ವಿದ್ಯಾರ್ಥಿಗಳು ಶ್ರೇಷ್ಠ, ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ಕೈಜೋಡಿಸಲಿ ಗೆಹ್ಲೋಟ್ ಕರೆ
ಹೊಸಪೇಟೆ(ವಿಜಯನಗರ),ಡಿ.09: ವರ್ತಮಾನದ ಅವಶ್ಯಕತೆಗಳಿಗನುಗುಣವಾಗಿ ಸ್ವದೇಶಿ ಪಾರಂಪರಿಕ ಜ್ಞಾನದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಶ್ರೇಷ್ಠ ಭಾರತ, ನವಭಾರತ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕೆಂದು ರಾಜ್ಯಪಾಲರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ರವರು ಕರೆ ನೀಡಿದರು.
ಅವರು ಗುರುವಾರ ವಿಶ್ವವಿದ್ಯಾನಿಲಯದ ನವರಂಗ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ 31 ನೇ ನುಡಿಹಬ್ಬ ಘಟಿಕೋತ್ಸವ ಉದ್ಘಾಟಿಸಿ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪಡೆದಂತಹ ಗುಣಾತ್ಮಕ ಶಿಕ್ಷಣದಿಂದ ಗಟ್ಟಿತನದ ನೈತಿಕತೆಯನ್ನು ವಿದ್ಯಾರ್ಥಿಗಳ ಜೀವನದಲ್ಲಿ ತರುವ ಮೂಲಕ ವಿದ್ಯಾರ್ಥಿಗಳ ವೃತ್ತಿಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೇರಲು ಸಹಾಯವಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವರ್ತಮಾನ ಮತ್ತು ಮುಂದೆ ಬರುವ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸುವುದು ಮತ್ತು ಸುರಕ್ಷಿತವಾಗಿಡುವುದಾಗಿದೆ. ಈ ನಿಟ್ಟಿನಲ್ಲಿ ನವ ಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಮಾತೃಭಾಷೆಯಲ್ಲಿ ಅಧ್ಯಯನದ ಜೊತೆಗೆ ಐಚ್ಚಿಕ ವಿಷಯಗಳ ಆಯ್ಕೆಗೆ ಸ್ವತಂತ್ರತೆ ಇದ್ದು ಎಲ್ಲರಿಗೂ ಉನ್ನತ ಶಿಕ್ಷಣ ಸಿಗುವಂತೆ ಮಾಡುವುದು ಹೊಸ ಶಿಕ್ಷನ ನೀತಿಯ ಉದ್ದೇಶವಾಗಿದೆ. ದೇಶದ ಸಾಂಸ್ಕೃತಿಕ ವೈಭವ ಪುನಃ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಮತ್ತು ಹೊಸ ಶಿಕ್ಷಣ ನೀತಿಯ ಅನುಷ್ಟಾನದಲ್ಲಿ ತಮ್ಮಗಳ ಕೊಡುಗೆ ಅಗತ್ಯವಾಗಿದೆ ಎಂದರು.
ದತ್ತು ಗ್ರಾಮ, ಹಸ್ತಪ್ರತಿ ಸಂಗ್ರಹಕ್ಕೆ ಮೆಚ್ಚುಗೆ; ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸುಮಾರು 5 ಸಾವಿರ ಹಸ್ತಪ್ರತಿಗಳ ಸಂಗ್ರಹವಿದ್ದು ಮೆಚ್ಚುವಂತದ್ದಾಗಿದೆ. ಮತ್ತು ವಿಶ್ವವಿದ್ಯಾನಿಲಯದ ಸುತ್ತಮುತ್ತಲಿನ 5 ಗ್ರಾಮಗಳ ಅಭಿವೃದ್ದಿಗೆ ದತ್ತು ತೆಗೆದುಕೊಂಡಿದ್ದು ಇದರ ಅಭಿವೃದ್ದಿಯಲ್ಲಿ ಪ್ರಮುಖಪಾತ್ರ ವಹಿಸಿರುವುದು ಸಹ ಶ್ಲಾಘನೀಯವಾದ ಕಾರ್ಯವಾಗಿದ್ದು ಇದು ಮುಂದುವರೆಯಲಿ ಎಂದು ಹಾರೈಸಿದರು.
