ರಾಣೆಬೆನ್ನೂರ

ಸತತ ಮಳೆ: ಮೀನುಗಾರರಿಗೆ ಕೃಷಿಕರಿಗೆ, ಪರಿಹಾರಕ್ಕಾಗಿ ಆಗ್ರಹ

ಸತತ ಮಳೆ: ಮೀನುಗಾರರಿಗೆ ಕೃಷಿಕರಿಗೆ, ಪರಿಹಾರಕ್ಕಾಗಿ ಆಗ್ರಹ

ರಾಣೆಬೆನ್ನೂರು 07:  ಕಳೆದ ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ತಾಲೂಕು ಸೇರಿದಂತೆ, ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಕಟ್ಟೆಗಳು ತುಂಬಿತುಳುಕುತ್ತಿವೆ. ಮಳೆ ಪರಿಣಾಮ, ಮೀನು ಕೃಷಿಕರು ಅಪಾರ ಪ್ರಮಾಣದ ಮೀನು ಹರಿದುಹೋಗಿ, ಲಕ್ಷಾಂತರ ರೂ.ಗಳು ನಷ್ಟವನ್ನು ಅನುಭವಿಸಿ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಕಾಣಬಹುದಾಗಿದೆ. 

ತಾಲೂಕಿನ ಬೆನಕನಕೊಂಡ ಗ್ರಾಮದ ದೊಡ್ಡಕೆರೆ, ಭಾರಿ ಮಳೆ ಅವಾಂತರದಿಂದ ಕೋಡಿ ಒಡೆದು, ಕೆರೆಯಲ್ಲಿದ್ದ ಅಪಾರ ಪ್ರಮಾಣದ ಮೀನುಗಳು ಹೊಲಗದ್ದೆಗಳಲ್ಲಿ ಸಂಗ್ರಹವಾಗಿರುವುದು ಸಾಮಾನ್ಯವಾಗಿ ಕಂಡುಬಂದಿತು. ಅಲ್ಲದೆ ಗ್ರಾಮೀಣ ನಾಗರಿಕರು ಕೆರೆ ಪಕ್ಕದ ಜಮೀನುಗಳಲ್ಲಿ, ಹರಿದು ಶೇಖರಣೆಗೊಂಡ ಭಾರಿ  ಗಾತ್ರದ ಮೀನುಗಳನ್ನು, ಹಿಡಿಯುವಲ್ಲಿ ನಿರತರಾಗಿರುವುದು ಎಲ್ಲೆಡೆಯೂ ಕಂಡುಬರುತ್ತಿತ್ತು. ಅಪಾರ ಪ್ರಮಾಣದ ಮೀನು ಹರಿದುಹೋಗಿದ್ದ ರಿಂದ, ಅಪಾರ ನಷ್ಟ ಅನುಭವಿಸಿದ  ಕೆರೆ ಟೆಂಡರ್ ದಾರ, ಬಸಪ್ಪ  ಕರಿಯಪ್ಪ ಓಲೇ ಕಾರ್ ಅವರು, ಬಡ ಮೀನು ಕೃಷಿಕರಾದ ತಮಗೆಸೂಕ್ತ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಬೇಕೆಂದು, ಜಿಲ್ಲೆಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಕೆರೆಕೋಡಿ ಒಡೆದು ಮೀನು ಹೊಲಗದ್ದೆಗಳಲ್ಲಿ, ಧಾರಾಕಾರವಾಗಿ ಹರಿಯುತ್ತಿರುವ ವಿಷಯ ತಿಳಿದು, ಬೆನಕನಕೊಂಡ ಗ್ರಾಮಕ್ಕೆಬೇಟಿ ನೀಡಿದ ಮಾಧ್ಯಮವು ಅಲ್ಲಿನ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ, ಮೀನು ಕೃಷಿಕ ಬಸಪ್ಪ ಓಲೆಕಾರ್ ಅವರನ್ನು ಸಮಾಧಾನಪಡಿಸಿದರು. ಬಾಕ್ಸ್:- ಇದ್ದ  ಸ್ವಲ್ಪ ಜಮೀನಿನಲ್ಲಿ ನಾನು ನನ್ನ ಕುಟುಂಬ ವರ್ಗದವರು, ಕೃಷಿ ಕಾಯಕದಲ್ಲಿ ತೊಡಗಿದ್ದೇವೆ. ಆದರೆ ಕಳೆದ ಐದು ವರ್ಷಗಳಿಂದ  ಮಳೆ ಬಾರದೆ, ಬಂದರೂ ಸರಿಯಾಗಿ ಬೆಳೆ ಕಾಣದೆ, ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದೇನೆ. ಜೊತೆಗೆ ಕುಟುಂಬದಬಳವಳಿಯಾಗಿ ಬಂದಿರುವ, ಮೀನು ಕೃಷಿ ಕಾಯಕದಿಂದ ಹೇಗೋ ಜೀವನ ನಡೆಸುತ್ತಿದ್ದೆ. ಕಳೆದ ಎರಡು ಸಾವಿರ ಹತ್ತೊಂಬತ್ತು ರಲ್ಲಿ, ಬೆನಕನಕೊಂಡ  ಮೀನು ಹೊಂಡದ, ಟೆಂಡರ್ ಪ್ರಕ್ರಿಯೆಯಲ್ಲಿ, ಐದು ವರ್ಷದ ಗುತ್ತಿಗೆ ನನಗಾಗಿತ್ತು, ಎರಡು ವರ್ಷ ಪೂರೈಸಿದ್ದೇನೆ. ಇನ್ನು ಮೂರು ವರ್ಷ ನನ್ನ ಅವದಿ ಇದೆ. ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ 1. ಲಕ್ಷ 26, ಸಾವಿರ ಮರಿಗಳು ಒಟ್ಟು 49,140-00 ರೂಪಾಯಿ ಮೌಲ್ಯದ ಮೀನು ಮರಿಗಳನ್ನು ಬಿಡಲಾಗಿತ್ತು, ಕಳೆದ ಅವಧಿಯಲ್ಲಿ ಬಿಟ್ಟಿರುವ, ಮರಿಗಳು ಅತಿದೊಡ್ಡ ವಾಗಿ, ಹೇಗೋ ಬದುಕು ಸಾಗಿಸುತ್ತಿದ್ದೆ, ನಿನ್ನೆ ಸುರಿದ ಭಾರಿ ಮಳೆಯಿಂದಾಗಿಭಾರಿ ನಷ್ಟ ಸಂಭವಿಸಿದೆ,ಆರ್ಥಿಕ  ಸಮಸ್ಯೆಯಿಂದ ಬಳಲುವಂತಾಗಿದೆ, ಕೃಷಿ ಸಚಿವರು, ರಾಣೆಬೆನ್ನೂರು ಶಾಸಕರು  ಮನವಿಯನ್ನು ಪುರಸ್ಕರಿಸಿ, ಪರಿಹಾರ ವಿತರಿಸಲು ಮುಂದಾಗಬೇಕು ಎಂದು ಮಾಧ್ಯಮಕ್ಕೆ ಹೇಳಿದರು 

ಸುದ್ದಿ ಓದಿ