ಗ್ರಾಪಂ ಚುನಾವಣೆ: ಸಿದ್ಧತೆಯಲ್ಲಿ ಬಿಜೆಪಿ ಮುಂದೆ-ಕಾಂಗ್ರೆಸ್ನಲ್ಲಿ ಒಳ ಚಚರ್ೆ
ನಾಗರಾಜ ಹರಪನಹಳ್ಳಿ
ಕಾರವಾರ 04: ಉತ್ತರ ಕನ್ನಡದ ಗ್ರಾಮ ಪಂಚಾಯತ್ ಚುನಾವಣೆಗೆ ಡಿ.7 ರಂದು ಅಧಿಸೂಚನೆ ಹೊರಡಲಿದೆ. ಇದು ಮೊದಲ ಹಂತದ ಮತದಾನ ಡಿ.22ರಂದು ನಡೆವ ಕಾರವಾರದಿಂದ ಭಟ್ಕಳವರೆಗಿನ ಕರಾವಳಿ ತಾಲೂಕುಗಳಿಗೆ ಅನ್ವಯವಾಗುವಂತಹದ್ದು. ಕಾರವಾರ ತಾಲೂಕಿನ 18, ಅಂಕೋಲಾದ 21, ಕುಮಟಾದ 22, ಹೊನ್ನಾವರದ 28, ಭಟ್ಕಳದ 16 ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ರಾಜಕೀಯ ಗರಿಗೆದರಿದೆ. ಬಿಜೆಪಿ ಸಂಘಟನೆಯಲ್ಲಿ ಮುಂದಿದ್ದು, ಗ್ರಾಮಪಂಚಾತ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಬಹುತೇಕ ಕಡೆ ಕಾಂಗ್ರೆಸ್ ಈ ಹಿಂದೆ ಪ್ರಬಲವಾಗಿತ್ತು. ಜೆಡಿಎಸ್ ಬೆಂಬಲಿತರು, ಪಕ್ಷೇತರರು, ಅಲ್ಲಲ್ಲಿ ಬಿಜೆಪಿಯ ಬೆಂಬಲಿತರು ಇದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಕರಾವಳಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ.
ಬಿಜೆಪಿ ಸಕರ್ಾರ ಅಧಿಕಾರದಲ್ಲಿದೆ. ಹಾಗಾಗಿ ಬಿಜೆಪಿ ಈ ಸಲ ತಳಮಟ್ಟದಲ್ಲಿ ಬೇರು ಬಿಡಲು ಶತಪ್ರಯತ್ನ ಮಾಡುತ್ತಿದೆ. ಆದರೆ ಸೋತ ಕಾಂಗ್ರೆಸ್ ಶಾಸಕರು ಇದೀಗ ಎಚ್ಚೆತ್ತಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ತಮ್ಮ ಹಳೆಯ ಬೇರುಗಳಿಗೆ ಈಗ ನೀರು ಎರೆಯಲು ಸಕಾಲ. ಆದರೆ ಹೊಸ ಮುಖಗಳ ಬಗ್ಗೆ ಪಕ್ಷದಲ್ಲಿ ಚಚರ್ೆ ನಡೆದಿದೆ. ಈಗ ಅಧಿಕಾರದಲ್ಲಿರುವ ಜಿಲ್ಲಾ ಪಂಚಾಯತ್ ಸದಸ್ಯರು ತಮ್ಮ ಬೇರುಗಳನ್ನು ಮತ್ತೆ ಪುನಶ್ಚೇತನ ಮಾಡಿಕೊಳ್ಳಲು ಅವರು ಸಹ ಗ್ರಾಮ ಪಂಚಾಯತ್ನಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಪ್ರಯತ್ನಿಸುವುದು ಸಹಜ. ಈ ಪ್ರಕ್ರಿಯೆಯಲ್ಲಿ ಮುಂದಡಿ ಇಡಲು ಕಾಂಗ್ರೆಸ್ ಯತ್ನ ನಡೆಸಿದೆ. ಬಿಜೆಪಿ ತಮ್ಮ ಮಾಮೂಲಿ ತಂತ್ರಗಾರಿಕೆಯನ್ನು ಮುಂದುವರಿಸಿದೆ.
