ವೈಭವದ ಹಂಪಿ ಉತ್ಸವ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ
ಲೋಕದರ್ಶನ ವರದಿ
ಬಳ್ಳಾರಿ 22: ಈ ಬಾರಿಯ ಹಂಪಿ ಉತ್ಸವವನ್ನು ಮಾ. 02 ಮತ್ತು 03 ರಂದು ಆಚರಿಸಲಾಗುತ್ತಿದ್ದು, ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ಸವವನ್ನು ಜನೋತ್ಸವವಾಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಹೇಳಿದರು.
ರಾಜ್ಯದಲ್ಲಿ ತೀವ್ರ ಬರ ಇರುವುದರಿಂದ, ಹಂಪಿ ಉತ್ಸವವನ್ನ ಸರಳವಾಗಿ ಆಚರಿಸಲಾಗುತ್ತಿದ್ದರೂ, ಈ ಬಾರಿ ವಿಜಯನಗರ ವೈಭವವನ್ನು ಬಿಂಬಿಸುವ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಂಪಿ ಉತ್ಸವದ ಅಂಗವಾಗಿ ಈ ಬಾರಿ 05 ವೇದಿಕೆಗಳನ್ನು ನಿಮರ್ಿಸಿ, ರಾಜ್ಯ ಮಟ್ಟದ ಮತ್ತು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎದುರು ಬಸವಣ್ಣ ಹಂಪಿ ಬಜಾರ್, ವಿರುಪಾಕ್ಷೇಶ್ವರ ದೇವಸ್ಥಾನ ಆವರಣ, ಕಡಲೆಕಾಳು ಗಣಪ ಮುಂಭಾಗ, ಸಾಸಿವೆಕಾಳು ಗಣಪ ಮುಂಭಾಗ ಹಾಗೂ ರತ್ನಕೂಟ ಮಹದ್ವಾರ ಬಳಿ ಸೇರಿದಂತೆ ಒಟ್ಟು ಐದು ವೇದಿಕೆಗಳಲ್ಲಿ ಈ ಬಾರಿಯ ಹಂಪಿ ಉತ್ಸವ ಆಚರಿಸಲಾಗುವುದು. ಉತ್ಸವ ಅಂಗವಾಗಿ ಫೆ. 22 ರಿಂದಲೇ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ, ಸ್ಥಳೀಯರೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುವ ಮೂಲಕ ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿಸಲಾಗುವುದು. ಪ್ರಮುಖ ವೇದಿಕೆಯಲ್ಲಿ ಮಾ. 2 ರಂದು ಕನ್ನಡ ಚಿತ್ರರಂಗದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ತಂಡ ಹಾಗೂ ಮಾ. 03 ರಂದು ಇನ್ನೋರ್ವ ಖ್ಯಾತ ಗಾಯಕ ವಿಜಯಪ್ರಕಾಶ್ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ಈ ಬಾರಿಯ ಆಕರ್ಷಣೆ ಎನಿಸಲಿದೆ. ಉಳಿದಂತೆ ರಾಜ್ಯ ಮತ್ತು ಸ್ಥಳೀಯ ಮಟ್ಟದ ಕಲಾವಿದರಿಗೇ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಲ್ಲ ಸಾರ್ವಜನಿಕರು, ಕನ್ನಡ ನಾಡಿನ ಹೆಮ್ಮೆಯ ಅಭಿಮಾನಿಗಳು ಎಲ್ಲರೂ ಹಂಪಿ ಉತ್ಸವದಲ್ಲಿ ಪಾಲ್ಗೊಂಡು, ಉತ್ಸವವನ್ನು ಯಶಸ್ವಿಯನ್ನಾಗಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಕರೆ ನೀಡಿದರು.
ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಹೊಸತನದ ಕಾರ್ಯಕ್ರಮ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು. ಪ್ರವಾಸೋದ್ಯಮ ಇಲಾಖೆಯವರು, ಇಲ್ಲಿನ ಪ್ರವಾಸಿ ತಾಣಗಳು ಹಾಗೂ ಮಹತ್ವವನ್ನು ಬಿಂಬಿಸುವ ರೀತಿಯಲ್ಲಿ ಯುವಜನರನ್ನು ಆಕಷರ್ಿಸುವಂತೆ ನವನವೀನ ಕಾರ್ಯಕ್ರಮಗಳನ್ನು ರೂಪಿಸಬೇಕು. ವಿವಿಧ ಇಲಾಖೆಗಳು ಹಾಗೂ ಕಾಲೇಜುಗಳಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರಗಳನ್ನು ತಯಾರಿಸಲು ಕ್ರಮ ಕೈಗೊಳ್ಳಬೇಕು. ಉತ್ತಮ ಸ್ತಬ್ಧಚಿತ್ರಗಳಿಗೆ ಅವಾಡರ್್ ನೀಡಲಾಗುವುದು. ಅಲ್ಲದೆ ಉತ್ಸವ ಸಂದರ್ಭದಲ್ಲಿ ಎಲ್ಲ ಇಲಾಖೆಗಳು ಅಭಿವೃದ್ಧಿಪರ ವಸ್ತು ಪ್ರದರ್ಶನಗಳು, ಆರೋಗ್ಯ ಇಲಾಖೆಯವರು ಮಾರಕ ರೋಗಗಳ ಕುರಿತು ಜನಜಾಗೃತಿ ಮೂಡಿಸುವ ವಸ್ತುಪ್ರದರ್ಶನ ಆಯೋಜಿಸಬೇಕು. ಪ್ರತಿ ವರ್ಷದಂತೆ ಈ ಬಾರಿಯೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳ್ಳುವಂತಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್.ರಂಗರಾಜನ್, ಮಹಾನಗರಪಾಲಿಕೆ ಮೇಯರ್ ಆರ್.ಸುಶೀಲಬಾಯಿ, ಹೊಸಪೇಟೆ ಉಪವಿಭಾಗಾಧಿಕಾರಿ ಕೆ.ಎನ್.ಲೋಕೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು. ಹಂಪಿ ಉತ್ಸವ ಅಂಗವಾಗಿ ಏರ್ಪಡಿಸಲಾಗುವ ಕಾರ್ಯಕ್ರಮಗಳ ವಿವರದ ಪೋಸ್ಟರ್ ಹಾಗೂ ಹಂಪಿ ಉತ್ಸವದ ಪ್ರಚಾರ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲೆಯ ಎಲ್ಲೆಡೆ ಹಾಗೂ ಎಲ್ಲ ಬಸ್ಗಳ ಮೇಲೆ ಭಿತ್ತಿ ಪತ್ರ ಅಳವಡಿಸಿ ವ್ಯಾಪಕ ಪ್ರಚಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.