ಚಿಕ್ಕೋಡಿ

ಮೀರಾ ಸಂತೋಷ ಕಾಮತಗೆ ಚಿನ್ನದ ಪದಕ

ಮೀರಾ ಸಂತೋಷ ಕಾಮತಗೆ ಚಿನ್ನದ ಪದಕ

ಮಾಂಜರಿ 07: ಬೆಳಗಾವಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ಇತ್ತೀಚೆಗೆ ನಡೆದ ಹದಿಮೂರನೇ ಘಟಿಕೋತ್ಸವದಲ್ಲಿ ಚಿಕ್ಕೋಡಿ ತಾಲೂಕಿನ ಮೀರಾ ಸಂತೋಷ ಕಾಮತ ಅವರಿಗೆ ಬ್ಯಾಚ್ಲರ್ ಆಫ್ ಸಾಯನ್ಸ, ಹೊಟೇಲ್ ಮ್ಯಾನೇಜಮೆಂಟ್ ಮತ್ತು ಕ್ಯಾಟರಿಂಗ್ ಟೆಕನಾಲೋಜಿ ವಿಭಾಗದಲ್ಲಿ ಹೆಚ್ಚುಅಂಕ ಗಳಿಸಿದ್ದಕ್ಕಾಗಿ ಕನರ್ಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಇವರು ಚಿನ್ನದ ಪದಕ ನೀಡಿ ಗೌರವಿಸಿದರು. 

 ಕೆಎಲ್ಇ ಶಿಕ್ಷಣ ಸಂಸ್ಥೆಯ ಕುಲಪತಿ ಡಾ. ಪ್ರಭಾಕರ ಕೋರೆ, ಉಪಕುಲಪತಿ ಡಾ. ನಿತಿನ್ ಗಂಗನೆ, ಡಾ. ವಿ. ಎ. ಕೋಠಿವಾಲೆ, ಡಾ. ಜ್ಯೋತಿ ನಾಗಮೋತಿ ಮುಂತಾಂದವರು ವೇದಿಕೆಯಲ್ಲಿದ್ದರು.

ಕೆಎಲ್ಇ ಶಿಕ್ಷಣ ಸಂಸ್ಥೆಯ ಬ್ಯಾಚುಲರ್ ಆಫ್ ಸೈನ್ಸ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿಯ ಮೊದಲ ಬ್ಯಾಚ್ ವಿದ್ಯಾಥರ್ಿನಿ ಮೀರಾ ಕಾಮತ್ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಚಿನ್ನದ ಪದಕ ಪಡೆದಿದ್ದರಿಂದ ಮಾಂಜರಿ ಗ್ರಾಮಸ್ಥರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ 

ಸುದ್ದಿ ಓದಿ