ಕಾರವಾರ ತಾಲೂಕಿನಲ್ಲಿ ಮೂರು ಜಿಲ್ಲಾ ಪಂಚಾಯತ ಕ್ಷೇತ್ರಗಳಿದ್ದು ಅಲ್ಲಿನ ಸದಸ್ಯರು ತಮ್ಮ ಬೆಂಬಲಿತರನ್ನು ಆಯ್ಕೆ ಮಾಡಲು ಚಚರ್ೆಯಲ್ಲಿ ನಿರತರಾಗಿದ್ದಾರೆ. ಮೂರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ 2, ಪಕ್ಷೇಕ್ಷರ ಸದಸ್ಯರು ಒಬ್ಬರಿದ್ದಾರೆ. ಕಾಂಗ್ರೆಸ್ ನಿಂದ ಜಿ.ಪಂ. ಸದಸ್ಯರಾದ ಕೃಷ್ಣ ಮೇಥಾ, ಚೈತ್ರಾ ಕೋಠಾರಕರ್ ಈಗ ಗ್ರಾಮ ಪಂಚಾಯತ್ ಗಳಲ್ಲಿ ಹಿಡಿತ ಸಾಧಿಸಲು ಯತ್ನ ನಡೆಸಿದ್ದಾರೆ. ಪಕ್ಷೇತ್ರರ ಸದಸ್ಯ ಶಾಂತಾ ಬಾಂದೇಕರ ಮೊದಲಿನಿಂದ ಆಸ್ನೋಟಿಕರ್ ಕುಟುಂಬದ ಅಪ್ತರು. ಮಧ್ಯೆ ಅವರು ಬಿಜೆಪಿ ಸ್ನೇಹ ಸಹ ಮಾಡಿಯಾಗಿದೆ. ಆದರೆ ತಮ್ಮ ಹಿಡಿತವನ್ನು ಅವರು ಬಿಟ್ಟುಕೊಟ್ಟಿಲ್ಲ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವರ ನಡೆ ಕಾದು ನೋಡಬೇಕು. ಬಿಜೆಪಿ ಮಾತ್ರ ತನ್ನ ಮಾರ್ಗವನ್ನು ಈಗಾಗಲೇ ಹಿಡಿದಿದೆ. ಶಾಸಕಿ ರೂಪಾಲಿ ನಾಯ್ಕ ಗ್ರಾಮ ವ್ಯಾಪ್ತಿಯ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಅಂಕೋಲಾ ತಾಲೂಕಿನ 3 ಜಿಲ್ಲಾ ಪಂಚಾಯತ ಸದಸ್ಯರಿದ್ದು, ಅದರಲ್ಲಿ ಕಾಂಗ್ರೆಸ್ 2, ಬಿಜೆಪಿಯಿಂದ ಒಬ್ಬ ಸದಸ್ಯರು ಇದ್ದಾರೆ. ಕಾಂಗ್ರೆಸ್ ಸದಸ್ಯರಾದ ಉಷಾ ಉದಯ ನಾಯ್ಕ, ಸರಳಾ ದಿಕ್ಷಿತ್, ಬಿಜೆಪಿ ಸದಸ್ಯರಾದ ಜಗದೀಶ ಮೊಗಾಟಾ ಸಹಜವಾಗಿ ಗ್ರಾಮ ಪಂಚಾಯತ್ಗಳಲ್ಲಿ ಹಿಡಿತ ಸಾಧಿಸಲು ಯತ್ನಿಸುವುದು ಸಹಜ. ಮಾಜಿ ಶಾಸಕ ಸತೀಶ ಸೈಲ್ ಮುಂದಿನ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಗಳಿವೆ.
