ಹೂವಿನ ಹಡಗಲಿ

ಅಂಗನವಾಡಿ ಕಾರ್ಯಕರ್ತೆಯರನ್ನು ನಿರ್ಲಕ್ಷ್ಯಸಿದ ಸರ್ಕಾರ : ಅಧ್ಯಕ್ಷೆ ಬಿ.ಜಯಲಕ್ಷ್ಮಿ

ಅಂಗನವಾಡಿ ಕಾರ್ಯಕರ್ತೆಯರನ್ನು  ನಿರ್ಲಕ್ಷ್ಯಸಿದ  ಸರ್ಕಾರ : ಅಧ್ಯಕ್ಷೆ ಬಿ.ಜಯಲಕ್ಷ್ಮಿ

ಲೋಕದರ್ಶನ ವರದಿ 

ಹೂವಿನಹಡಗಲಿ 7:  ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸುಮಾರು ನಲವತ್ತೈದು ವರ್ಷಗಳಿಂದಲೂ ಅಲ್ಪ ಗೌರವ ಧನದಲ್ಲಿ ಸೇವೆ ಸಲ್ಲಿಸುತ್ತಿದ್ದು ಈ ಬಾರಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಪ್ರಕಾರ ಆರನೇ ಗ್ಯಾರಂಟಿ ಘೋಷಣೆ ಮಾಡಿ ಮರೆತು ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ತಾಲೂಕು ಅಧ್ಯಕ್ಷೆ ಬಿ.ಜಯಲಕ್ಷ್ಮಿ ಆರೋಪಿಸಿದ್ದಾರೆ ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕೆ ಗೋಷ್ಠಿ ಉದ್ದೇಶಿಸಿ ಮಾತನಾಡಿ ನಮ್ಮ ಕಾರ್ಯಕರ್ತೆಯರು ಸುಮಾರು ವರ್ಷಗಳ ಹಿಂದೆ ಅಲ್ಪ ಗೌರವ ಧನದಲ್ಲಿ ಸೇವೆ ಸಲ್ಲಿಸುತ್ತಿದ್ದು  ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಮಹಿಳೆಯರ ಮೇಲೆ ದುಡಿಯುವ ವರ್ಗದ ಜನರ ಬೇಡಿಕೆಗೆ ಈಡೇರಿಸುವ ಭರವಸೆ ಇಟ್ಟಿದ್ದೇವು ಆದರೆ ನಮಗೆ ಬಜೆಟ್ ನಲ್ಲಿ ಸೀರೆ ಘೋಷಿಸಿದ್ದಾರೆ ಇದು ನಮಗೆ ಇಷ್ಟವಿಲ್ಲ ನಮಗೆ ಸೀರೆ ಬದಲು ಗೌರವ ಧನವನ್ನು ಹೆಚ್ಚಿಸಿ, ಬೇಡಿಕೆಯಾದ ಕನಿಷ್ಠ ವೇತನ,ಸೇವಾ ಭದ್ರತೆ ಕೊಡಬೇಕೆಂದು ಒತ್ತಾಯಿಸಿದರು..ತಾಲೂಕು ಕಾರ್ಯದರ್ಶಿ ಹೆಚ್‌.ಸವಿತಾ ಹರವಿ.ಎಐಟಿಯುಸಿ ಮುಖಂಡ ಹಲಗಿ ಸುರೇಶ.ಡಿ.ಮುಕುಂದಗೌಡ.ಇತರರುಇದ್ದರು 


ಸುದ್ದಿ ಓದಿ