ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕಾಗಿದೆ: ಪ್ರಾಣೇಶ್
ಲೋಕದರ್ಶನ ವರದಿ
ರಾಣೇಬೆನ್ನೂರು 16: ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಇಂದಿನ ಪಾಲಕರು ಪೋಷಕರು ಮಾಡಬೇಕಿದೆ. ಆಧುನಿಕತೆಯ ಜೀವನದ ಜಂಜಾಟದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಧಾಮರ್ಿಕತೆಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿರುವುದರಿಂದ ತಮ್ಮ ಜೀವನವನ್ನು ತಾವೇ ಅಧೋಗತಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಖ್ಯಾತ ಹಾಸ್ಯಗಾರ ಗಂಗಾವತಿ ಬೀಚಿ ಪ್ರಾಣೇಶ ಹೇಳಿದರು.
ರವಿವಾರ ಮಾಗೋಡ ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಆನಂದಮಯ ಜೀವನಕ್ಕಾಗಿ ಆಧ್ಯಾತ್ಮ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿನೋದದಿಂದ ವಿವೇಕ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಟೀವಿ. ಮೊಬೈಲ್ ಗಳಲ್ಲಿ ಹೆಚ್ಚಾಗಿ ಕಾಲ ಕಳೆಯುವ ಬದಲು ಉತ್ತಮವಾದ ಪುಸ್ತಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಹೆಚ್ಚಾಗಿ ಯಾರು ಉತ್ತಮವಾದ ಪುಸ್ತಕಗಳನ್ನು ಓದುತ್ತಾರೆ ಅಂತವರು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯವಾಗುತ್ತದೆ. ಓದುವಿನಿಂದ ವಿವೇಕ, ಜ್ಞಾನ, ಆತ್ಮವಿಶ್ವಾಸ, ಸ್ಪೂತರ್ಿ ಹೀಗೆ ನಮ್ಮ ಜೀವನಕ್ಕೆ ಬೇಕಾಗುವ ಮಾನವೀಯ ಮೌಲ್ಯಗಳು ವೃದ್ಧಿಯಾಗುತ್ತವೆ. ಈ ನಿಟ್ಟಿನಲ್ಲಿ ಸರ್ವರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಿ ಎಂದು ಪ್ರಾಣೇಶ ಹೇಳಿದರು.
ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿದಾಗ ಆ ಮಕ್ಕಳು ಸಮಾಜದಲ್ಲಿ ಎಲ್ಲರಗಿಂತ ಮಿಗಿಲಾಗಿ ಹುನ್ನತೆ ಹುದ್ದೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅತಿ ವೇಗವಾಗಿ ಗುರುತಿಸಿಕೊಂಡು ಸಮಾಜದಲ್ಲಿ ಆದರ್ಶರಾಗಿ ಬೆಳೆಯಬಲ್ಲರು. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಲಾಭಕ್ಕಾಗಿ ಹಾಗೂ ಪ್ರತಿಷ್ಠಗಾಗಿ ಮಕ್ಕಳಿಗೆ ಹೋಮ್ವಕರ್್ ಹೊರೆಯನ್ನು ಹಾಕುತ್ತಾರೆ. ಇದರಿಂದ ಮಕ್ಕಳು ಮಾನಸಿಕ ಸ್ಥಿರತೆ ಹಾಗೂ ಬುದ್ಧಿಮಟ್ಟ ಕ್ಷೀಣಿಸುತ್ತದೆ ಎಂದರು.
ಭಾರವಾಗುವ ಬ್ಯಾಗ್, ಬಿಡುವಿಲ್ಲದ ಹೋಮ್ವಕರ್್ ಇಂತಹ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ. ಸರಕಾರವು ಅತ್ಯಂತ ಸ್ಪಧರ್ಾತ್ಮಕ ಪರೀಕ್ಷೆಯಿಂದಾಗಿ ಉತ್ತಮ ಶಿಕ್ಷಕರನ್ನು ನೇಮಿಸುತ್ತಿದೆ. ಜೊತೆಗೆ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಉಚಿತ ಶಿಕ್ಷಣ ನೀಡುತ್ತಿದೆ. ಹೀಗಿದ್ದರೂ ಪ್ರಜ್ಞಾವಂತರೇ ತಮ್ಮ ಮಕ್ಕಳನ್ನು ಕಾನ್ವೆಂಟ್, ಇಂಗ್ಲೀಷ್ ಮೀಡಿಯಂ ಸೇರಿದಂತೆ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿರುವುದು ವಿಷಾಧದ ಸಂಗತಿ ಎಂದರು.
ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಸಾನಿಧ್ಯವಹಿಸಿ ಮಾತನಾಡಿ, ಧಾಮರ್ಿಕತೆ ಹಾಗೂ ಆಧ್ಯಾತ್ಮಕ್ಕೆ ನಮ್ಮ ದೇಶದಲ್ಲಿ ಅಪಾರವಾದ ಶಕ್ತಿ ಇದೆ. ರಾಮಾಯಣ ಮತ್ತು ಮಹಾಭಾರತ, ಭಗವದ್ಗೀತೆ ಸೇರಿದಂತೆ ಹಲವಾರು ಸನ್ನಿವೇಶಗಳ ಚಿತ್ರಣವನ್ನು ಹಾಗೂ ಕಥೆಗಳನ್ನು ಮಕ್ಕಳಿಗೆ ತಿಳಿ ಹೇಳುವ ಕಾರ್ಯವಾಗಬೇಕಿದೆ. ಸರಕಾರವೂ ಸಹ ನಮ್ಮ ಸಂಸ್ಕೃತಿಗೆ ತಕ್ಕ ಹಾಗೆ ಧಾಮರ್ಿಕತೆಯ ಹಾಗೂ ಆಧ್ಯಾತ್ಮಿಕತೆಯ ವಿಷಯವಾಗಿ ಪಠ್ಯಪುಸ್ತಗಳಲ್ಲಿ ಮಕ್ಕಳಿಗೆ ಬಿತ್ತರಿಸುವ ಕೆಲಸವಾಗಬೇಕು ಎಂದರು.
ದಾವಣಗೇರೆ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್, ಹೊಸಪೇಟೆಯ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇಧಾನಂದಜಿ ಮಹಾರಾಜ್, ಶಾರದಾನಂದಜಿ ಮಹಾರಾಜ್ ಸಾನಿಧ್ಯವಹಿಸಿದ್ದರು. ರಾಜ್ಯ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಬಾರಿ ಭವರಲಾಲ್ ಆರ್ಯ, ಖ್ಯಾತ ವೈದ್ಯ ಹಾಗೂ ಅಂಕಣಕಾರರು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ, ಡಾ.ಚಂದ್ರಶೇಖರ ಕೇಲಗಾರ, ಸೋಮಶೇಖರ ಮುಂಡರಗಿ ಸೇರಿದಂತೆ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಮುಂಜಾನೆ ಯೋಗಾಸನ, ಪ್ರಾಣಾಯಾಮ, ಸಂಕೀರ್ತನೆ, ಧ್ಯಾನದ ತರಬೇತಿಗಳು ಜರುಗಿದವು.