ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಗುರ್ಲಾಪೂರ 07: ಗ್ರಾಮದಲ್ಲಿ ಹಡಪದ ಅಪ್ಪಣ್ಣ ಅವರ ಜಯಂತಿ ಸೋಮವಾರದಂದು ಸ್ಥಳೀಯ ಪ್ರವಾಸಿ ಮಂದಿರದ ಹನುಮಾನ್ ದೇವಸ್ಥಾನದಲ್ಲಿ ಹಡಪದ ಅಪ್ಪಣ್ಣ ಸಮಾಜದವರು ವಿಜೃಂಭಣೆಯಿಂದ ಆಚರಿಸಲಾಯಿತು.
ಶಿವಾನಂದ ಹಿರೇಮಠ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ 12ನೇ ಶತಮಾನದ ಬಸವಣ್ಣವರ ಕಾಲದಲ್ಲಿ ಹಡಪದ ಅಪ್ಪಣ್ಣ ಅವರು ಮಾಡಿದ ಸಾಧನೆ ಜಾತಿ ಮತ ಭೇದ ತೊರೆದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಾಧನೆಗೈದಿದ್ದಾರೆ ಯುವಕರು ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವು ನಡೆದರೆ ಜೀವನದಲ್ಲಿ ನೆಮ್ಮದಿ ಬದುಕು ಸಾಧ್ಯವಾಗುವುದು ಎಂದು ಹೇಳಿದರು. ಇದೇ ಸಮಯದಲ್ಲಿ ಗ್ರಾಮದಲ್ಲಿ ಮಳೆರಾಯನ ಕೃಪೆಯಿಂದ ಗ್ರಾಮಸ್ಥರು ಸಂತೋಷಗೊಂಡರು.
ಈರಪ್ಪ ನಾವಿ, ಪ್ರಕಾಶ ನಾವಿ, ರವಿ ನಾವಿ, ಚೇತನ್ ನಾವಿ, ವಿಜಯ ನಾವಿ, ಮಾರುತಿ ನಾವಿ, ರವಿ ನಾವಿ, ಚೇತನ ನಾವಿ, ಶಿವಾನಂದ ನಾವಿ, ಕಾರ್ತಿಕ್ ನಾವಿ, ಈಶ್ವರ ಮುಗಳಖೋಡ, ಪ್ರಕಾಶ ಮುಗಳಖೋಡ, ಶಿವಲಿಂಗ ಪುಟಾಣಿ, ಕಲ್ಲಪ್ಪ ರಂಗಾಪೂರ, ಬಸಪ್ಪ ನೇಮಗೌಡರ್, ಬಾಳಪ್ಪ ರಂಗಾಪೂರ, ಮಡಿವಾಳ ನೇಮಗೌಡರ್, ರವಿ ಸಾಬಣ್ಣವರ್, ಸುಭಾಸ ಸುಳ್ಳನವರ್, ಸಿದ್ದಪ್ಪ ಸಾವಳಗಿ ಇನ್ನು ಅನೇಕರು ಉಪಸ್ಥಿತರಿದ್ದರು.