ಹಂಪಿ ಕನ್ನಡ ವಿ.ವಿಯ ಕುಲಪತಿ ಸ.ಚಿ.ರಮೇಶಗೆ ಅಭಿನಂದನಾ ಸಮಾರಂಭ ವಿ.ವಿಗೆ ಕೇಂದ್ರಿಯ ಸ್ಥಾನಮಾನ ಪಡೆಯುವ ಅಗತ್ಯವಿದೆ: ಸ.ಚಿ.ರಮೇಶ
ಬಳ್ಳಾರಿ 06: ಹಂಪಿ ಕನ್ನಡ ವಿ.ವಿಯಲ್ಲಿ ಬುಧವಾರ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದ ಡಾ.ರಾಜ್ಕುಮಾರ್ ಸೆಮಿನಾರ್ ಹಾಲ್ನಲ್ಲಿ ಜಾನಪದ ಅಧ್ಯಯನ ವಿಭಾಗದ ವತಿಯಿಂದ ನಡೆದ ಕುಲಪತಿಗಳ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಸ.ಚಿ.ರಮೇಶ ಕನ್ನಡ ವಿಶ್ವವಿದ್ಯಾಲಯಕ್ಕೆ ಕೇಂದ್ರಿಯ ಸ್ಥಾನಮಾನ ಪಡೆಯುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರತನಾಗಿದ್ದೇನೆ. ಅದಕ್ಕೆ ಬೇಕಾದ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ತೊಡಗಿದ್ದೇನೆ. ಜೊತೆಯಲ್ಲಿ ಬೌದ್ಧಿಕ ಜ್ಞಾನವನ್ನು ವಿಸ್ತರಿಸುವ ಕೆಲಸ ಎಂದರು. ನಾನು ಕುಲಪತಿ ಆಗಿರುವುದು ನನಗೆ ಸಂತೋಷವಾಗಿದೆ. ಕಳೆದ 26-27 ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ನಮ್ಮದು ಜಾನಪದ ಅಧ್ಯಯನ ವಿಭಾಗ, ನಮ್ಮ ಜನಪದ ಬದುಕು ಕುರುಳಬಳ್ಳಿಯ ಸಂಬಂಧವನ್ನು ಪರಸ್ಪರ ನಂಬಿಕೆಯನ್ನು ಪ್ರತಿಪಾದನೆ ಮಾಡಿದೆ.
ಅಭಿನಂದನಾ ಸಮಾರಂಭದಲ್ಲಿ ಕುಲಪತಿಗಳಿಗೆ ಸತ್ಕರಿಸಿ ಮಾತನಾಡಿದ ವಿಭಾಗದ ಮುಖಸ್ಥರಾದ ಡಾ ಮೊಗಳ್ಳಿ ಗಣೇಶ್ ಅವರು ಇಡೀ ಭಾರತದಲ್ಲಿ ಜಾನಪದ ವಿಷಯದ ಪದವಿಯನ್ನು ಪಡೆದು. ಜಾನಪದ ತಜ್ಞರಾಗಿ ಒಂದು ಉನ್ನತ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿರುವುದು ಇದೇ ಮೊದಲು. ಆ ಸ್ಥಾನಕ್ಕೆ ಗೆಳೆಯರಾದ ಸ. ಚಿ. ರಮೇಶ ಅವರು ಅರ್ಹ ವ್ಯಕ್ತಿಯಾಗಿರುವುದ ಹೆಮ್ಮೆಯ ಸಂಗತಿಯಾಗಿದೆ. ಸಭ್ಯತೆ ತಾಳ್ಮೆ, ಸಂಯಮ ಹಾಗೂ ಸರ್ವರನ್ನು ಒಳಗೊಂಡು ಅಂತಃಕರಣದಿಂದ ಕನ್ನಡ ವಿಶ್ವವಿದ್ಯಾಲಯವನ್ನು ಮುನ್ನಡೆಸುವ ಜವಾಬ್ದಾರಿ ಕುಲಪತಿಗಳ ಮೇಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಪ್ರಾಧ್ಯಾಪಕರಾದ ಸಿ.ಟಿ ಗುರುಪ್ರಸಾದ್ ಅವರು ಸ.ಚಿ. ರಮೇಶ ಅವರು ನಾನು ಕಂಡುಕೊಂಡಂತೆ ಅಪರೂಪದ ವ್ಯಕ್ತಿ, ಅವರ ಜೀವನ, ವ್ಯಕ್ತಿತ್ವ ಇತರರಿಗೆ ಮಾದರಿ. ಸಕಲರಲ್ಲೂ ಜೀವಾತ್ಮಗಳ ಜೀವ ಕಾರುಣ್ಯವನ್ನು ಕಾಣುವ ವ್ಯಕ್ತಿ ಅತ್ಯುನ್ನತ ಸ್ಥಾನ ತಲುಪುತ್ತಾರೆ ಎಂಬುದಕ್ಕೆ ಡಾ.ಸ.ಚಿ.ರಮೇಶ ಅವರೇ ಸಾಕ್ಷಿ ಎಂದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಯವರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.