ಡಾ; ಚಂದ್ರಶೇಖರ್ ಕಂಬಾರರ ಕಾರ್ಯ ಸ್ಮರಣೆ; ಪದ್ಮಭೂಷಣ, ಪದ್ಮಶ್ರೀ, ಜ್ಞಾನಪೀಠ ಪುರಷ್ಕೃತರು, ಸರಸ್ವತಿ ಸಮ್ಮಾನ್, ನಾಡೋಜ ಡಾ; ಚಂದ್ರಶೇಖರ್ ಕಂಬಾರರು ಹಂಪಿ ವಿಶ್ವವಿದ್ಯಾನಿಲಯಕ್ಕೆ ತಮ್ಮದೇ ಆದ ಶ್ರೇಷ್ಠ ಕೊಡುಗೆ ನೀಡಿದ್ದು ಅತ್ಯತ್ತಮವಾದ ಶೈಕ್ಷಣಿಕ ನಿಯಮಾವಳಿಗಳನ್ನು ರೂಪಿಸಿ ಭವ್ಯ ಬುನಾದಿ ಹಾಕಿ ಹೋಗಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.
ಘಟಿಕೋತ್ಸವ ಭಾಷಣ; ಪ್ರೊ.ಮಲ್ಲೇಪುರಂ ಜಿ. ವೆಂಕಟೇಶರವರು ಮಾತನಾಡಿ ನಾನು ಈ ವಿಶ್ವವಿದ್ಯಾಲಯದ ಕೂಸು. ಕನ್ನಡ ವಿಶ್ವವಿದ್ಯಾಲಯ ನಮ್ಮ ಕನಸು ಮತ್ತು ನನಸು. ಕನ್ನಡ ತಾಯಿಯ ಮೊಲೆಹಾಲು ಕುಡಿದು ಇಲ್ಲಿ ಬೆಳೆದವರಲ್ಲಿ ನಾನೂ ಒಬ್ಬ. ಕನ್ನಡ ಈ ವಿಶ್ವವಿದ್ಯಾಲಯದ ಕೇಂದ್ರಪ್ರಜ್ಞೆ. ಅದು ನಮ್ಮ ಸಂಸ್ಕೃತಿಯ ಭಾಗ. ವ್ಯಾಕರಣಕಾರ ಕೇಶಿರಾಜ ತನ್ನ `ಶಬ್ದಮಣಿ ದರ್ಪಣಂ ಹಳಗನ್ನಡ ವ್ಯಾಕರಣ ಕೃತಿಯಲ್ಲಿ `ಅರಿದಲ್ತೆ ಕನ್ನಡಂ ಎಂದು ಹೇಳಿದ್ದಾನೆ. ಇದು ಸ್ವಾರಸ್ಯಕರವಾದ ಮಾತು. ಅವನು 11ನೆಯ ಶತಮಾನದ ಮಧ್ಯಾವಧಿಯಲ್ಲಿ ಇದ್ದವನು.
ಕೇಶಿರಾಜನ ಮಾತು ಅಂದು ಎಷ್ಟು ಪ್ರಸ್ತುತವಾಗಿತ್ತೊ ಇಂದೂ ಅಷ್ಟೇ ಪ್ರಸ್ತುತವಾಗುತ್ತಿದೆ. ಇಂದು ಕನ್ನಡವು ಮೂಲೆಗುಂಪಾಗುವ ವಾಸ್ತವ ಸ್ಥಿತಿಯಲ್ಲಿದೆ. ಕೇಶಿರಾಜನು ಹೇಳಿದಂತೆ `ನಾವು ಕನ್ನಡವನ್ನು ತಿಳಿಯಬೇಕಲ್ಲವೆ? ಎಂಬ ಪ್ರಶ್ನಧ್ವನಿಯ ಇಂಗಿತಾರ್ಥವನ್ನು ನಾವು ತಿಳಿಯಬೇಕಾಗಿದೆ. ಕನರ್ಾಟಕವು ಕನ್ನಡವನ್ನು ಆಧಿಕಾರಿಕವಾಗಿಯೇನೊ ನಡೆಸುತ್ತಿದೆ. ಆದರೆ, ಕನ್ನಡವನ್ನು ಸರ್ಕಾರವೋ ಸಂಘ ಸಂಸ್ಥೆಗಳೊ ಮಾತ್ರ ಉಳಿಸಿಕೊಳ್ಳುವುದಲ್ಲ, ನಮ್ಮ ಕನ್ನಡ ಜನ ಸಮೂಹವು ಕನ್ನಡವನ್ನು ಕಟ್ಟಿಕೊಳ್ಳಬೇಕಾಗಿದೆ. ಇದಕ್ಕಾಗಿ ಬೇಂದ್ರೆಯವರು ``ಕನ್ನಡವು ಕನ್ನಡವ ಕನ್ನಡಿಸುತಿರಬೇಕು ಎಂದು ಉಪಾಯಾಂತರವಾಗಿ ಹೇಳಿದ್ದಾರೆ! ನಾವು ಈ ಮಾತನ್ನು ಆಳವಾಗಿ ಯೋಚಿಸಬೇಕಾಗಿದೆ. ಕವಿ ಕುವೆಂಪು ಅವರು ಐವತ್ತು ವರ್ಷಗಳ ಹಿಂದೆ ಭಾಷೆ ಅಥವ ನುಡಿಯ ಬಗೆಗೆ ಹೇಳಿದ ಮಾತನ್ನು ಸ್ಮರಿಸುವುದು ತುಂಬಾ ಅಗತ್ಯ. ಅವರು ಹೇಳಿದ ಮಾತನ್ನು ಮರುಚಿಂತಿಸುವುದೂ ಅಗತ್ಯವೆನಿಸುತ್ತಿದೆ. ಭಾಷೆಗೆ ಮೂರು ನೆಲೆಗಳುಂಟು. ಒಂದು ಲೋಕೋಪಯೋಗಿ, ಎರಡನೆಯದು ಜ್ಞಾನೋಪಯೋಗಿ ಮೂರನೆಯದು ಭಾವೋಪಯೋಗಿ.
ಯಾವುದೇ ಭಾಷಾಸಾಹಿತ್ಯಕ್ಕೂ ಕಡಿಮೆ ಇಲ್ಲದಂತೆ ಕನ್ನಡ ಸಾಹಿತ್ಯ ಕೃತಿರತ್ನಗಳು ನಮ್ಮಲ್ಲಿವೆ. ಬೇಂದ್ರೆ, ಪುತಿನ, ಕುವೆಂಪು ಅವರಂಥ ಆಧುನಿಕ ರತ್ನತ್ರಯರನ್ನು ನಾವು ಕಂಡಿದ್ದೇವೆ. ಅವರು ಸೃಜಿಸಿದ ಸಾಹಿತ್ಯವು ಕನ್ನಡ ಸಾಹಿತ್ಯ ಪ್ರಪಂಚವನ್ನು ಲೋಕಸಾಹಿತ್ಯದ ಪ್ರಪಂಚಕ್ಕೆ ಹೆಗಲೆಣೆಯಾಗಿದೆ. ಇನ್ನು ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ ಮುಂತಾದವರು ಆಧುನಿಕ ಕನ್ನಡ ಸಾಹಿತ್ಯಕ್ಕೆ ಬೆಲೆವತ್ತಾದ ಕಾಣಿಕೆಯನ್ನು ನೀಡಿದ್ದಾರೆ.
ಕನ್ನಡ ಭಾಷೆಯು ಇತರ ಯಾವುದೇ ಪ್ರಾಂತ್ಯ ಅಥವ ರಾಜ್ಯದ ಭಾಷಾದೃಷ್ಟಿಯಿಂದ `ಜ್ಞಾನೋಪಯೋಗಿಯಾದ ಲಕ್ಷಾಂತರ ಕೃತಿಗಳು ಹೊರಬಂದಿವೆ, ಹೊರಬರುತ್ತಿವೆ. ನಿಘಂಟು, ವ್ಯಾಕರಣ, ಛಂದಶ್ಶಾಸ್ತ್ರ, ನಿರುಕ್ತ ಮುಂತಾದ ಭಾಷೆಗೆ ಸಂಬಂಧಿಸಿದ ಕೃತಿಗಳಾಗಲಿ; ಭೌತಶಾಸ್ತ್ರ, ಜೀವಶಾಸ್ತ್ರ, ಭೌತವಿಜ್ಞಾನ, ದೇಹರಚನಾಶಾಸ್ತ್ರ, ಪರಾಮಾನಸಶಾಸ್ತ್ರ, ಜೀವವಿಜ್ಞಾನ, ಸಸ್ಯವಿಜ್ಞಾನ ಮುಂತಾದ ವಿವಿಧ ಬಗೆಯ ಹತ್ತಾರು ವಿಜ್ಞಾನ ಶಾಖೆಗಳ ಕೃತಿಗಳಾಗಲಿ, ತಂತ್ರಶಾಸ್ತ್ರ, ತತ್ತ್ವಶಾಸ್ತ್ರ, ವೇದಾಂತ, ದರ್ಶನದ ಹತ್ತಾರು ಉಪಶಾಖೆಗಳ ಕೃತಿಗಳಾಗಲಿ, ಕಲಾಸಾಹಿತ್ಯಕ್ಕೆ ಸಂಬಂಧಿಸಿದ ನೂರಾರು ಕೃತಿಗಳಾಗಲಿ, ದಶಮಹಾವಿದ್ಯೆಯ ಅನಘ್ರ್ಯಕೃತಿಗಳಾಗಲಿ-ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿವೆ.
