ರಾಣೆಬೆನ್ನೂರ

ಜಿಲ್ಲೆಯಲ್ಲಿ ನಿರಂತರ ಮಳೆ: ಶಾಲೆ- ಕಾಲೇಜುಗಳಿ ರಜೆ ಘೋಷಿಸಿದ ಜಿಲ್ಲಾಡಳಿತ, ಆದೇಶ ಉಲ್ಲಂಘಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ನೋಟಿಸ್ ನೀಡಿದ ಬಿಇಓ

ಜಿಲ್ಲೆಯಲ್ಲಿ ನಿರಂತರ ಮಳೆ: ಶಾಲೆ- ಕಾಲೇಜುಗಳಿ ರಜೆ ಘೋಷಿಸಿದ ಜಿಲ್ಲಾಡಳಿತ, ಆದೇಶ ಉಲ್ಲಂಘಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ನೋಟಿಸ್ ನೀಡಿದ ಬಿಇಓ

ರಾಣೇಬೆನ್ನೂರು 28: ರಾಣೇಬೆನ್ನೂರು ನಗರ ಮತ್ತು ತಾಲೂಕು ಸೇರಿದಂತೆ ಸಮಗ್ರ ಹಾವೇರಿ ಜಿಲ್ಲೆಯಲ್ಲಿ ನಿತ್ಯ ನಿರಂತರ ಕಳೆದೊಂದು ವಾರದಿಂದ  ಸುರಿಯುತ್ತಿರುವ ಮಳೆಯ ಕಾರಣವಾಗಿ, ಜಿಲ್ಲಾಡಳಿತ ಇಂದು  ಮುಂಜಾಗ್ರತ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ನೀಡಿದ್ದರೂ. ಜಿಲ್ಲಾಧಿಕಾರಿಗಳ ಆದೇಶವನ್ನು ಬಹಿರಂಗವಾಗಿ ಶಾಲಾ ಕಾಲೇಜು ಆಡಳಿತಕ್ಕೆ, ಪ್ರಾಚಾರ್ಯರಿಗೆ ತಿಳಿದಿದ್ದರೂ ಸಹಿತ, ಆದೇಶವನ್ನು ಲೆಕ್ಕಿಸದ ನಗರದ ಪ್ರತಿಷ್ಠಿತ ರೋಟರಿ ಶಿಕ್ಷಣ ಸಂಸ್ಥೆ ಮತ್ತು ನ್ಯಾಷನಲ್ ಪಬ್ ಶಾಲೆಗಳು ಎಂದಿನಂತೆ ತಮ್ಮ ಪಾಠ ಪ್ರವಚನಗಳು ಆರಂಭಿಸಿದ್ದವು.ಸಾರ್ವಜನಿಕರ ಈ ದೂರಿನ ಮೇರೆಗೆ ಇದಕ್ಕೆ ಸಂಬಂಧಿಸಿದ  ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಮಾಹಿತಿ ಕೇಳಲಾಗಿ, ಯಾರು ಪ್ರಾರಂಭಿಸಿಲ್ಲ ಎನ್ನುವ ಉತ್ತರ. ಖುದ್ದು ಪರಿಶೀಲಿಸಲೆಂದು ಹೋದರೆ ಅಲ್ಲಿ ಪಾಠ ಪ್ರವಚನಗಳಲ್ಲಿ, ಆಟ ಪಾಠಗಳಲ್ಲಿ  ವಿದ್ಯಾರ್ಥಿಗಳು ನಿರತರಾಗಿರುವುದು ಕಂಡುಬಂದಿತು.            

ಜಿಲ್ಲಾಧಿಕಾರಿಗಳು ಘೋಷಿಸಿರುವ ಶಾಲಾ ಕಾಲೇಜುಗಳ ರಜೆ  ಆದೇಶಾನುಸಾರ ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ  ಸರ್ಕಾ ರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ  ಶಾಲೆಗಳು ತಮ್ಮ ಪಾಠ ಪ್ರವಚನ ಸ್ಥಗಿತಗೊಳಿಸಿದ್ದು ಎಲ್ಲೆಡೆಯೋ ಕಂಡುಬರುತ್ತಿದ್ದವು, ಆದರೆ ನಗರದಲ್ಲಿರುವ ಈ ರೋಟರಿ ಮತ್ತು ನ್ಯಾಷನಲ್ ಪಬ್ಲಿಕ್ ಶಾಲೆಗಳು ಮಾತ್ರ ಎಂದಿನಂತೆ ಪಾಠ ಪ್ರವಚನಗಳು ಆರಂಭಿಸಿದ್ದು, ಜಿಲ್ಲಾಧಿಕಾರಿಗಳ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವು ದು ವ್ಯವಸ್ಥೆ ಅಣುಕಿಸುವಂತಿತ್ತು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲೆಂದೇ ಶಾಲೆಗಳ ಬಾಗಿಲಿಗೆ ಬಂದು ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಚ್ ಪಾಟೀಲ್ ಅವರು, ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ತಮ್ಮ ಘಟ್ಟಿತನವನ್ನು ತೋರಿಸಿದ್ದಾರೆ.    

