ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ 27: ತಾಲೂಕಿನ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜೈನ ಸಮಾಜ ಸಹಯೋದಲ್ಲಿ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಶೇ. 90ಕ್ಕಿಂತ ಹೆಚ್ಚು ಹಾಗೂ ಪಿಯುಸಿ ದ್ವಿತೀಯ ವರ್ಷದ ಪರಿಕ್ಷೆಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡ ಜೈನ ಸಮಾಜದ ವಿದ್ಯಾರ್ಥಿ ,ವಿದ್ಯಾರ್ಥಿ ನಿಯರಿಗೆ ಕಡಪಟ್ಟಿ ಕ್ರಾಸ್ ಹತ್ತಿರ ಪಾಶ್ರ್ವನಾಥ ದಿಗಂಬರ ಜೈನ ಮಂದಿರದಲ್ಲಿ ಜು.6ರಂದು ಮುಂಜಾನೆ 10,30ಕ್ಕೆ ಜೈನ ಪ್ರತಿಭೆಗಳಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಂದು ಸಂಘದ ಅಧ್ಯಕ್ಷ ಟಿ,ಎಸ್,ಉಗಾರ ತಿಳಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರಹವಾಸಿಯಾದ ಅರ್ಹ ವಿದ್ಯಾರ್ಥಿಗಳು ಜು, 1 ರಂದು ಗುರುವಾರ ಒಳಗಾಗಿ ತಮ್ಮ ಅಂಕಪಟ್ಟಿಯ ಪ್ರತಿಯನ್ನು ದೃಢೀಕರಣ, (ಭಾವಚಿತ್ರ) ಎರಡು ಫೋಟೋ, ಆಧಾರ ಕಾರ್ಡಗಳ ಜೊತೆಗೆ ತಾವು ಅವಶ್ಯಕ ದಾಖಲೆಗಳನ್ನು ಹಾಗೂ ದೂರವಾಣಿ (ಮೊಬೈಲ್) ಸಂಖ್ಯೆಯ, ವಿಳಾಸದೊಂದಿಗೆ ಜು,1 ರಂದು ಒಳಗಾಗಿ ತಮ್ಮ ದಾಖಲಾತಿಯೊಂದಿಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ 9448339768, 9739221006, 8310781903, 9986236895 ಗೆ ಸಂಪರ್ಕಿ ಸಬೇಕೆಂದರು.
ಮಹಾಬಲ ಜಂಝರವಾಡ, ಅಣ್ಣಾಸಾಬ ಪಡನಾಡ, ನೇಮಿನಾಥ ರೇಗೌಡರ, ಬಸವರಾಜ ಆಲಗೂರ, ದೇರಿಗೌಡ ದೇಸಾಯಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದರು.