ಹಂಪಿ ವೈಭವ ಬೆಳಗಿನ ಪಾರಂಪರಿಕ ನಡಿಗೆ
ಲೋಕದರ್ಶನ ವರದಿ
ಬಳ್ಳಾರಿ(ಹಂಪಿ) 01: ಐತಿಹಾಸಿಕ ಹಂಪಿ ಉತ್ಸವದ ಅಂಗವಾಗಿ ಬೆಳಗಿನ ನಡಿಗೆಯ ಮೂಲಕ ಸ್ಮಾರಕಗಳ ಕುತೂಹಲದ ಚರಿತೆ ತಿಳಿದುಕೊಳ್ಳುವ ಪಾರಂಪರಿಕ ನಡಿಗೆ ಕಾರ್ಯಕ್ರಮ ಗುರುವಾರ ಬೆಳಗ್ಗೆ ಹಂಪಿಯಲ್ಲಿ ನಡೆಯಿತು.
ಹಂಪಿಯ ಅಕ್ಕತಂಗಿಯರ ಗುಡ್ಡದ ಬಳಿಯಿಂದ ಬೆಳಗ್ಗೆ ಆರಂಭವಾದ ಪಾರಂಪರಿಕೆ ನಡಿಗೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೊಸಪೇಟೆ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳ ಜತೆಗೆ ಇಲ್ಲಿನ ಬೆಟ್ಟ-ಗುಡ್ಡಗಳ ರೋಚಕ ಕತೆಗಳು ಮತ್ತು ಐತಿಹಾಸಿಕ ಹಿನ್ನೆಲೆಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಿಳಿಯಪಡಿಸಬೇಕು ಎಂಬ ಮತ್ತು ಮುಂದಿನ ಪಿಳಿಗೆಗೆ ತಿಳಿಯಪಡಿಸಬೇಕು ಎಂಬ ಸದುದ್ದೇಶದಿಂದ ಹಂಪಿ ಉತ್ಸವದ ಈ ಸಂದರ್ಭದಲ್ಲಿ ಪಾರಂಪರಿಕೆ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಹಂಪಿ ಉತ್ಸವದಲ್ಲಿ ಪಾರಂಪರಿಕ ನಡಿಗೆಯಲ್ಲಿ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಅಕ್ಕ ತಂಗಿಯರ ಗುಡ್ಡದ ಬಳಿಯಿಂದ ಆರಂಭವಾದ ಪಾರಂಪರಿಕ ನಡಿಗೆಯು ಉದ್ದಾನವೀರಭದ್ರ ದೇವಸ್ಥಾನ, ಲಕ್ಷ್ಮೀನರಸಿಂಹ,ಬಡವಿಲಿಂಗ, ಕೃಷ್ಣ ದೇವಸ್ಥಾನ ಮತ್ತು ಬಜಾರ್ ಮಾರ್ಗವಾಗಿ ಹೇಮಕೂಟ ಬೆಟ್ಟ ಹಾಗೂ ಅದರಲ್ಲಿನ ದೇವಸ್ಥಾನಗಳ ಸಮೂಹ, ವಿರೂಪಾಕ್ಷ ದೇವಸ್ಥಾನ ಮತ್ತು ಬಜಾರ್ ಮುಖಾಂತರ ಎದುರು ಬಸವಣ್ಣ ದೇವಸ್ಥಾನದವರೆಗೆ ತಲುಪಿತು.
ಪಾರಂಪರಿಕೆ ನಡಿಗೆ ಸಂದರ್ಭದಲ್ಲಿ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಪ್ರತಿ ಸ್ಮಾರಕದ ಕುರಿತು ಸಂಪೂರ್ಣ ಐತಿಹಾಸಿಕ ವಿವರಣೆ ಹಾಗೂ ಅದರ ಹಿಂದಿರುವ ರೋಚಕದ ಕಥೆಗಳನ್ನು ಹಂಪಿಯ 30 ಜನ ಮಾರ್ಗದರ್ಶ ನಗಳು(ಗೈಡ್ಸ್) ನಡಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯಪಡಿಸಿದರು.
ಪಾರಂಪರಿಕೆ ನಡಿಗೆಯಲ್ಲಿ ಶಾಲಾ-ಕಾಲೇಜು ವಿದ್ಯಾಥರ್ಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸ್ಮಾರಕಗಳ ಕುರಿತ ಕುತೂಹಲವನ್ನು ತಣಿಸಿಕೊಂಡು ಖುಷಿಪಟ್ಟರು.
ಈ ಪಾರಂಪಡಿಕೆ ನಡಿಗೆಯಲ್ಲಿ ತಹಸೀಲ್ದಾರ್ ವಿಶ್ವನಾಥ, ಪ್ರವಾಸೋದ್ಯಮ ಇಲಾಖೆಯ ಉಪನಿದರ್ೇಶಕ ಮೋತಿಲಾಲ್ ಲಮಾಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ, ಗೃಹರಕ್ಷಕದಳದ ಸಮಾದೇಷ್ಠ ಶಕೀಬ್, ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಸಾಮಾಜಿಕ ಸಮನ್ವಯ ಅಧಿಕಾರಿ ಯಮುನಾ ನಾಯಕ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.