ಕಾರವಾರ

ಬಿ.ಮಾರಪ್ಪ ಮೆಮೂರಿಯಲ್ ಟ್ರಸ್ಟ್ ಪ್ರಶಸ್ತಿ ಸ್ವೀಕರಿಸಿದ ಗೋಪಾಲ ಡಿ.ನಾಯ್ಕ

ಬಿ.ಮಾರಪ್ಪ ಮೆಮೂರಿಯಲ್ ಟ್ರಸ್ಟ್  ಪ್ರಶಸ್ತಿ ಸ್ವೀಕರಿಸಿದ ಗೋಪಾಲ ಡಿ.ನಾಯ್ಕ

ಕಾರವಾರ 02: ಅರಣ್ಯ ಸಂರಕ್ಷಣೆ, ವನ್ಯಜೀವಿ ಪ್ರೀತಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಿದ ಸಿಬ್ಬಂದಿಗೆ ಪ್ರತಿ ವರ್ಷ ನೀಡುವ ಬಿ.ಮಾರಪ್ಪ ಮೆಮೂರಿಯಲ್ ಪ್ರಶಸ್ತಿಯನ್ನು ಕಾರವಾರ ಅರಣ್ಯ ವಿಭಾಗದ ಅರಣ್ಯ ರಕ್ಷಕ ಪ್ರಶಸ್ತಿಯನ್ನು ಗೋಪಾಲ ಡಿ,ನಾಯ್ಕ ಅವರು ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ವೀಕರಿಸಿದರು. 

ಪ್ರಶಸ್ತಿ 10 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ರಕ್ಷಣೆ ಕುರಿತು ವಿದ್ಯಾಥರ್ಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ ಗೋಪಾಲ್ ಡಿ,ನಾಯ್ಕ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು. ರಾಜ್ಯದಲ್ಲಿ ಒಟ್ಟು 13 ಜನ ಅರಣ್ಯ ಸಿಬ್ಬಂದಿಯನ್ನು ಬಿ.ಮಾರಪ್ಪ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಈ ಪೈಕಿ ಜಿಲ್ಲೆಯ ನಾಲ್ವರು ಸಿಬ್ಬಂದಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. 

ಸಸ್ಯ ಪಾಲನೆ ಮಾಡಿದ ಇಡಗುಂದಿಯ ನಾರಾಯಣ ಡಿ.ಬಿಲ್ಲಚತ್ರಿ, ಹಳಿಯಾಳದ ಕಲ್ಪನಾ ಜೆ.ಗುರವ, ಕಾಳಿ ಹುಲಿ ಸರಂಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಉಪ ವಲಯ ಅರಣ್ಯಾಧಿಕಾರಿ ಪ್ರಸನ್ನ ಅವರಿಗೆ ಬಿ.ಮಾರಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇವರೆಲ್ಲರಿಗೂ ಬಿ.ಮಾರಪ್ಪ ಪ್ರಶಸ್ತಿ ಜೊತೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಅರಣ್ಯ ಪ್ರೀತಿಯನ್ನು ಮುಂದುವರಿಸಲು ಸಮಾರಂಭದಲ್ಲಿದ್ದ ಗಣ್ಯರು ಪ್ರಶಸ್ತಿ ಪಡೆದವರಿಗೆ ಸೂಚಿಸಿದರು. 

ಬಿ.ಮಾರಪ್ಪ ಸಹ ಅರಣ್ಯಾಧಿಕಾರಿಯಾಗಿ ಕೆಲಸ ಮಾಡಿದ್ದು, ಅವರ ನೆನಪಿನಲ್ಲಿ ಪ್ರತಿ ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಈ ವರ್ಷ ಕೆನರಾ ವೃತ್ತದ ನಾಲ್ವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋಪಾಲ ಡಿ.ನಾಯ್ಕ ಅವರು ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ಇಂದಿನ ತುತರ್ು ಅಗತ್ಯವಾಗಿದ್ದು, ಸೇವಾ ಅವಧಿಯಲ್ಲಿ ಅರಣ್ಯ ಕಾಳಜಿಯ ಕುರಿತು ಜನತೆಯಲ್ಲಿ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸುವುದಾಗಿ ಹೇಳಿದರು. ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.ಗಣ್ಯರು, ಬಿ.ಮಾರಪ್ಪ ಮೆಮೂರಿಯಲ್ ಟ್ರಸ್ಟ್ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. 


ಸುದ್ದಿ ಓದಿ