ಪ್ರಜಾಪ್ರಭುತ್ವ ವಿರೋಧಿಗಳನ್ನು ಸೋಲಿಸಲು ಹಿರೇಮಠ ಕರೆ

ಪ್ರಜಾಪ್ರಭುತ್ವ ವಿರೋಧಿಗಳನ್ನು ಸೋಲಿಸಲು ಹಿರೇಮಠ ಕರೆ

ಬಳ್ಳಾರಿ,ಫೆ.01: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಬುತ್ವ ವಿರೋದಿಗಳು ಹಾಗೂ ಸಂಘ ಪರಿವಾರಗಳನ್ನು ಸೋಲಿಸಲು ಸಮಾಜ ಪರಿವರ್ತನ ಸಮೂದಾಯದ ಅಧ್ಯಕ್ಷ ಎಸ್.ಆರ್.ಹಿರೆಮಠ ತಿಳಿಸಿದರು. ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಕೇಂದ್ರದಲ್ಲಿ ಜನವಿರೋದಿ, ಪ್ರಜಾಪ್ರಬುತ್ವ ವಿರೋದಿ, ಹಾಗೂ ಸಂವಿದಾನ ವಿರೋದಿ ಸಂಘಟನೆಗಳನ್ನು ಸೋಲಿಸಬೇಕು. 1977ರ ಲೋಕಸಭಾ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಸಿವಿಲ್ ಸೋಸೈಟಿಯೂ ದೇಶದ ಮೇಲೆ ತುತರ್ು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಬುತ್ವವವನ್ನು, ಸಂವಿಧಾನವನ್ನು ಮೊಟಕುಗೊಳಿಸಿದ ಕಾಂಗ್ರೆಸ್ ಸಕರ್ಾರವನ್ನು ಸೋಲಿಸಿದಲ್ಲದೇ ದೇಶದ ಆ ಕರಾಳ ಕಾಲಕ್ಕೆ ಕಾರಣಿಬೂತರಾದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಪುತ್ರ ಸಂಜಯ್ಗಾಂಧಿ 2/3 ಕ್ಯಾಬಿನಟ್ ಸದಸ್ಯರನ್ನು ಚುನಾವಣೆಯಲ್ಲಿ ಸೋಲಿಸಿದಂತೆ ಇಂದಿನ ಗಂಭಿರ ಪರಿಸ್ಥಿತಿಗೆ ಕಾರಣಿಬೂತರಾದ ಎನ್.ಡಿ.ಎ ಸರಕಾರವನ್ನು ಸೋಲಿಸಬೇಕು. ದೇಶದಲ್ಲಿ ಕೃಷಿ ಸಂಕಟ, ನಿರುದ್ಯೋಗ, ಭ್ರಷ್ಟಾಚಾರ, ಮಕ್ಕಳ ಭೀಕರ ಪರಿಸ್ಥಿತಿ ಬಗೆಹರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಪಲವಾಗಿದೆ. ಹಾಗೂ ನೆಮ್ಮದಿ ಹಾಳು ಮಾಡಿದೆ ಎಂದು ಆರೋಪಿಸಿದರು. ಗಣಿ ಪ್ರದೇಶದ ಅಕ್ರಮ ಗಣಿಗಾರಿಕೆಯಿಂದ ಸರಕಾರ ವಿದಿಸಿದ್ದ ತೆರಿಗೆ ಹಣ 15 ಸಾವಿರ ಕೋಟಿ ಸಮರ್ಪಕ ಬಳಕೆಗೆ ಹೋರಾಟ ಗಣಿಬಾದಿತ ಪ್ರದೇಶ ಅಭಿವೃದ್ದಿ ಅನುದಾನ 15 ಸಾವಿರ ಕೋಟಿ ರೂಗಳನ್ನು ಸುಪ್ರಿಂ ಕೊಟರ್್ ಆದೇಶದ ಪ್ರಕಾರ ಸಮರ್ಪಕವಾಗಿ ಬಳಕೆ ಮಾಡಲು ನ್ಯಾಯಾಂಗ ಹೋರಾಟ ಮತ್ತು ಜನಾಂದೊಲನ ಎರಡು ವಿಧದಲ್ಲು ಪರಿಣಾಮಕಾರಿಯಾಗಿ ನಡೆಸಲಾಗುತ್ತದೆ ಎಂದು ವಿವರಿಸಿದರು. ಈ ಹಣವನ್ನು ಗಣಿಬಾದಿತ ಜನರ ಉಪಜೀವನ, ಆರೋಗ್ಯ, ಶಿಕ್ಷಣ, ಹಾಗೂ ಪರಿಸರ ಪುನಶ್ಚೇತನಕ್ಕಾಗಿ ಸಮರ್ಪಕವಾಗಿ ಬಳಕೆ ಮಾಡಬೇಕು. ಈ ಬಗ್ಗೆ ಗ್ರಾಮಮಟ್ಟದಲ್ಲೂ ಜನತೆಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದು ತಿಳಿಸಿದರು. ಈ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸಭೆ ನಡೆಸಿದ್ದು ಅದರಲ್ಲಿ ತೆಗೆದುಕೊಂಡು ಹಲವು ನಿರ್ಣಯಗಳು ಸುಪ್ರಿಂ ಕೊಟರ್್ಗೆ ಸಲ್ಲಿಸಿದ್ದು ಆ ನಿರ್ಣಯ ಪತ್ರವನ್ನು ಸುಪ್ರಿಂ ಕೊಟರ್್ ತಿರಸ್ಕರಿಸಿದೆ. ಅದಕ್ಕಾಗಿ ಸಮಗ್ರ ಅಧ್ಯಾಯನದಿಂದ ಎಲ್ಲಾ ವಿಷಯಗಳನ್ನು ಒಳಗೊಂಡ ವರದಿಯನ್ನು ನಾವು ಈಗಾಗಲೇ ಸುಪ್ರಿಂ ಕೊಟರ್್ಗೆ ಸಲ್ಲಿಸಿದ್ದೇವೆ. ಅಲ್ಲಿಂದ ಬಂದ ವರದಿ ಆಧಾರದ ಮೇಲೆ ಸಮಗ್ರ ಸಭಿವೃದ್ದಿಯನ್ನು ಮಾಡಲು ಜನಸಂಗ್ರಾಮ ಪರಿಷತ್ ಮುಂದಾಗುತ್ತದೆ ಎಂದರು. ಈ ಪತ್ರಿಕಾಗೋಷ್ಟಿಯಲ್ಲಿ ಗಣಿಬಾದಿತ ಜನರ ಅಭಿವೃದ್ದಿ ಸಮಿತಿಯ ಎ.ದೇವದಾಸ್, ಚಂದ್ರಶೇಖರ ಮೇಟಿ, ಸೋಮಶೇಖರ, ಶ್ರೀಶೈಲ ಆಲ್ದಳ್ಳಿ, ಶಿವಾನಂದಯ್ಯಸ್ವಾಮಿ, ಹೊನ್ನುರುಸ್ವಾಮಿ ಸೇರಿದಂತೆ ಇನ್ನೂ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