ಹಾಸ್ಯ ವಿಶಿಷ್ಟ ಗ್ರಹಿಕೆಯ ಅಭಿವ್ಯಕ್ತಿ: ಸತೀಶ್
ಲೋಕದರ್ಶನ ವರದಿ
ಹೂವಿನಹಡಗಲಿ 27: ನವರಸಗಳಲ್ಲಿ ಒಂದಾದ ಹಾಸ್ಯ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ.ಸಂದರ್ಭವನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅಭಿವ್ಯಕ್ತ ಪಡಿಸಿದಾಗ ಹಾಸ್ಯ ಉಂಟಾಗುವುದೆಂದು ಶಿಕ್ಷಕ ಜಿ.ಎಸ್.ಸತೀಶ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ತಾಲೂಕಿನ ಉತ್ತಂಗಿ ಗ್ರಾಮದ ಶಂಕರಸ್ವಾಮಿ ಮಠದಲ್ಲಿ ನಡೆದ ಗುಡೆಕೋಟೆ ಕರಿಸಬಪ್ಪ ಮತ್ತು ಚಂದ್ರಮ್ಮ, ಕಂಪ್ಲಿ ತೋಟದ್ದೇವರ ಹಿರೇಮಠದ ಕೊಟ್ರಯ್ಯ,ಎನ್.ಆರ್.ಶಿವನಾಗಪ್ಪಗೌಡ,ವ್ಯಾಕರಣ ತೀರ್ಥ ಚಂದ್ರಶೇಖರಶಾಸ್ತ್ರಿ ಸ್ಮರಣಾರ್ಥ ದತ್ತಿ ಉಪನ್ಯಾಸಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ದತ್ತಿದಾನಿ ಗುಡೆಕೋಟೆ ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು.ಕಸಾಪ ಮಾಜಿ ಅಧ್ಯಕ್ಷೆ ಕೌಶಲ್ಯಬಾಯಿ,ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯ ರಾಜ್ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ತೋ.ಮ.ಶಂಕ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಸೋಮಶಂಕರ ಸ್ವಾಮೀಜಿ ಆಶೀವರ್ಾಚನ ನೀಡಿದರು.ಡಾ.ಕೆ.ಸತೀಶ ಸ್ವಾಗತಿಸಿದರು. ಕಸಾಪ ಅಧ್ಯಕ್ಷ ಟಿ.ವೀರೇಂದ್ರಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಕೆ.ಮಾರುತಿ ನಿರೂಪಿಸಿದರು