ಗೋಕಾಕ್

ಹರ್ ಫರ್ ತಿರಂಗಾ ಅಭಿಯಾನ ದಂತ ಕಾರ್ಯಕ್ರಮ

ಹರ್ ಫರ್ ತಿರಂಗಾ ಅಭಿಯಾನ ದಂತ ಕಾರ್ಯಕ್ರಮ

ಘಟಪ್ರಭಾ: 76ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಘಟಪ್ರಭಾ ಪುರಸಭೆ ವ್ಯಾಪ್ತಿಯಲ್ಲಿ ಭಾರತ ಸರ್ಕಾರದ ನನ್ನ ಮಣ್ಣು ನನ್ನ ದೇಶ, ಶಿಲಾಫಲಕ ಸಮರ್ಪಣೆ, ಪಂಚಪ್ರಾಣ ಶಪಥ, ವಸುಧಾ ವಂದನ, ವೀರರಿಗೆ ಗೌರವ ಸಮರ್ಪಣೆ, ರಾಷ್ಟ್ರಧ್ವಜ ವಂದನೆ, ಹರ್ ಫರ್ ತಿರಂಗಾ ಅಭಿಯಾನ ದಂತ ಕಾರ್ಯಕ್ರಮಗಳನ್ನು ಅಚುಕಟ್ಟಾಗಿ ಹಮ್ಮಿಕೊಳ್ಳಲಾಗಿತ್ತು.

ಪುರಸಭೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಜರುಗಿತು. ಪ.ಪಂ ಮಾಜಿ ಸದಸ್ಯರುಗಳಾದ ಪ್ರವೀನ ಮಠಗಾರ, ಈರಣ್ಣಾ ಕಲಕುಟಗಿ, ಸಲೀಮ ಕಬ್ಬೂರ, ಮಲ್ಲಪ್ಪ ಕೋಳಿ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಹಿರಿಯರಾದ ಡಿ.ಎಂ.ದಳವಾಯಿ, ಈಶ್ವರ ಮಠಗಾರ, ಮಾಜಿ ಗ್ರಾ.ಪಂ ಸದಸ್ಯ ರಾಜಶೇಖರ ರಜಪೂತ, ಬಾಹುಬಲಿ ಕಟ್ಟಹಟ್ಟಿ, ಮಹೇಶ ಪಾಟೀಲ, ವಿನೇಯ ಜಾಧವ, ಅರ್ಜುನ ಗಂಡವಗೋಳ, ಕೆಂಪಣ್ಣ ಚೌಕಶಿ, ಸುರೇಶ ಪೂಜೇರಿ, ಸುನೀಲ ನಾಯಿಕ, ಪರಶುರಾಮ ಗೋಕಾಕ, ಅಪ್ಪಾಸಾಬ ಮುಲ್ಲಾ, ಕಾಡಪ್ಪ ಕರೋಶಿ, ಪುರಸಭೆ ಸಿಬ್ಬಂದಿಗಳು ಇದ್ದರು.


ಸುದ್ದಿ ಓದಿ