ಜನರ ನಿರೀಕ್ಷೆಗೆ ತಕ್ಕ ಹಾಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ: ಶಾಸಕ ಬಸವರಾಜ ಶಿವಣ್ಣನವರ
ಬ್ಯಾಡಗಿ 03: ಜನರ ನಿರೀಕ್ಷೆಗೆ ತಕ್ಕ ಹಾಗೆ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು ಸ್ಥಳೀಯ ತಾಲೂಕಾ ಪಂಚಾಯತ್ ಆವರಣದಲ್ಲಿರುವ ಶಾಸಕರ ಜನ ಸಂಪರ್ಕ ಕಾರ್ಯಾಲಯ ಉದ್ಘಾಟನೆ ಮಾಡಿ ಮಾತನಾಡಿದರು. ಕ್ಷೇತ್ರದ ಪ್ರತಿಯೊಬ್ಬರೂ ತಮ್ಮ ನೋವು ನಲಿವುಗಳನ್ನು ಶಾಸಕರಲ್ಲಿ ಹಂಚಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಈ ಕಾರ್ಯಾಲಯ ಸಹಕಾರಿಯಾಗಲಿದೆ.
ಕ್ಷೇತ್ರದ ಜನತೆ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದ್ದು ಅವರ ಆಸೆಯಂತೆ ಅವರ ಮನ ಮೆಚ್ಚುವಂತೆ ವಿನಮ್ರವಾಗಿ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದರಲ್ಲದೇ ಪಕ್ಷಾತೀತವಾಗಿ ಎಲ್ಲ ಜನತೆಯ ಕೆಲಸ ಮಾಡುವುದಾಗಿ ಹೇಳಿದರು.ಕಾಂಗ್ರೇಸ್ ಪಕ್ಷದ ಧುರೀಣ ಎಸ್.ಆರ್.ಪಾಟೀಲ ಮಾತನಾಡಿ ಪ್ರತಿಯೊಬ್ಬ ನಾಗರಿಕರು ತಮ್ಮ ದೈನಂದಿನ ವಿವಿಧ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಲು ಕಾರ್ಯಾಲಯವು ಅನುಕೂಲವಾಗಲಿದೆ. ಶಾಸಕರು ಕ್ಷೇತ್ರದಲ್ಲಿದ್ದಾಗ ಈ ಕಾಯರ್ಾಲಯದಲ್ಲಿ ಸಿಗಲಿದ್ದಾರೆ. ಮತಕ್ಷೇತ್ರದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರಲ್ಲದೇ ಶಾಸಕರು ಕಾರ್ಯಾಲಯದ ಜೊತೆಗೆ ಕಾಂಗ್ರೇಸ್ ಪಕ್ಷದ ಕಾಯರ್ಾಲಯದಲ್ಲಿಯೂ ಪ್ರತಿನಿತ್ಯ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಬೇಕೆಂದು ಮನವಿ ಮಾಡಿದರು. ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ, ಶಿವನಗೌಡ ಪಾಟೀಲ, ಕಾರ್ಯದರ್ಶಿ ರಮೇಶ್ ಸುತ್ತಕೋಟಿ, ಮಾರುತಿ ಅಚ್ಚಿಗೇರಿ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಅಂಗಡಿ, ಸುಮಿತ್ರಮ್ಮ ನವಲೆ, ಧುರೀಣರ ಬೀರಪ್ಪ ಬಣಕಾರ,ಶಿವಣ್ಣ ಅಂಬಲಿ, ಪರಮೇಶಪ್ಫ ಶಿವಣ್ಣನವರ, ಸುಭಾಶ್ ಮಣ್ಣಮ್ಮನವರ, ಡಿ.ಎಚ್.ಬುಡ್ಡನಗೌಡ್ರ, ಖಾದರ್ ಸಾಬ್ ದೊಡ್ಡಮನಿ, ದುರ್ಗಿ ಶ ಗೊಣೆಮ್ಮನವರ, ಪುಟ್ಟನಗೌಡ ಪಾಟೀಲ, ರಮೇಶ್ ಕಟಕೋಳ, ಬಸವರಾಜ ಬಳ್ಳಾರಿ, ಸೇರಿದಂತೆ ಇತರರಿದ್ದರ