ಸರಕಾರಿ ಮಾದರಿ ಶಾಲೆ ನೂತನ ಎಸ್ಡಿಎಂಸಿ ರಚನೆ
ಲೋಕದರ್ಶನ ವರದಿ
ಯರಗಟ್ಟಿ 06: ಪಟ್ಟಣದ ಅಂಬೇಡ್ಕರ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ರಫೀಕ ಡಿ. ಕೆ. ಮತ್ತು ಉಪಾಧ್ಯಕ್ಷರಾಗಿ ಯಕ್ಕೇರೆಪ್ಪ ಮಾಳಗಿ ಆಯ್ಕೆಯಾಗಿದ್ದಾರೆ ಎಂದು ಶಾಲೆ ಪ್ರಧಾನ ಗುರುಗಳಾದ ಪಿ. ಎಂ. ತಳವಾರ ತಿಳಿಸಿದ್ದಾರೆ.
ಶಾಲೆಯಲ್ಲಿ ಶನಿವಾರ ಎಸ್ ಡಿಎಂಸಿ ರಚನೆ ಸಭೆ ನಡೆಯಿತು. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಮತ್ತು ನೂತನ ಸದಸ್ಯ ಹನಮಂತ ತಳವಾರ, ಪ್ರಕಾಶ ಉದ್ದಪ್ಪನವರ, ಶಾನೂರ ಕಮತಗಿ, ರುಕ್ಮವ್ವ ಮಾಳಗಿ, ಶಾಂತವ್ವ ಮಾಳಗಿ, ಭಾರತಿ ಚನ್ನಮೇತ್ರಿ, ಮಲಿಕಸಾಬ ಚಾಂದಖಾನವರ, ಹುಸೇನ ಹುಸೇನನಾಯ್ಕರ, ಮಹಬೂಬ ನದಾಫ, ನಜಮುನ್ನಿಸಾ ಶಗೇಹಳ್ಳಿ, ಮಮ್ತಾಜ ದಳವಾಯಿ, ರಿಯಾನಾ ಸಂಗೋಳ್ಳಿ, ಲಕ್ಷ್ಮೀ ಪಿಸೂತ್ರಿ, ಭಿರಪ್ಪ ಕಿಲಾರಿ, ಮಹೇಶ ಹಲಗತ್ತಿ ಇವರನ್ನು ಆಯ್ಕೆ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ರಫೀಕ ಡಿ. ಕೆ. ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಡಲಾಗುವುದು ಎಂದರು.
ಬಾಸ್ಕರ ಹಿರೇಮತ್ರಿ, ಪಿ. ಸಿ. ತಳವಾರ, ಬಾಬು ಚನ್ನಮೇತ್ರಿ, ಯಕ್ಕೆರೆಪ್ಪ ತಳವಾರ ಸೇರಿದಂತೆ ಶಾಲಾ ಶಿಕ್ಷಕ ವೃಂದ, ಸ್ಥಳಿಯರು ಉಪಸ್ಥಿತರಿದ್ದರು