ಮಹಾರಾಷ್ಟ್ರದಲ್ಲಿ ಮನೆಯ ಬಾಗಿಲಿಗೇ ಬರಲಿದೆ ಮದ್ಯ
ನಾಗ್ಪುರ 14: ಇದು ಮದ್ಯಪ್ರಿಯರಿಗೆ ಸಿಹಿ ಸುದ್ದಿ..! ಪಾನ ವಿರೋಧಿಗಳಿಗೆ ಕಹಿ ಸುದ್ದಿ..!! ಮಹಾರಾಷ್ಟ್ರದಲ್ಲಿ ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡಲು ರಾಜ್ಯ ಸಕರ್ಾರ ಮುಂದಾಗಿದೆ. ಇಂಥ ವ್ಯ(ಅವ್ಯ)ವಸ್ಥೆಯನ್ನು ಆರಂಭಿಸುವ ಭಾರತದ ಪ್ರಪ್ರಥಮ ರಾಜ್ಯ ಎಂಬ ಖ್ಯಾ(ಕುಖ್ಯಾ)ತಿಗೂ ಮಹಾರಾಷ್ಟ್ರ ಪಾತ್ರವಾಗಲಿದೆ.
ಮಹಾರಾಷ್ಟ್ರದ ಅಬಕಾರಿ ಖಾತೆ ರಾಜ್ಯ ಸಚಿವ ಚಂದ್ರಶೇಖರ್ ಭವಾನ್ಕುಲೆ ನಾಗ್ಪುರದಲ್ಲಿ ಈ ವಿಷಯ ಬಹಿರಂಗಗೊಳಿಸಿದ್ಧಾರೆ. ಇದು ರಾಜ್ಯದ ಮದ್ಯೋದ್ಯಮದಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಮಂತ್ರಿಮಹೋದರಯರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿವೆ. ಇದರಿಂದಾಗಿ ಹಲವು ಮಂದಿ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವುದು ಈ ವಿನೂತನ ಯೋಜನೆಯ ಉದ್ದೇಶ ಎಂದು ಅಬಕಾರಿ ಸಚಿವರು ಘನವಾದ ಕಾರಣ ನೀಡಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಇ-ಕಾಮಸರ್್ ವೆಬ್ಸೈಟ್ಗಳ ಮಾದರಿಯಂತೆ ಮಾರಾಟ ಅಂಕಣಗಳ ಮೂಲಕ ಮನೆ ಬಾಗಿಲಿಗೇ ಮದ್ಯ ಪೂರೈಸಲು ಉದ್ದೇಶಿಸಲಾಗಿದೆ. ನಾಗರಿಕರು ದಿನಸಿ ಮತ್ತು ಹಣ್ಣು-ತರಕಾರಿಗಳನ್ನು ಪಡೆಯುವಂತೆ ಮದ್ಯ ಪಡೆಯಲು ವ್ಯವಸ್ಥೆ ಮಾಡುವುದಾಗಿ ಸಚಿವ ಚಂದ್ರಶೇಖರ್ ಭವಾನ್ಕುಲೆ ತಿಳಿಸಿದ್ದಾರೆ.
ಆನ್ಲೈನ್ ಮದ್ಯ ಖರೀದಿಗೆ ವಯಸ್ಸಿನ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ನೇರ ಮಾರಾಟಗಾರರು ಗ್ರಾಹಕರ ಸಂಪೂರ್ಣ ವಿವರಗಳನ್ನು (ಆಧಾರ್ ಸಂಖ್ಯೆ) ಪಡೆದು ಅವರ ವಯಸ್ಸು ಮತ್ತು ಗುರುತು ದೃಢಪಡಿಸಿಕೊಂಡು ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಮದ್ಯದ ಬಾಟಲಿಗಳಿಗೆ ಜಿಯೋ ಟ್ಯಾಗ್ ಅಳವಡಿಸಿ ಅವುಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಗಾ ಇಡಲಾಗುವುದು ಎಂದೂ ಅವರು ವಿವರಿಸಿದ್ದಾರೆ.