ಕಾರವಾರ ತಾಲೂಕಿನ 18 ಗ್ರಾಮ ಪಂಚಾಯತಗಳಾದ ಮಾಜಾಳಿ, ಚಿತ್ತಾಕುಲ, ಅಸ್ನೋಟಿ, ಮುಡಗೇರಿ, ಹಣಕೋಣ, ಘಾಡಸಾಯಿ, ಹೋಟೆಗಾಳಿ, ಕದ್ರಾ, ಮಲ್ಲಾಪುರ, ಕೆರವಡಿ, ದೇಮಳಮಕ್ಕಿ, ವೈಲವಾಡ, ಕಿನ್ನರ, ಕಡವಾಡ, ಶಿರವಾಡ, ಚೆಂಡಿಯಾ, ಅಮದಳ್ಳಿ, ತೋಡೂರುಗಳಲ್ಲಿ ರಾಜಕೀಯ ಗರಿಗೆದರಿದೆ.
ಅಂಕೋಲಾ 21 ಗ್ರಾಮ ಪಂಚಾಯತಗಳಾದ ಸುಂಕಸಾಳ, ಡೊಂಗ್ರಿ, ಅಚವೆ, ಹಿಲ್ಲೂರ, ಅಗಸೂರು, ವಾಸರಕುದುರೆ, ಮೊಗಾಟಾ, ಬೆಳೆಸೆ, ಸಗಡಗೇರಿ, ಅಗ್ರಗೋಣ, ಸೆಟಗೇರಿ, ಬೆಳಂಬರ, ಹೊನ್ನೆಬೇಲು, ವಂದಗೆ, ಬೊಬ್ರವಾಡ, ಅಲಗೇರಿ, ಬಾವಿಕೇರಿ, ಬೇಲೆಕೇರಿ, ಹಟ್ಟಿಕೇರಿ, ಅವಸರ್ಾ, ಹಾರವಾಡಗಳಲ್ಲಿ ಗ್ರಾಮ ಪಂಚಾಯತ್ಗೆ ಸ್ಪಧರ್ಿಸುವ ಹೊಸ ಮುಖಗಳನ್ನು ಬಿಜೆಪಿ , ಕಾಂಗ್ರೆಸ್ ಪಕ್ಷಗಳು ಹುಡುಕುತ್ತಿವೆ.
ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿಯ 32, ಸಿದ್ದಾಪುರದ 23, ಯಲ್ಲಾಪುರದ 15, ಮುಂಡಗೋಡದ 16,ಹಳಿಯಾಳದ 20, ದಾಂಡೇಲಿಯ 4, ಜೊಯಿಡಾದ 16 ಗ್ರಾಮ ಪಂಚಾಯತ್ಗಳಿಗೆ ಡಿ.27 ರಂದು ಮತದಾನ ನಡೆಯಲಿದೆ. ಹಳಿಯಾಳ, ದಾಂಡೇಲಿ, ಜೊಯಿಡಾಗಳಲ್ಲಿ ಸಚಿವ ದೇಶಪಾಂಡೆ ತಮ್ಮ ಬೆಂಬಲಿಗರನ್ನು ಕಣಕ್ಕೆ ಇಳಿಸುವುದು ಖಚಿತ. ಶಿರಸಿ, ಯಲ್ಲಾಪುರ, ಮುಂಡಗೋಡದಲ್ಲಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಳಮಟ್ಟದಲ್ಲಿ ತನ್ನ ಕಾರ್ಯಕರ್ತರನ್ನು ಕಣಕ್ಕೆ ಇಳಿಸುವುದು ಖಚಿತ. ಈ ಬಗ್ಗೆ ಚಚರ್ೆಗಳು ಶಾಸಕರ ಮನೆಗಳಲ್ಲಿ ಜೋರಾಗಿಯೇ ನಡೆದಿದೆ.