ಮೈಸೂರು ವಿಶ್ವವಿದ್ಯಾನಿಲಯವು ಕವಿ ಕುವೆಂಪು ಅವರ ದೂರದೃಷ್ಟಿಯ ಫಲವಾಗಿ ಜ್ಞಾನ-ವಿಜ್ಞಾನಕ್ಕೆ ಸಂಬಂಧಿಸಿದ ನೂರಾರು ಕೃತಿಗಳನ್ನು ಹೊರತಂದಿತು. ಆನಂತರ ದೇಜಗೌ, ಹಾ.ಮಾ. ನಾಯಕರು ಅದನ್ನು ಮುಂದುವರೆಸಿದರು. ಆಮೇಲೆ ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯವು ಮೈಸೂರು ವಿಶ್ವವಿದ್ಯಾಲಯದ ಹಾದಿಯನ್ನು ಮುಂದುವರೆಸಿತು. ಕಳೆದ ಮೂವತ್ತು ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯವು ಜ್ಞಾನ-ವಿಜ್ಞಾನ-ಕಲಾತತ್ತ್ವಗಳಿಗೆ ಸಂಬಂಧಿಸಿದಂತೆ ಸಹಸ್ರಾರು ಕೃತಿಗಳನ್ನು ಪ್ರಕಟಿಸುತ್ತಿದೆ. ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾದ ಪದ್ಮಭೂಷಣ ಡಾ.ಚಂದ್ರಶೇಖರ ಕಂಬಾರರು ಜ್ಞಾನ-ವಿಜ್ಞಾನ-ಕಲಾತತ್ತ್ವಕ್ಕೆ ಸಂಬಂಧಿಸಿದ ಅಪೂರ್ವ ಯೋಜನೆಗಳನ್ನು ರೂಪಿಸಿ-ನೂತನ ಮಾರ್ಗವನ್ನೇ ನಿಮರ್ಿಸಿಕೊಟ್ಟಿದ್ದಾರೆ. ಹೀಗಾಗಿ, ಕನ್ನಡ ವಿಶ್ವವಿದ್ಯಾಲಯವು ಜ್ಞಾನ-ವಿಜ್ಞಾನಕ್ಕೆ ಸಂಬಂಧಿಸಿದ ಅಪೂರ್ವ ಕೃತಿಸರಣಿಗಳನ್ನು ಪ್ರಕಟಿಸಿದೆ. ಕನ್ನಡ ವಿಶ್ವವಿದ್ಯಾಲಯದ ಪ್ರತಿಯೊಂದು ವಿಭಾಗವು ಕನ್ನಡ ಜ್ಞಾನಪ್ರಪಂಚಕ್ಕೆ ನೂತನ ಮಾರ್ಗವನ್ನು ನಿಮರ್ಾಣ ಮಾಡಿಕೊಟ್ಟಿರುವುದನ್ನು ನಾವು ಕಡೆಗಣಿಸುವಂತಿಲ್ಲ. ಕನ್ನಡ ವಿಶ್ವವಿದ್ಯಾಲಯ ಪ್ರಾರಂಭದಲ್ಲಿ ಹೊರತಂದ ವೈದ್ಯವಿಶ್ವಕೋಶ ಹಾಗೂ ಭಾಷೆ, ಪುರಾಣ, ಚರಿತ್ರೆ ಮುಂತಾದ ವಿಜ್ಞಾನ ಹಾಗೂ ಮಾನವಿಕಕ್ಕೆ ಸಂಬಂಧಿಸಿದ ಹತ್ತಾರು ಸಂಪುಟಗಳೂ ಕನರ್ಾಟಕ ಶಾಸನ ಸಂಪುಟಗಳೂ ಜಾಗತಿಕ ಚರಿತ್ರೆಗೆ ಸಂಬಂಧಿಸಿದ ಸರಣಿ ಸಂಪುಟಗಳೂ ಶಿಲ್ಪ-ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅಪೂರ್ವ ಗ್ರಂಥಗಳೂ ಹೊರಬಂದಿವೆ. ಇವು ಕನ್ನಡ ಜ್ಞಾನಪ್ರಪಂಚಕ್ಕೆ ಹೊಸದಾರಿಯನ್ನು ನಿಮರ್ಾಣ ಮಾಡಿಕೊಟ್ಟಿವೆ.
