ್ದರು.