ರೋಟರಿ ಮತ್ತು ಎನ್ ಪಿ ಎಸ್ ಹಾಗೂ ಇತರೆ ಕೆಲವು ಶಾಲೆಗಳು ತರಗತಿಗಳು ಆರಂಭಿಸಿವೆ ಎನ್ನುವ ದೂರುಗಳು ಬರುತ್ತಿರುವುದನ್ನು ಗಮನಿಸಿದ ಮಾಧ್ಯಮಗಳು, ಪರಿಶೀಲಿಸಲೆಂದೇ ಶಿಕ್ಷಣ ಸಂಸ್ಥೆಗಳ ಬಾಗಿಲು ಮುಟ್ಟಿದರೆ, ನಿಮಗೆ ಯಾವುದೇ ಆದೇಶವಿಲ್ಲವೇ ಎನ್ನುವ ಪ್ರಶ್ನೆಗೆ, ಅವರಿಂದ ಬಂದಿದ್ದು ಮಾತ್ರ ನಿರುತ್ತರ. ಇದರಲ್ಲಿ ಪ್ರಾಚಾರ್ಯರ ಪಾತ್ರವೇನು ಇಲ್ಲ. ಆದರೆ ಆಡಳಿತ ಮಂಡಳಿಯ ನಿರ್ಧಾರವೇ ನಾವು ಪಾಲಿಸಬೇಕು. ನಾವು ಈ ವಿಚಾರದಲ್ಲಿ ನಿಸ್ಸಹಾಯಕರು, ಎನ್ನುವ ಉತ್ತರ  ಅವರಿಂದ ಕೇಳುವ ಸರದಿ ಮಾಧ್ಯಮದವರಾಗಿತ್ತು. ಕನ್ನಡದಲ್ಲಿ ಉತ್ತರಿಸದ      ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರು: ಸ್ಪಟಿಕರಣಕ್ಕೆ ಮಾಧ್ಯಮದವರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸುವುದು ಅನಿವಾರ್ಯವಾಗಿತ್ತು. ಉತ್ತರಿಸಿದ ಜಿಲ್ಲಾಧಿಕಾರಿಗಳು, ಶಿಕ್ಷಣಾಧಿಕಾರಿಗಳಿಗೆ ಆದೇಶಿಸಿ  ಶಾಲೆಗಳಿಗೆ  ಭೇಟಿ ನೀಡಿ, ಕ್ರಮ ಕೈಗೊಳ್ಳಿ, ನೋಟಿಸ್ ಜಾರಿಗೊಳಿಸಿ. ಎನ್ನುವ ಸಮಜಾಯಿಸಿ ಸಿಕ್ಕಿತ್ತು. ಕೊನೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ರೋಟರಿ ಶಿಕ್ಷಣ ಸಂಸ್ಥೆ ಮತ್ತು ನ್ಯಾಷನಲ್ ಪಬ್ಲಿಕ್ ಶಾಲೆಗೆ ಕಾರಣ ಕೇಳಿ ನೋಟಿಸ್  ಜಾರಿ ಮಾಡಿದೆ. ಮುಂದೇನಾಗುವುದೊ ಶಿಕ್ಷಣ ಸಂಸ್ಥೆಗಳ ಸಮಜಾಯಿಸಿ  ಎನ್ನುವುದನ್ನು ಮರು ಉತ್ತರ ಕೊಟ್ಟಾಗ ಮಾತ್ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಬಂದಂತಾಗುತ್ತದೆ?. ಕಾದುನೋಡಬೇಕಾಗಿದೆ. 

ಸುದ್ದಿ ಓದಿ