ಕನ್ನಡ ವಿಶ್ವವಿದ್ಯಾಲಯವು ನಾನಾ ಜ್ಞಾನಶಾಖೆಗಳಲ್ಲಿ ಕನ್ನಡ ಸರ್ವಮಾನ್ಯತೆಯನ್ನು ಗಳಿಸುತ್ತಿದೆ. ಕನ್ನಡವು ಕೆಲವೇ ಜನರ ಸೊತ್ತಾಗದೆ, ಅದು ಸಮಸ್ತ ಕನ್ನಡಿಗರನ್ನು ಒಳಗೊಂಡ ಹಾಗೂ ಎಲ್ಲಾ ಅನ್ಯಭಾಷಿಕರನ್ನೂ ಒಳಗೊಂಡು ಕನ್ನಡದಾರತಿಯು ವಿಶ್ವಕನ್ನಡದಾರತಿ ಆಗಲೆಂದು ಹೇಳಿದರು.
ನಾಡೋಜ ಗೌರವ ಪದವಿ; ವಿಶ್ವವಿದ್ಯಾನಿಲಯವು ನುಡಿಹಬ್ಬದ ವೇಳೆ ಕರ್ನಾಟಕ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜ, ಕಲೆ, ತಂತ್ರಜ್ಞಾನ, ಆರೋಗ್ಯ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಗಣನೀಯ ಸಾಧನೆ ಮಾಡಿದ ಸಾಧಕರಿಗೆ ನಾಡೋಜ ಗೌರವ ಪದವಿಯನ್ನು ನೀಡಲಾಗುತ್ತದೆ. ಕೃಷ್ಣಪ್ಪ.ಜಿ, ಎಸ್.ಷಡಾಕ್ಷರಿ ಮತ್ತು ಡಾ; ಸಿ.ಎನ್.ಮಂಜುನಾಥ್ ರವರಿಗೆ ನಾಡೋಜ ಪದವಿಯನ್ನು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ಇದುವರೆಗೆ 92 ಜನರು ನಾಡೋಜ ಪದವಿಗೆ ಭಾಜನರಾಗಿದ್ದು 3 ಜನರು ಸೇರಿ ಒಟ್ಟು 95 ಜನರಿಗೆ ನಾಡೋಜ ಪದವಿಗೆ ಭಾಜನರಾಗಿದ್ದಾರೆ.
ಘಟಿಕೋತ್ಸವದಲ್ಲಿ 321 ವಿದ್ಯಾಥರ್ಿಗಳಿಗೆ ಪದವಿ ಪ್ರದಾನ; 31 ನೇ ಘಟಿಕೋತ್ಸವದಲ್ಲಿ 321 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ ಒಂದು ಡಿ.ಲಿಟ್, 136 ಪಿ.ಹೆಚ್.ಡಿ, 23 ಎಂ.ಫಿಲ್ ಪದವಿ, 35 ಎಂ.ಎಂ.ಪಿಹೆಚ್ಡಿ (ಕನ್ನಡ ಸಾಹಿತ್ಯ) ಸಂಯೋಜಿತ ಪದವಿ, 3 ಎಂ.ಎಂ.ಪಿ.ಹೆಚ್.ಡಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ; ಸ.ಚಿ.ರಮೇಶ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವರಾದ ಡಾ; ಎ.ಸುಬ್ಬಣ್ಣ ರೈ ವಂದಿಸಿದರು.