ಭವಾನಿ ಜುವೇಲರ್ಸ್ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಪ್ರೀತಿ ರತ್ನಪ್ಪಗೋಳ ಗೆ ಹೋಂಡಾ ಎಕ್ಟಿವಾ
ಕಾಗವಾಡ 27 : ಪಟ್ಟಣದ ಭವಾನಿ ಜುವೇಲರ್ಸ್‌ನವರು 50 ಸಾವಿರ ರೂಪಾಯಿ ಖರೀದಿಯ ಮೇಲೆ ಮೆಗಾ ಲಕ್ಕಿ ಬಹುಮಾನದ ಯೋಜನೆ ರೂಪಿಸಿದ್ದು, ಇದರಿಂದ ನಮ್ಮಂತಹ ಶ್ರಮಿಕರಿಗೆ ಬಹಳ ಅನುಕೂಲವಾಗಿದೆ. ಇಂದು ನನಗೆ ಈ ಲಕ್ಕಿ ಡ್ರಾದಲ್ಲಿ ಪ್ರಥಮ ಕ್ರಮಾಂಕದ ಹೋಂಡಾ ಎಕ್ಟಿವಾ ದ್ವಿಚಕ್ರವಾಹನ ಲಭಿಸಿದ್ದು, ನನ್ನ ಕಾಯಿಪಲ್ಲೆ ಮಾರಾಟಕ್ಕೆ ಇದು ಬಹಳ ಅನಕೂಲವಾಗಲಿದೆ. ಆದ್ದರಿಂದ ಭವಾನಿ ಜುವೇಲರ್ಸ್‌ನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರೀತಿ ರತ್ನಪ್ಪಗೋಳ ಭಾವುಕರಾಗಿ ಹೇಳಿದ್ದಾರೆ.
ಅವರು, ಸೋಮವಾರ ದಿ. 26 ರಂದು ಪಟ್ಟಣದ ಭವಾನಿ ಜುವೇಲರ್ಸ್‌ನವರು ಹಮ್ಮಿಕೊಂಡಿದ್ದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮೊದಲ ಕ್ರಮಾಂಕದ ಬಹುಮಾನ ಪಡೆದುಕೊಂಡು, ಮಾತನಾಡುತ್ತಿದ್ದರು. ಭವಾನಿ ಜುವೇಲರ್ಸ್‌ನ ಮಾಲೀಕರಾದ ಸಂಜಯ ಶಿಂಧೆ ಮತ್ತು ಸೂರಜ ಶಿಂಧೆ ಅವರು ಮಹಾರಷ್ಟ್ರದಿಂದ ಬಂದು ಇಲ್ಲಿ ಭವ್ಯವಾದ ಜುವೇಲರ್ಸ್ ಮಳಿಗೆಯನ್ನು ಪ್ರಾರಂಭಿಸಿ, ಶ್ರಮಿಕ ಮತ್ತು ಕಷ್ಟಪಟ್ಟು ದುಡಿದು ಜೀವನ ಸಾಗಿರುವ ಮಧ್ಯಮ ವರ್ಗದವರ ಬಂಗಾರ ಖರೀದಿಯ ಕನಸನ್ನು ಈಡೇರುಸುತ್ತಿದ್ದಾರೆ. ಇಂದು ಲಾಟರಿ ಮುಖಾಂತರ ಅನೇಕ ಜನರಿಗೆ ಬಹುಮಾನಗಳನ್ನು ವಿತರಿಸಿದ್ದಾರೆ. ಅವರ ಈ ಮಳಿಗೆ ಇನ್ನೂ ಹೆಚ್ಚು ಜನಮನ್ನಣ್ಣೆ ಗಳಿಸಲಿ ಎಂದು ಹಾರೈಸಿದರು.
