ಹಂಪಿ ಉತ್ಸವ ಗ್ರಾಮೀಣ ಕ್ರೀಡೆಗಳು ಆರಂಭ ಡಿಸಿ ರಾಮ್ ಪ್ರಸಾತ್, ಜಿಪಂ ಸಿಇಒ ನಿತೀಶ್ ಕಬ್ಬಡ್ಡಿ..ಕಬ್ಬಡ್ಡಿ..
ಲೋಕದರ್ಶನ ವರದಿ
ಹಂಪಿ 02:ಐತಿಹಾಸಿಕ ಹಂಪಿ ಉತ್ಸವ ನಿಮಿತ್ತ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠ ಪ್ರೌಢಶಾಲಾವರಣದಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾಗಿರುವ ಕಬ್ಬಡ್ಡಿ ಪಂದ್ಯಾವಳಿಗೆ ಡಿಸಿ ರಾಮಪ್ರಸಾತ್ ಮನೋಹರ ಮತ್ತು ಜಿ.ಪಂ. ಸಿಇಒ ಕೆ.ನಿತೀಶ್ ಅವರು ಆಡುವುದರ ಮೂಲಕ ಚಾಲನೆ ನೀಡಿದರು. ಈ ಮೂಲಕ ವಿವಿಧೆಡೆಯಿಂದ ಆಗಮಿಸಿದ್ದ ಗ್ರಾಮೀಣ ಕ್ರೀಡಾಪಟುಗಳಲ್ಲಿ ಉತ್ಸಾಹ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿ ರಾಮ್ ಪ್ರಸಾತ್ ಅವರು ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಹಂಪಿ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಪಂದ್ಯಾವಳಿಯಲ್ಲಿ ವಿವಿಧೆಡೆಯ ಗ್ರಾಮೀಣ ಭಾಗಗಳ 26 ಪುರುಷರ ಹಾಗೂ 6 ಮಹಿಳೆಯರ ಕಬ್ಬಡ್ಡಿ ಪಟುಗಳ ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಿಂದ ಕಮಲಾಪುರ ಮತ್ತು ಹೊಸಪೇಟೆ ತಂಡ ಹಾಗೂ ಮಹಿಳೆಯರ ವಿಭಾಗದಿಂದ ಬಳ್ಳಾರಿ ಮತ್ತು ಹೊಸಪೇಟೆ ತಂಡಗಳು ಆರಂಭಿಕ ಸುತ್ತಿನ ಕಬ್ಬಡ್ಡಿ ಸ್ಪಧರ್ೆಯಲ್ಲಿ ಸೆಣಸಾಟ ನಡೆಸಿದವು. ಪಂದ್ಯಾವಳಿ ಪ್ರಥಮ ಸ್ಥಾನ ವಿಜೇತ ತಂಡಕ್ಕೆ 20 ಸಾವಿರ ನಗದು, ದ್ವಿತೀಯ ಸ್ಥಾನದ ಗಳಿಸಿದ ತಂಡಕ್ಕೆ 10 ಸಾವಿರ ನಗದು ಬಹುಮಾನ ನಿಗದಿಪಡಿಸಲಾಗಿದೆ ಎಂದು ಹಂಪಿ ಉತ್ಸವದ ಕ್ರೀಡಾ ಸಮಿತಿಯ ನೋಡಲ್ ಅಧಿಕಾರಿ ರೆಹಮತ್ ಉಲ್ಲಾ ಅವರು ಕನರ್ಾಟಕ ವಾತರ್ೆಗೆ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಭಾಗಗಳ ದೈಹಿಕ ಶಿಕ್ಷಕರು, ಕ್ರೀಡಾಧಿಕಾರಿಗಳು ಮತ್ತಿತರರು ಇದ್ದರು.