ಹೂವಿನ ಹಡಗಲಿ

ವೇತನ ಹೆಚ್ಚಳಕ್ಕೆ ಬಿಸಿಯೂಟ ತಯಾರಕರ ಪ್ರತಿಭಟನೆ

ವೇತನ ಹೆಚ್ಚಳಕ್ಕೆ ಬಿಸಿಯೂಟ ತಯಾರಕರ ಪ್ರತಿಭಟನೆ

ಹೂವಿನಹಡಗಲಿ 28:  ಬಿಸಿಯೂಟ ತಯಾರಕರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ಮತ್ತು ಎಐಟಿಯುಸಿ ತಾಲೂಕು ಸಮಿತಿಯಿಂದ  ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ಮಾಡಿದರು. 

ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯ ಹಲಗಿ ಸುರೇಶ ಮಾತನಾಡಿ, ರಾಜ್ಯದಲ್ಲಿ ಕಳೆದ 24ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆ ಸೇರಿದಂತೆ ಕಿರಿಯ, ಹಿರಿಯ, ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಇದರಿಂದ ಬಿಸಿಯೂನೌಕರರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ವೇತನ ಹೆಚ್ಚಳಕ್ಕೆ ಚಳಿಗಾಲ ಸಂಸತ ಅಧಿವೇಶನದಲ್ಲಿ ಸಂಸದರು ಸರ್ಕಾರ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು. ಸಂಘಟನೆಯಿಂದ ಬೇಡಿಕೆ ಮನವಿಯನ್ನು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದರು.  

ಅಕ್ಷರ ದಾಸೋಹ ಜಿಲ್ಲಾಧ್ಯಕ್ಷೆ ಹೆಚ್‌.ಅನುಸೂಯಾ, ತಾಲೂಕು ಅಧ್ಯಕ್ಷೆ ಕವಿತಾ ಪಿ., ಪ್ರಧಾನ ಕಾರ್ಯದರ್ಶಿ ಫಿ.ಸುನಿತಾ, ಉಪಾಧ್ಯಕ್ಷೆ ಲತಾ, ಖಜಾಂಚಿ ರೋಹಿಣಿ ಉತ್ತಂಗಿ ಮತ್ತು ಎಐಕೆಎಸ್ ತಾಲೂಕು ಅಧ್ಯಕ್ಷ ಡಿ.ಮುಕೊಂದಗೌಡ,ಸಿಪಿಐ ಕಾರ್ಯ ದರ್ಶಿ ಬಾವಾಜಿ ಜಂಗ್ಲಿಸಾಬ್, ಜಿಲ್ಲಾ ಸಮಿತಿ ಬಸವರಾಜ ಸಂಶಿ ಇದ್ದರು. 


ಸುದ್ದಿ ಓದಿ