ಯರಗಟ್ಟಿ

ಲಕ್ಷ್ಮೀ ತಾಯಿ ಸೌಹಾರ್ದ ಬ್ಯಾಂಕ್ ನ 9ನೇ ಶಾಖೆಯನ್ನು ಉದ್ಘಾಟಿಸಿ : ಲಕ್ಷ್ಮೀ ಹೆಬ್ಬಾಳಕರ್

ಲಕ್ಷ್ಮೀ ತಾಯಿ ಸೌಹಾರ್ದ ಬ್ಯಾಂಕ್ ನ 9ನೇ ಶಾಖೆಯನ್ನು ಉದ್ಘಾಟಿಸಿ : ಲಕ್ಷ್ಮೀ ಹೆಬ್ಬಾಳಕರ್

ಲಕ್ಷ್ಮೀ ತಾಯಿ ಸೌಹಾರ್ದ ಬ್ಯಾಂಕ್ ನ 9ನೇ ಶಾಖೆಯನ್ನು ಉದ್ಘಾಟಿಸಿ : ಲಕ್ಷ್ಮೀ ಹೆಬ್ಬಾಳಕರ್ 

ಯರಗಟ್ಟಿ 11 : ಪಟ್ಟಣದ ಪಾಟೀಲ ಕಾಂಪ್ಲೆಕ್ಸದಲ್ಲಿ ಲಕ್ಷ್ಮೀ ತಾಯಿ ಸೌಹಾರ್ದ ಬ್ಯಾಂಕ್ ನ 9ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದಿನ ಸಂದರ್ಭಗಳಲ್ಲಿ ಅನೇಕ ಕಡೆ ವಿಶ್ವಾಸ ಕಳೆದುಕೊಳ್ಳುವಂಥ ಘಟನೆಗಳು ನಡೆದಿವೆ. ಒಮ್ಮೆ ವಿಶ್ವಾಸ ಕಳೆದುಕೊಂಡಲ್ಲಿ ಆಂಥ ಸಂಸ್ಥೆಗಳು ಬೆಳೆಯಲು ಸಾಧ್ಯವಿಲ್ಲ ಎಂದರು.ಯರಗಟ್ಟಿ ಭಾಗದ ರೈತರ, ವ್ಯಾಪಾರಸ್ಥರ, ಎಲ್ಲರ ಭವಿಷ್ಯದ ದೃಷ್ಟಿಯಿಂದ, ಎಲ್ಲರ ವಿಶ್ವಾಸದೊಂದಿಗೆ ಈ ಶಾಖೆಯನ್ನು ಆರಂಭಿಸಲಾಗಿದೆ. ಬ್ಯಾಂಕ್ ಅನ್ನು ಹೆಮ್ಮರವಾಗಿ ಬೆಳೆಸುವ ಉದ್ದೇಶ ಹೊಂದಿದ್ದೇವೆ. ಸಂಸ್ಥೆಯಲ್ಲಿ ರಾಜಕಾರಣ ತರದೆ ಉತ್ತಮ ಸೇವೆಯೊಂದಿಗೆ ಸಂಸ್ಥೆಯನ್ನು ಮುನ್ನಡೆಸಲಾಗುವುದು, ಅತ್ಯಂತ ಶಿಸ್ತಿನಿಂದ ಸಂಸ್ಥೆಯನ್ನು ನಡೆಸಲಾಗುತ್ತಿದೆ. ಎಲ್ಲರ ಹಣ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದರು.ಬ್ಯಾಂಕಿಂಗ್ ಕ್ಷೇತ್ರ ವಿಶ್ವಾಸದ ಮೇಲೆ ನಿಂತುಕೊಂಡಿದೆ. ವಿಶ್ವಾಸವಿದ್ದರೆ ಮಾತ್ರ ಹಣಕಾಸು ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಲಕ್ಷ್ಮೀ ತಾಯಿ ಕೋಪರೇಟಿವ್ ಬ್ಯಾಂಕ್‌ನ ಗೌರವ ಅಧ್ಯಕ್ಷರೂ ಆದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಹಿರಿಯ ಸಹಕಾರಿ ಧುರೀಣ ರವೀಂದ್ರ ಯಲಿಗಾರ್ ಮಾತನಾಡಿ, ಸಹಕಾರಿ ರಂಗದಲ್ಲಿ ರಾಜಕೀಯ ತರಬಾರದು. ರಾಜಕೀಯ ಬಂದರೆ ಸಂಸ್ಥೆ ದಾರಿ ತಪ್ಪುತ್ತದೆ. ಲಕ್ಷ್ಮೀ ತಾಯಿ ಕೋಪರೇಟಿವ್ ಸೊಸೈಟಿಯಲ್ಲಿ ಯಾವುದೇ ರಾಜಕೀಯ ಇಲ್ಲದೆ, ಜನರ ವಿಶ್ವಾಸ ಗಳಿಸಿರುವುದೇ ಸಂಸ್ಥೆ ಬೆಳೆಯಲು ಕಾರಣ ಎಂದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಪಿಹೊಳಿ, ಶಾಸಕ ವಿಶ್ವಾಸ ವೈದ್ಯ, ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ವಿಠ್ಠಲಗೌಡ ದೇವರಡ್ಡಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಸಂಸ್ಥೆಯ ಸಿಇಒ ಇಂಗಳಗಿ, ಶಂಕರ ಇಟ್ನಾಳ, ಶಿವಾನಂದ ಕರಿಗೋಣ್ಣವರ, ಫಕ್ಕೀರ​‍್ಪ ಹದ್ದನವರ, ಜೆ. ರತ್ನಾಕರ ಶೆಟ್ಟಿ, ಟಿ. ಕೆ. ಪಾಟೀಲ, ಪರ್ವತಗೌಡ ಪಾಟೀಲ, ಮಂಜುನಾಥ ತಡಸಲೂರ, ಸುರೇಶ ಭಜಂತ್ರಿ, ಅಲ್ತಾಫ್ ಮುಲ್ಲಾ, ಗೋಪಾಲ ದಳವಾಯಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