ಮತ ಹಾಕಿದ ಎಲ್ಲ ಸಮಾಜದ ಕೆಲಸ ಮಾಡಿ ಋಣ ತೀರಿಸುತ್ತೇನೆ: ಶಾಸಕ ಪಠಾಣ
I will repay the debt by working for all the people who voted for me: MLA Pathana
ಮತ ಹಾಕಿದ ಎಲ್ಲ ಸಮಾಜದ ಕೆಲಸ ಮಾಡಿ ಋಣ ತೀರಿಸುತ್ತೇನೆ: ಶಾಸಕ ಪಠಾಣ
ಶಿಗ್ಗಾವಿ 09 : ಕ್ಷೇತ್ರದ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಭಾವಿಸಿ 50 ಕೋಟಿ ವೆಚ್ಚದಲ್ಲಿ ವಿವಿಧ ದೇವಸ್ಥಾನಗಳ ಜೀರ್ಣೋದ್ದಾರ ಕಾಮಗಾರಿಗೆ ಚಾಲನೆ ನೀಡಿದ್ದಾಗಿ ಶಾಸಕ ಯಾಸೀರಖಾನ್ ಪಠಾಣ ತಿಳಿಸಿದರು.ಬಂಕಾಪೂರ ಪಟ್ಟಣದ ಸಿಂಪಿಗಲ್ಲಿಯ ವಿಠಲ-ರುಕ್ಷೀಣಿ ದೇವಸ್ಥಾನದ ಜೀರ್ಣೋ ದ್ವಾರ, ಶ್ರೀಭಾವಸಾರ ಸಮುದಾಯ ಭವನದ 50 ಲಕ್ಷ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನನ್ನ ಗೆಲುವಿಗೆ ಆಶೀರ್ವದಿಸಿದ ಕ್ಷೇತ್ರದ ದೇವರು ಸ್ಮರಿಸಿ ದೇವಸ್ಥಾನ ಅಭಿವೃದ್ಧಿ, ಜತೆಗೆ ಮತ ಹಾಕಿದ ಎಲ್ಲ ಸಮಾಜಗಳ ಜನರ ಕೆಲಸ ಮಾಡಿ, ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಒಂದು ಸಾವಿರ ದೇವಸ್ಥಾನಗಳ ಅಭಿವೃದ್ಧಿಗೆ ಅರ್ಜಿ ಬಂದಿವೆ. ಈಗಾಗಲೇ 500 ಸಭಾ ಭವನ, ಬೀರಲಿಂಗೇಶ್ವರ, ವಿಠಲ-ರುಕ್ಷೀಣಿ, ಆಂಜನೇಯ, ಉಡಚುದೇವಿ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ, ಸವಣೂರಿನ ಖಂಡೋಭಾ ದೇವಸ್ಥಾನ ಅಭಿವೃದ್ಧಿಗೆ 50 ಲಕ್ಷ ಡಾ.ಅಂಬೇಡ್ಕರ್ ಸಮುದಾಯ ಭವನ, ಚಾಮುಂಡೇಶ್ವರಿ ದೇವ ಸ್ಥಾನದ ಅಭಿವೃದ್ಧಿಗೆ ತಲಾ 25 ಲಕ್ಷ ಸೇರಿದಂತೆ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ 50 ದೇವಸ್ಥಾನಗಳಿಗೆ ಅನುದಾನ ನೀಡಿದ್ದೇನೆ. ಉಳಿದಂತೆ ಎಲ್ಲ ದೇವಸ್ಥಾನಗಳ ಅಭಿವೃದ್ಧಿಗೆ ಹಂತ, ಹಂತವಾಗಿ ಹಣ ನೀಡಲು ನಿರ್ಣಯಿಸಿದ್ದೇನೆ. ಮರಾಠ ಜನರ ಋಣ ನನ್ನ ಮೇಲಿದೆ, ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದ ಶಾಸಕರು, ತಾಲೂಕು ಮಟ್ಟದಲ್ಲಿ ಸಭಾ ಭವನ ನಿರ್ಮಿಸುವ ಭರವಸೆ ನೀಡಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 