ಹರ್ ಘರ್ ತಿರಂಗ: ಜನಜಾಗೃತಿಗಾಗಿ ಬೈಕ್ ರಾಲಿ
ರಾಣೆಬೆನ್ನೂರು 11: ದೇಶವೂ ಸೇರಿದಂತೆ ನಾಡಿನಲ್ಲಿ ಅಮೃತ ಮಹೋತ್ಸವದ 75ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಜಿಲ್ಲಾ ನೇಕಾರ ಪ್ರಕೋಷ್ಠದ ಅಧ್ಯಕ್ಷ ಡಾ: ಬಸವರಾಜ್ ಕೇಲಗಾರ ಹೇಳಿದರು ಅವರು ಗುರುವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಈ ದೇಶದ ಮತ್ತು ನಾಡಿನ ಲಕ್ಷಾಂತರ ಕಾರ್ಯಕರ್ತರು ತಮ್ಮ ಪ್ರಾಣವನ್ನು ಬಲಿ ನೀಡಿದ್ದಾರೆ. ಸ್ವಾತಂತ್ರದ ಮಹತ್ವವನ್ನು ಸಾರಲು ಪ್ರತಿಯೊಬ್ಬ ಯುವಜನಾಂಗವು ಭವಿಷ್ಯದ ಜನಾಂಗಕ್ಕೆ ತಿಳಿಸಲು, ಇತಿಹಾಸದ ಪರಿಕಲ್ಪನೆಯಲ್ಲಿ ಸಾಗಬೇಕಾಗಿದೆ ಈ ನಿಟ್ಟಿನಲ್ಲಿ ಸರಕಾರದ ಆದೇಶದಂತೆ, ಭಾರತೀಯ ಜನತಾ ಪಕ್ಷವು ನಗರವೂ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗಸ್ಟ್ 13 14 15 ಈ ಮೂರು ದಿವಸ ಕಾಲ ಪ್ರತಿ ಮನೆಯ ಮೇಲೆ ತಿರಂಗ ಧ್ವಜವನ್ನು ಹಾರಿಸಬೇಕು ಎಂದರು. ಸರಕಾರಿ ಕಚೇರಿಗಳ ಕಟ್ಟಡದಲ್ಲಿ ಮೂರು ದಿವಸ ಸೂರ್ಯೋದಯ ದಲ್ಲಿ ಧ್ವಜ ಹಾರಿಸಬೇಕು ಸಂಜೆ ಧ್ವಜ ಇಳಿಸಬೇಕು,ಈ ವಿಷಯದಲ್ಲಿ ನಿರ್ಲಕ್ಷ ತೋರುವಂತಿಲ್ಲ. ಯುವ ಜನಾಂಗ ಆಯೋಜಿಸಿರುವ ಪ್ರತಿಯೊಂದು ಕಾರ್ಯಕ್ರಮದಲ್ಲಿ, ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಡಾಕ್ಟರ್ ಕೇಲಗಾರ್ ಮನವಿ ಮಾಡಿದರು. ನೇಕಾರ ಮೋರ್ಚಾ, ರೈತ ಮೋರ್ಚಾ, ಯುವ ಮೋರ್ಚಾ, ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ, ಸಹಕರಿಸಲು ಮುಂದಾಗಿದ್ದಾರೆ ಎಂದು ನಗರ ಘಟಕದ ಅಧ್ಯಕ್ಷ ದೀಪಕ್ ಹರಪನಹಳ್ಳಿ ತಿಳಿಸಿದರು ಮಾಧ್ಯಮಗೋಷ್ಠಿಯಲ್ಲಿ ಹಿರಿಯ ಮುಖಂಡ ಕೆ. ಶಿವಲಿಂಗಪ್ಪ,ಜಿಪಂ ಮಾಜಿ ಸದಸ್ಯಮಂಗಳಗೌರಿ ಪೂಜಾರ್, ಉತ್ತರ ಕನ್ನಡ ಜಿಲ್ಲಾ ಪ್ರಭಾರಿ ಭಾರತಿ ಜಂಬಿಗಿ,ಸಿದ್ದಣ್ಣ ಚಿಕ್ಕಬಿದರಿ, ಶಿವಾನಂದ್ ಭಾಗಾದಿ, ಜಿಲ್ಲಾ ಸಂಚಾಲಕ ಕೊಟ್ರೇಶಪ್ಪ ಎಮ್ಮೆ, ಧನ್ಯವಾದ ಬಸವರಾಜ್ ಹುಲ್ಲತ್ತಿ, ಪ್ರಕಾಶ ಪೂಜಾರ, ಗಂಗಮ್ಮ ಹಾವನೂರು, ಮಂಜುಳಾ ಹತ್ತಿ,ಮಾಧ್ಯಮ ಪ್ರಭಾರಿ.ಸಿದ್ದನಗೌಡ ಸೇರಿದಂತೆ ವಿವಿಧ ಪ್ರಕೋಷ್ಠಗಳ ಮುಖಂಡರು ಗಣ್ಯರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ನಗರದಲ್ಲಿ ವಿತರಿಸಲು ರಾಷ್ಟ್ರ ದ್ವಜಗಳನ್ನು, ಬಿಡುಗಡೆಗೊಳಿಸಲಾಯಿತು.