ತಾಳಿಕೋಟಿ

ಎಬಿಡಿ ಫೌಂಡೇಶನ್‌ನಿಂದ ಚನ್ನವೀರ ಶ್ರೀಗಳಿಗೆ ಸನ್ಮಾನ

ಎಬಿಡಿ ಫೌಂಡೇಶನ್‌ನಿಂದ ಚನ್ನವೀರ ಶ್ರೀಗಳಿಗೆ ಸನ್ಮಾನ

ತಾಳಿಕೋಟಿ: ಕಾಂಗ್ರೇಸ್ ಮುಖಂಡ ಯುವ ಉದ್ಯಮಿ ಆನಂದಗೌಡ ದೊಡಮನಿ ನೇತೃತ್ವದ ಎಬಿಡಿ ಫೌಂಡೇಶನ್ ವತಿಯಿಂದ ಕುಂಟೋಜಿ ವಿರಕ್ತಮಠದ ಪೀಠಾಧಿಪತಿಗಳಾದ ಪ.ಪೂ.ಶ್ರೀ ಚನ್ನವೀರ ದೇವರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಇತ್ತೀಚಿಗೆ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರನ್ನು ಈ ಗೌರವದ ಸನ್ಮಾನ ನೀಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು ಎಬಿಡಿ ಸಂಸ್ಥೆ ಈ ಭಾಗದ ಒಂದು ಅತ್ಯತ್ತಮವಾದ ಸಮಾಜ ಸೇವಾ ಸಂಸ್ಥೆಯಾಗಿದ್ದು ಇದರ ಅಧ್ಯಕ್ಷ ಮುಖಂಡ ಆನಂದ ದೊಡಮನಿ ಅವರು ಒಬ್ಬ ಹೃಧಯಶ್ರೀಮಂತಿಕೆಯ ವ್ಯಕ್ತಿ ದೇ. ಹಿಪ್ಪರಗಿ ಮತಕ್ಷೇತ್ರದಲ್ಲಿ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಇದೆ ಎಂದರು.

ಈ ಸಂದರ್ಭದಲ್ಲಿ ಆನಂದ ಮದರಕಲ್(ವಕೀಲರು) ಬಾಬುಸಾಬ ವಠಾರ, ಯಲಗುರೇಶ ಕುಲಕಣರ್ಿ, ರಾಜು ಅಲ್ಲಾಪೂರ, ರಾಮೇಶ ಮೇಲಿನಮನಿ ಮತ್ತೀತರರು ಉಪಸ್ಥಿತರಿದ್ದರು 

ಸುದ್ದಿ ಓದಿ