ಮುಖ್ಯಮಂತ್ರಿಗಳಿಗೆ ನೀಡಿದ ಗೋವು, ಬೆಳ್ಳಿ ಗದೆ ಹಸ್ತಾಂತರ
ಯಲಗೂರ ಆಂಜನೇಯ ದೇವಸ್ಥಾನಕ್ಕೆ ಹಸ್ತಾಂತರ
ತಾಳಿಕೋಟೆ31: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯ ವ್ಯಾಪ್ತಿಯ ರೈತರು ನೀಡಿದ್ದ ಗೋವನ್ನು ಹಾಗೂ ಬೆಳ್ಳಿ ಗದೆಯನ್ನು ಸೋಮವಾರ ಯಲಗೂರದ ಸುಪ್ರಸಿದ್ದ ಆಂಜನೇಯ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಇದೇ ಏಪ್ರೀಲ್ 26 ರಂದು ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಒಂದನೇ ಹಂತದ ಕಾಮಗಾರಿಯ ಪೈಪಲೈನ್ ವಿತರಣಾ ಜಾಲದ ಕಾಮಗಾರಿ ಭೂಮಿ ಪೂಜಾ ಸಮಾರಂಭವು ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ನಡೆದಿತ್ತು. ರೈತರ ಎರಡು ದಶಕಗಳ ಹೋರಾಟದ ಫಲವಾಗಿ ಯೋಜನೆ ಆರಂಭವಾಗಿತ್ತು. ಯೋಜನೆಗೆ ನೀರಾವರಿ ಸಚಿವರಾಗಿ 2013 ರಲ್ಲಿ ತಾಂತ್ರಿಕ ಅನುಮೋದನೆಯನ್ನು ನೀಡಿದ್ದು ಅಲ್ಲದೇ ಸದ್ಯ ಪೈಪಲೈನ್ ವಿತರಣಾ ಜಾಲದ ಕಾಮಗಾರಿಗೆ ಸುಮಾರು 800 ಕೋಟಿ ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಿದ ಹಿನ್ನಲೆಯಲ್ಲಿ ಭಂಟನೂರ ಗ್ರಾಮದ ರೈತ ಮುಖಂಡ ಸಂಗನಗೌಡ ಹೆಗರೆಡ್ಡಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೋವನ್ನು ದಾನವನ್ನಾಗಿ ನೀಡಲಾಗಿತ್ತು. ಹೋರಾಟ ಸಮಿತಿ ನೇತೃತ್ವದಲ್ಲಿ ಬೆಳ್ಳಿ ಗದೆಯನ್ನು ನೀಡಿ ಸನ್ಮಾನಿಸಲಾಗಿತ್ತು. ಮುಖ್ಯಮಂತ್ರಿಗಳು ರೈತರು ನೀಡಿದ್ದ ಗೋವು ಹಾಗೂ ಬೆಳ್ಳಿ ಗದೆಯನ್ನು ಯಲಗೂರ ದೇವಸ್ಥಾನಕ್ಕೆ ನೀಡುವದಾಗಿ ತಿಳಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಹಿನ್ನಲೆಯಲ್ಲಿ ಸೋಮವಾರ ಯಲಗೂರದ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ಹಿಪ್ಪರಗಿ ಶಾಸಕ ಸೋಮಮನಗೌಡ ಪಾಟೀಲ ಸಾಸನೂರ ನೇತೃತ್ವದಲ್ಲಿ ಗೋವನ್ನು ಉತ್ತರಾಧಿ ಮಠದವರು ನಡೆಸುವ ಗೋಶಾಲೆಗೆ ಮತ್ತು ಬೆಳ್ಳಿಯ ಗದೆಯನ್ನ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಯಿತು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಶಾಸಕರನ್ನು ಹಾಗೂ ಮುಖಂಡರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ಗೆ ನಡೆಯುವ ಚುನಾವಣೆ ಪ್ರಚಾರ ಕಾರ್ಯಕ್ಕೂ ಸಹ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬೆಳಗಾವಿ ವಿಭಾಗ ಪ್ರಭಾರಿಗಳಾದ ಪ್ರಕಾಶ ಅಕ್ಕಲಕೋಟಿ, ವಿವೇಕಾನಂದ ಡಬ್ಬಿ, ಗೋಶಾಲೆಯ ಕಾರ್ಯದಶರ್ಿ ಅಜಿತ್ ಕುಲಕಣರ್ಿ, ಶ್ರೀನಿವಾಸ ಬೆಳ್ಳುಬ್ಬಿ, ಮುಖಂಡರಾದ ಪ್ರಶಾಂತ ಹಾವರಗಿ, ಸೋಮನಗೌಡ ಹಾದಿಮನಿ, ಸಾಯಬಣ್ಣ ಆಲ್ಯಾಳ, ಶೇಖರಗೌಡ ತಂಗಡಗಿ, ಗುರುಗೌಡ ಗುರಡ್ಡಿ, ಗೌಡಪ್ಪಗೌಡ ರಾರರಡ್ಡಿ, ಮುತ್ತು ಮಾಳಿ, ಬಸನಗೌಡ ಪಾಟೀಲ ಲಕ್ಕುಂಡಿ, ಶರಣಗೌಡ ನಾಗರಡ್ಡಿ, ರುದ್ರಗೌಡ ನಾವದಗಿ, ಶರಣಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಸಂಗು ಕಲಬುಗರ್ಿ, ಸುಭಾಸ ನಡುವಿನಮನಿ ಸೇರಿದಂತೆ ಇತರರು ಇದ್ದರು.