ಚೌಡಯ್ಯ ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ ವಚನಕಾರ: ಸತೀಶ್ ಕಮಾರ್

ಚೌಡಯ್ಯ ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ ವಚನಕಾರ: ಸತೀಶ್ ಕಮಾರ್

ಬಳ್ಳಾರಿ 21:ಅಂಬಿಗರ ಚೌಡಯ್ಯನವರು ಬಸವಣ್ಣನವರ ಕಾಲದಲ್ಲಿಯೇ ತಮ್ಮ ವಿಶಿಷ್ಟ ವಚನಗಳ ಮೂಲಕ ಗಮನ ಸೆಳೆದಿದ್ದ ಮಹಾನ್ ಪುರುಷ ಎಂದು ಅಪರ ಜಿಲ್ಲಾಧಿಕಾರಿ ಎಂ ಸತೀಶ್ ಕುಮಾರ್ ಹೇಳಿದರು.

    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಾಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಸೋಮವಾರದಂದು ಏರ್ಪಡಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು 

ಚೌಡಯ್ಯವನರ ವೃತ್ತಿಯಲ್ಲಿ ಅಂಬಿಗನಾದರು, ಪ್ರವೃತ್ತಿಯಲ್ಲಿ ವಚನಕಾರರಾಗಿದ್ದರು. ಬಸವಣ್ಣವರ ಕಾಲದಲ್ಲಿಯೇ ಅಂಬಿಗರ ಚೌಡಯ್ಯನವರು ತಮ್ಮ ವಿಶಿಷ್ಟ, ನೇರ, ನಿಷ್ಠುರ ವಚನಗಳ ಮೂಲಕ ಗಮನ ಸೆಳದಿದ್ದರು ಎಂದು ಹೇಳಿದ ಅವರು ಅವರ ತತ್ವ, ಸಂದೇಶಗಳು ಮಾನವನ ಕೂಲಕ್ಕೆ ಸ್ಪೂತರ್ಿದಾಯಕವಾಗಿದೆ. ಇಂತಹ ವ್ಯಕ್ತಿಯನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿರಬೇಕು. ಎಂದು ಹೇಳಿದರು.

ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕ ಕೆ.ಬಸಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಜಯತೀರ್ಥ ಜಹಗೀರ್ ದಾರ್ ಅವರಿಂದ ಅಂಬಿಗರ ಚೌಡಯ್ಯನವರ ವಚನ ಗಾಯನವನ್ನು ಹಾಡಿದರು. 

    ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ  ಬಿ.ನಾಗರಾಜ್ ಅವರು ಸ್ವಾಗತಿಸಿ ವಂದಿಸಿದಿರು. ಸಮಾಜದ ಮುಖಂಡರುಗಳಾದ ಗಾಳೇಪ್ಪ, ಚಂದ್ರಿಕಾ, ವೆಂಕಟೇಶ್, ಪುರೋಹಿತ್, ಹನುಮಪ್ಪ,  ಗೋನಾಳ್ ಶಿವಶಂಕರ್, ದತ್ತಾತ್ರೇಯ ರೆಡ್ಡಿ, ರಂಗಪ್ಪ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.

 

ಸುದ್ದಿ ಓದಿ