ಭವಾನಿ ಜುವೇಲರ್ಸ್‌ನವರು ತಮ್ಮ ಮಳಿಗೆಯಲ್ಲಿ 50 ಸಾವಿರ ಖರೀದಿಯ ಮೇಲೆ ಒಂದು ಲಕ್ಕಿ ಕೋಪನ್ ನೀಡುವ ಯೋಜನೆಯನ್ನು ಸಪ್ಟೆಂಬರ್ 1 ರಿಂದ ಪ್ರಾರಂಭಿಸಿದ್ದರು. ಸುಮಾರು ಜನ ಸಾರ್ವಜನಿಕರು ಇಲ್ಲಿ ಬಂಗಾರ ಖರೀದಿ ಮಾಡಿದ್ದು, ಸೋಮವಾರ ದಿ. 26 ರಂದು ಅದರ ಡ್ರಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ರಮೇಶ ಚೌಗುಲಾ, ವಿಲಾಸ ಮಿರ್ಜೆ ಭಾಗವಹಿಸಿ, ಡ್ರಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಡ್ರಾದಲ್ಲಿ ಎರಡನೇ ಬಹುಮಾನದ ಲ್ಯಾಪ್‌ಟ್ಯಾಪ್ ಅನ್ನು ವಿವೇಕ ಕಾಂಬಳೆ ಪಡೆದುಕೊಂಡರೇ ಮೂರನೇ ಬಹುಮಾನದ ಪ್ರೀಡ್ಜ್ ಅನ್ನು ಗಂಗಪ್ಪಾ ಅಕಿವಾಟ ಇವರು ಪಡೆದುಕೊಂಡರು. ಒಟ್ಟು 25 ಬಹುಮಾನಗಳ ಪೈಕಿ ತಲಾ ಒಂದು ಮೊಬೈಲ್ ಫೋನ್, ವಾಷಿಂಗ್ ಮಷಿನ್, ಮೈಕ್ರೋ ವೊವನ್, ವಾಟರ್ ಫಿಲ್ಟರ್, ಮಿಕ್ಸರ್, ಹೊಲಿಗೆ ಯಂತ್ರ, ಕೂಲರ್ ಇವುಗಳನ್ನು ಕ್ರಮವಾಗಿ ಸ್ವರುಪ ಪಾಟೀಲ, ವೈಭವ ಧೊತ್ರೆ, ಅದ್ವಿಕ ದರೂರೆ, ಅಶೋಕ ಪಾಟೀಲ, ಸಚೀನ ಕಳೇಕರ, ಪ್ರಜ್ವಲ ಮಿರ್ಜೆ ರಕ್ಷಿತಾ ಅಕಿವಾಟ ಇವರು ಪಡೆದುಕೊಂಡರೇ ಇನ್ನೂ 10 ಪೈಠಣಿ ಸೀರೆಗಳು ಮತ್ತು 5 ಬೆಳ್ಳಿ ನಾಣ್ಯಗಳನ್ನು ವಿಜೇತರಿಗೆ ವಿತರಿಸಲಾಯಿತು.
ಜೊತಗೆ ಇದಲ್ಲದೇ 50 ಸಾವಿರ ಖರೀದಿ ಮಾಡಿರುವ ವಿಜೇತರದಲ್ಲದ ಪ್ರತಿಯೊಬ್ಬರಿಗೂ ಸಹ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಭವಾನಿ ಜುವೆಲರ್ಸನ ಮಾಲೀಕ ಸಂಜಯ ಶಿಂಧೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಬಂಗಾರ ಖರೀದಿ ಮಾಡಬೇಕೆನ್ನುವ ಮಧ್ಯಮ ವರ್ಗದವರ ಕನಸಿಗೆ ಭವಾನಿ ಜುವೇಲರ್ಸನವರು ಇಂತಹ ಲಕ್ಕಿ ಡ್ರಾಗಳ ಏರಿ್ಡಸುವ ಮುಖಾಂತರ ಅವರ ಕನಸನ್ನು ಸಾಕಾರಾಗೊಳಿಸುತ್ತಿದ್ದಾರೆ.